- ಲಕ್ಷಾಂತರ ರು. ಡೊನೇಷನ್ ಪಡೆಯುತ್ತಿರುವ ಶಾಲೆ- ಕಾಲೇಜುಗಳು । ಬಾಕಿದಾರರ ಪಟ್ಟಿಯಲ್ಲಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಲಕ್ಷಾಂತರ ರು. ಡೊನೇಷನ್ ಪಡೆಯುತ್ತಿರುವ ಅನುದಾನ ರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ನಗರಸಭೆಯ ತೆರಿಗೆ( ಟ್ಯಾಕ್ಸ್) ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಕಳೆದ 20 ವರ್ಷಗಳಿಂದ ತಮ್ಮ ಸ್ಥಾನದಿಂದ ಕದಲಿಲ್ಲ.ಆರ್ಥಿಕ ಸಂಕಷ್ಟದಿಂದ ಬಾಕಿದಾರರ ಪಟ್ಟಿಯಲ್ಲಿ ಇವುಗಳು ಉಳಿದುಕೊಂಡಿವೆಯೇ ? ಖಂಡಿತವಾಗಿಯೂ ಇಲ್ಲ. ಆದರೆ ಈ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ತಮ್ಮ ಕ್ಯಾಂಪಸ್‌ನಲ್ಲಿ ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿವೆ. ತೆರಿಗೆಯನ್ನು ಮಾತ್ರ ಪಾವತಿಸದೆ ಬಾಕಿ ಉಳಿಸುಕೊಂಡಿವೆ.
ಚಿಕ್ಕಮಗಳೂರು ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಕೊಟ್ಟಿವೆ. ಇದರಿಂದ ಪ್ರತಿ ತಿಂಗಳು ಶಿಕ್ಷಣ ಸಂಸ್ಥೆಗಳಿಗೆ ಲಕ್ಷಾಂತರ ಆದಾಯ ಬರುತ್ತಿದೆ. ಹಾಗಿದ್ದರೂ ಕೂಡ ನಗರಸಭೆ ತೆರಿಗೆಯನ್ನು ಮಾತ್ರ ಪಾವತಿಸಿಲ್ಲ.
ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕೆಲವು ಪ್ರತಿಷ್ಟಿತ ಸಮುದಾಯಕ್ಕೆ ಸೇರಿರುವ ಶಿಕ್ಷಣ ಸಂಸ್ಥೆಗಳು ಬಾಕಿದಾರರ ಪಟ್ಟಿಯಲ್ಲಿವೆ. ಅವುಗಳ ಮೇಲೆ ಕಠಿಣ ಕ್ರಮಗಳು ಅಂದರೆ, ಶಾಲೆಗೆ ಕೊಟ್ಟಿರುವ ಮೂಲಭೂತ ಸವಲತ್ತುಗಳನ್ನು ಕಡಿತ ಗೊಳಿಸಬಹುದು. ಆದರೆ, ನಗರಸಭೆಯಿಂದ ಈ ರೀತಿ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲ. ಹಾಗಾಗಿ ಸಂಸ್ಥೆಗಳು ಟ್ಯಾಕ್ಸ್ ಕಟ್ಟದೆ ನಿರಾತಂಕವಾಗಿವೆ.
ನಗರಸಭೆ ವ್ಯಾಪ್ತಿಯ ಪ್ರತಿಯೊಂದು ಕಟ್ಟಡ ಹಾಗೂ ನಿವೇಶನಗಳ ಮಾಲೀಕರು ಪ್ರತಿ ವರ್ಷ ಟ್ಯಾಕ್ಸ್ ಕಟ್ಟಬೇಕು. ಬರೀ ಖಾಸಗಿಯವರು ಮಾತ್ರವಲ್ಲ, ಸರ್ಕಾರಿ ಇಲಾಖೆಗಳಿಗೂ ಅನ್ವಯವಾಗಲಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ಉಳಿರುವುದರಿಂದ ಟ್ಯಾಕ್ಸ್ ಪಾವತಿಗೆ ಈಗಾಗಲೇ ಹಲವು ಬಾರಿ ನಗರಸಭೆಯಿಂದ ನೋಟಿಸ್ ಜಾರಿ ನೀಡಿದ್ದರೂ ತಮ್ಮ ಧೋರಣೆಯನ್ನು ಮುಂದುವರಿಸಿಕೊಂಡು ಬರುತ್ತಿವೆ.
ಪೌರಾಯುಕ್ತರು
--- ಕೋಟ್ಸ್----ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ಉದ್ದಿಮೆ ಪರವಾನಗಿ ಹಾಗೂ ಇತರೆ ಸವಲತ್ತು ಪಡೆಯ ಬೇಕಾದರೆ ಸ್ಥಳೀಯ ಸಂಸ್ಥೆಗಳಿಂದ ಲೈಸನ್ಸ್ ಪಡೆಯುವುದು ಕಡ್ಡಾಯ. ಅದೇ ರೀತಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯಲ್ಲಿ ತಮ್ಮ ಸಂಸ್ಥೆ ನವೀಕರಣ ಮಾಡಿಕೊಳ್ಳುವ ಸಂದರ್ಭದಲ್ಲಿ ನಗರಸಭೆಗೆ ಟ್ಯಾಕ್ಸ್ ಕಟ್ಟಿರುವ ರಶೀದಿ ಇತರೆ ದಾಖಲೆಗಳಂತೆ ನೀಡುವುದು ಕಡ್ಡಾಯಗೊಳಿಸಬೇಕು.- ಜಿ. ರಘು
--ಚಿಕ್ಕಮಗಳೂರು ನಗರಸಭೆ 15 ಕೆಸಿಕೆಎಂ 3