ಕನ್ನಡಪ್ರಭ ವಾರ್ತೆ ಪಾಂಡವಪುರ
ಎರಡನೇ ದಿನ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜ್ ಪುಟ್ಟರಾಜು ಅವರು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು. ಫೈನಲ್ ಪಂದ್ಯಾವಳಿಯಲ್ಲಿ ಅತಿಥೇಯ ಬನ್ನಂಗಾಡಿ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಮಜ್ಜಿಗೆಪುರ ಗ್ರಾಮಗಳ ತಂಡಗಳು ಎದುರಾದವು.
ಮಜ್ಜಿಗೆಪುರ ಗ್ರಾಮದ ತಂಡವು ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನಗಳಿಸಿತು. ಅತಿಥೇಯ ಬನ್ನಂಗಾಡಿ ತಂಡ ದ್ವಿತೀಯ ಸ್ಥಾನಪಡೆದು ಆಕರ್ಷಕ ಟ್ರೋಫಿಯೊಂದಿಗೆ 22 ಸಾವಿರ ನಗದು ಹಣ ಬಹುಮಾನ ಪಡೆದರು. ಮೈಸೂರಿನ ಜಾಲಿಬಾಯ್ಸ್ ತಂಡ ತೃತೀಯ ಸ್ಥಾನ ಪಡೆದರು.ಜೆಡಿಎಸ್ ಯುವ ಮುಖಂಡ ಸಿ.ಪಿ.ಶಿವರಾಜು ಪುಟ್ಟರಾಜು ಮಾತನಾಡಿ, ಬನ್ನಂಗಾಡಿ ಗ್ರಾಮದ ಯುವಕರು ಸಿಎಸ್ಪಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಕ್ರೀಡೆಗೆ ಉತ್ತೇಜನೆ ನೀಡುತ್ತಿದ್ದಾರೆ. ಯುವ ಸಮುದಾಯ ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ವೇಳೆ ತಾಪಂ ಮಾಜಿ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ಬಿ.ಎಸ್.ಶ್ರೀನಿವಾಸ್, ಬಿ.ಎಚ್.ಪ್ರಸನ್ನ, ಮಹೇಂದ್ರ, ಬಿ.ಪಿ.ಸಂತೋಷ, ಆಕಾಶ್, ರಕ್ಷಿತ್, ಸಚ್ಚಿನ್, ಗೌತಮ್, ಪವನ್ ಸೇರಿದಂತೆ ಹಲವರು ಇದ್ದರು.