ಬಿಎಸ್‌ವೈ ಅವಧಿಯಲ್ಲಿ ಸೊರಬಕ್ಕೆ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ: ಸಂಸದ ಬಿವೈಆರ್‌

KannadaprabhaNewsNetwork |  
Published : Jan 14, 2026, 02:45 AM IST
13ಎಎನ್‌ಟಿ1ಇಪಿ:ಆನವಟ್ಟಿ ಸಮೀಪದ ಎಣ್ಣೆಕೊಪ್ಪ-ಕಮನವಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ತಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಟಿಗಟ್ಟಲೆ ಅನುದಾನ ನೀಡಿದ್ದೇವೆ. ಈಗ ಲಕ್ಷಗಳಲ್ಲಿ ಅನುದಾನ ಒದಗಿಸುತ್ತಿದ್ದೇವೆ. ಯಡಿಯೂರಪ್ಪ ಅವಧಿಯಲ್ಲಿ ಸೊರಬ ತಾಲೂಕಿನಲ್ಲಿ ಸಮುದಾಯಗಳಿಗೆ ನೀಡಿರುವ ಅನುದಾನದಲ್ಲಿ ಇನ್ನೂ ಶೇ.50 ರಷ್ಟು ಬಳಕೆಯಾಗಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಆನವಟ್ಟಿ: ತಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಟಿಗಟ್ಟಲೆ ಅನುದಾನ ನೀಡಿದ್ದೇವೆ. ಈಗ ಲಕ್ಷಗಳಲ್ಲಿ ಅನುದಾನ ಒದಗಿಸುತ್ತಿದ್ದೇವೆ. ಯಡಿಯೂರಪ್ಪ ಅವಧಿಯಲ್ಲಿ ಸೊರಬ ತಾಲೂಕಿನಲ್ಲಿ ಸಮುದಾಯಗಳಿಗೆ ನೀಡಿರುವ ಅನುದಾನದಲ್ಲಿ ಇನ್ನೂ ಶೇ.50 ರಷ್ಟು ಬಳಕೆಯಾಗಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಮಂಗಳವಾರ ಎಣ್ಣೆಕೊಪ್ಪ-ಕಮನವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹47 ಲಕ್ಷದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.

ಈಗಾಗಲೇ ಕೇಂದ್ರದ ಮನೆ-ಮನೆ ಗಂಗೆ ಯೋಜನೆಯಲ್ಲಿ ಬಹುತೇಕ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಸಿದ್ದು, ಶರಾವತಿ ನದಿ ಕುಡಿಯುವ ನೀರಿನ ಸಂಪರ್ಕ ಅದೇ ನಲ್ಲಿಗಳಿಗೆ ಕಲ್ಪಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60 ಅನುದಾನ ನೀಡಿದೆ ಎಂದರು.

ಬಹುತೇಕ ಎಲ್ಲಾ ತಾಲೂಕುಗಳಿಗೂ ರೈಲೈ ಸಂಪರ್ಕ ಇದ್ದು, ಸೊರಬ ಹಾಗೂ ತಿರ್ಥಹಳ್ಳಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸಬೇಕಿದೆ. ನನ್ನ ಆಸೆ, ಕನಸು ಕೂಡ ಆಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ ಎಂದರು.

ಕಡ್ಲೇರ್‌ ರುದ್ರಪ್ಪ ಹಾಗೂ ಗ್ರಾಮಸ್ಥರು ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಎಣ್ಣೆಕೊಪ್ಪ, ತೆವರೆತೆಪ್ಪ, ಬೆಲವಂತಕೊಪ್ಪ ಗ್ರಾಮಗಳಲ್ಲಿ 490, ಸುತ್ತಲ ಹಳ್ಳಿಗಳಲ್ಲಿ 1000ಕ್ಕೂ ಹೆಚ್ಚು ಜಾನುವಾರುಗಳಿಗೆ, ಗ್ರಾಮಸ್ಥರ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಉಂಟಾಗುತ್ತಿದ್ದು, ಈ ಕಾನೂನು ಬಾಹಿರ ಕಲ್ಲು ಗಣಿಗಾರಿಕೆಯನ್ನು ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಶಾಸಕಿ ಭಾರತಿ ಶೆಟ್ಟಿ ಮಾತನಾಡಿ, ಯುಡಿಯೂರಪ್ಪ ಅವರು ಅಧಿಕಾರ ಹಿಡಿಯುವ ಮುನ್ನಾ ಸೊರಬವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದಿದ್ದರು, ಮಾತಿನಂತೆ ಮೂಡಿ, ಮೂಗುರು, ಕಚವಿ ಏತನೀರಾವರಿಗೆ ಭೂಮಿಪೂಜೆ ಮಾಡಿ, ಶಂಕುಸ್ಥಾಪನೆ ಮಾಡಿ, ಉದ್ಘಾಟನೆ ಮಾಡಿ, ರೈತರ ಅನುಕೂಲ ಒದಗಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ.ತಲ್ಲೂರು, ಮುಖಂಡರಾದ ವೈದ್ಯ ಎಚ್‌.ಇ.ಜ್ಞಾನೇಶ್‌, ಎ.ಎಲ್‌.ಅರವಿಂದ್‌, ಗಜಾನನ ರಾವ್‌, ಹೊನ್ನಪ್ಪ ಮಡ್ಲೂರು ಎಣ್ಣೆಕೊಪ್ಪ, ರಾಜಶೇಖರ್‌ ಗಾಳಿಪೂರ್‌, ಗುರುಗೌಡ ಬಾಸೂರು, ಪಾಣಿರಾಜಪ್ಪ, ಪ್ರಕಾಶ್‌ ತಲಕಾಲುಕೊಪ್ಪ, ಗೀತಾ ಮಲ್ಲಿಕಾರ್ಜುನ್‌, ಸುಧಾ ಶಿವಪ್ರಸಾದ್‌, ಹೊಳೆಯಮ್ಮ, ಮಂಜಪ್ಪ ಹಿತ್ತಲಮನಿ, ಬಸವರಾಜ್‌ ಗೊಗ್ಗನಾಳ್‌, ಲಿಂಗಮೂರ್ತಿ ದಡ್ಡಿಕೊಪ್ಪ, ಮಂಜು ಬೊಳೇರ್‌, ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ