ಜೀವನದ ದಿಕ್ಕು ತೋರಿಸುವ ಗುರುವಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಅವರ ಆಶೀರ್ವಾದ ಪಡೆಯಬೇಕು. ಶಿವನ ಸನ್ನಿಧಿಗೆ ತಲುಪುವುದಕ್ಕೂ ಗುರುವಿನ ಕೃಪೆ ಅಗತ್ಯ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಗುರು ಎಂಬ ಪದದಲ್ಲೇ ಅಪಾರ ಅರ್ಥ ಅಡಗಿದೆ. ಶಿಕ್ಷಣ ನೀಡುವ ಶಿಕ್ಷಕರು, ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಗುರುಗಳು ಹಾಗೂ ಸಮಾಜದ ಸುಧಾರಣೆಗೆ ಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸ್ವಾಮೀಜಿಗಳು ಸಮಾಜದ ಅಮೂಲ್ಯ ಸಂಪತ್ತಾಗಿದ್ದಾರೆ. ಪ್ರತಿಯೊಬ್ಬರ ಬದುಕಿನ ಯಶಸ್ಸಿನ ಹಿಂದೆ ಒಬ್ಬ ಗುರು ಅಥವಾ ಮಾರ್ಗದರ್ಶಕ ಇದ್ದೇ ಇರುತ್ತಾರೆ ಎಂದು ಹೇಳಿದರು.
ಹಾಸನ: ಗುರುಪೂರ್ಣಿಮೆಯ ಅಂಗವಾಗಿ ನಗರದ ಜವೇನಹಳ್ಳಿ ಮಠದಲ್ಲಿ ಬುಧವಾರ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ನೂರಾರು ಭಕ್ತರು ಮಠಕ್ಕೆ ಆಗಮಿಸಿ ಗುರುಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಪ್ರತಿಯೊಬ್ಬರ ಜೀವನದಲ್ಲೂ ಗುರು ಮಾರ್ಗದರ್ಶಕರಾಗಿರುತ್ತಾರೆ. ಗುಣ ಎಂದರೆ ಅಜ್ಞಾನದ ಕತ್ತಲೆ, ರುಣ ಎಂದರೆ ಅದನ್ನು ನಿವಾರಿಸುವವರು. ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕನ್ನುನೀಡುವವರೇ ಗುರುಗಳು. ಜೀವನದ ದಿಕ್ಕು ತೋರಿಸುವ ಗುರುವಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಅವರ ಆಶೀರ್ವಾದ ಪಡೆಯಬೇಕು. ಶಿವನ ಸನ್ನಿಧಿಗೆ ತಲುಪುವುದಕ್ಕೂ ಗುರುವಿನ ಕೃಪೆ ಅಗತ್ಯ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಗುರು ಎಂಬ ಪದದಲ್ಲೇ ಅಪಾರ ಅರ್ಥ ಅಡಗಿದೆ. ಶಿಕ್ಷಣ ನೀಡುವ ಶಿಕ್ಷಕರು, ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಗುರುಗಳು ಹಾಗೂ ಸಮಾಜದ ಸುಧಾರಣೆಗೆ ಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸ್ವಾಮೀಜಿಗಳು ಸಮಾಜದ ಅಮೂಲ್ಯ ಸಂಪತ್ತಾಗಿದ್ದಾರೆ. ಪ್ರತಿಯೊಬ್ಬರ ಬದುಕಿನ ಯಶಸ್ಸಿನ ಹಿಂದೆ ಒಬ್ಬ ಗುರು ಅಥವಾ ಮಾರ್ಗದರ್ಶಕ ಇದ್ದೇ ಇರುತ್ತಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಶ್ರೀ ಜವೇನಹಳ್ಳಿ ಮಠದ ಅಧ್ಯಕ್ಷ ಉಮೇಶ್, ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪುನೀತ್ ಪಟೇಲ್, ನಿರ್ದೇಶಕ ರಾಜಶೇಖರ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲೇಶ್, ನಗರಸಭೆಯ ಮಾಜಿ ಸದಸ್ಯ ಎಚ್. ಬಿ. ಗೋಪಾಲ್, ನಿವೃತ್ತ ಸಾರಿಗೆ ಇಲಾಖೆಯ ನೌಕರ ಪಾಲಾಕ್ಷ, ಮಠದ ನಿರ್ದೇಶಕ ಮಂಜಣ್ಣ, ಶೇಖರ್, ಪ್ರಸನ್ನ, ಅಭಿಷೇಕ್, ಮಹಂತೇಶ್, ವಿಜಯಕುಮಾರ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.