ಮೂಲ್ಕಿ ಪರಿಸರದಲ್ಲಿ ಈದ್ ಉಲ್ ಫಿತರ್ ಆಚರಣೆ ಪ್ರಯುಕ್ತ ಬೆಳಗ್ಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ಈದ್ ಉಲ್ ಫಿತರ್ ಆಚರಣೆ ಪ್ರಯುಕ್ತ ಬೆಳಗ್ಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮೂಲ್ಕಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಝೀ ತೋಡಾರ್ ಹಾಗೂ ಕಾರ್ನಾಡ್ ಮಸೀದಿಯ ಧರ್ಮಗುರುಗಳಾದ ರಿಯಾಜ್ ಫೈಝಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಮಸೀದಿ ಗೌರವಾಧ್ಯಕ್ಷ ಇನಾಯತ್ ಆಲಿ, ಅಧ್ಯಕ್ಷ ಸೊಹೈಲ್ ಹೈದರ್, ಉಪಾಧ್ಯಕ್ಷ ಪುತ್ತುಭಾವ, ಕೋಶಾಧಿಕಾರಿ ಇಕ್ಬಾಲ್ ಅಹ್ಮದ್, ಎಂ.ಕೆ. ಹಸೈನ್ ಕಾರ್ನಾಡ್, ಲಿಯಾಕತ್ ಆಲಿ, ಫಾರೂಕ್ ಹಾಜಿ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.