ಮಂಗಳೂರಿಗೆ ಆಗಮಿಸಿದ ಕಚ್ಚಾತೈಲ ಹಡಗು

KannadaprabhaNewsNetwork |  
Published : Mar 22, 2026, 02:45 AM IST
ಇರಾನ್ | Kannada Prabha

ಸಾರಾಂಶ

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಛಾ ತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ.

ಮಂಗಳೂರು: ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಛಾ ತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ.ಅಕ್ವಾ ಟೈಟಾನ್‌ ಎಂಬ ಹೆಸರಿನ ಈ ಸರಕು ಹಡಗು ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡಿಕೊಂಡಿದ್ದು, ಚೀನಾಕ್ಕೆ ತೆರಳುವ ಗುರಿ ಹೊಂದಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಆಗ್ನೇಯ ಏಷ್ಯಾದ ಜಲ ಪ್ರದೇಶಕ್ಕೆ ಬರುತ್ತಿದ್ದಂತೆ ಈ ಹಡಗಿನ ಪಥ ಬದಲಿಸಲಾಗಿದ್ದು, ಮಂಗಳೂರು ತಲುಪಿದೆ.ಆಕ್ವಾ ಟೈಟಾನ್ ಹಡಗಿನಲ್ಲಿ 1.1ರಿಂದ 2 ಲಕ್ಷ ಟನ್‌ನಷ್ಟು ಕಚ್ಛಾ ತೈಲ ಇದ್ದು, ಮಂಗಳೂರು ಬಂದರಿಗಿಂತ ಸ್ವಲ್ಪ ದೂರದಲ್ಲಿ ಸಮುದ್ರ ಮಧ್ಯದಿಂದ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕಕ್ಕೆ ಪೈಪ್‌ಲೈನ್ ಮೂಲಕ ಈ ತೈಲವನ್ನು ಅನ್‌ಲೋಡ್‌ ಮಾಡಲಾಗುತ್ತದೆ. ಭಾನುವಾರ ಬೆಳಗ್ಗೆ ಈ ಪ್ರಕ್ರಿಯೆ ಆರಂಭಿಸಲಾಗುತ್ತದೆ, ಮುಗಿಯಲು ಒಂದು- ಒಂದೂವರೆ ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಇಂಧನ ಬೇಡಿಕೆ ಪೂರೈಸುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೈವ-ವೈಷ್ಣವರ ಅಪರೂಪದ ಸಂಗಮ ಕ್ಷೇತ್ರ
ಮೂಲ್ಕಿಪರಿಸರದಲ್ಲಿ ಈದ್ಉಲ್‌ ಫಿತ‌ರ್ ಆಚರಣೆ