ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್‌ ಸ್ಥಗಿತ

KannadaprabhaNewsNetwork |  
Published : Feb 21, 2026, 02:00 AM IST
CT Scan

ಸಾರಾಂಶ

‘ಕೃಷ್ಣ ಡಯಾಗ್ನೋಸ್ಟಿಕ್ ಲಿಮಿಟೆಡ್‌’ಗೆ ಸರ್ಕಾರ ₹140 ಕೋಟಿ ಬಾಕಿ ಉಳಿಸಿಕೊಂಡ ಕಾರಣ ಯಾದಗಿರಿ, ಚಿತ್ರದುರ್ಗ, ಯಾದಗಿರಿ, ಕೋಲಾರ, ಕಾರವಾರ, ಹಾವೇರಿ ಸೇರಿ ರಾಜ್ಯದ 12 ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.

 ಬೆಂಗಳೂರು :  ‘ಕೃಷ್ಣ ಡಯಾಗ್ನೋಸ್ಟಿಕ್ ಲಿಮಿಟೆಡ್‌’ಗೆ ಸರ್ಕಾರ ₹140 ಕೋಟಿ ಬಾಕಿ ಉಳಿಸಿಕೊಂಡ ಕಾರಣ ಯಾದಗಿರಿ, ಚಿತ್ರದುರ್ಗ, ಯಾದಗಿರಿ, ಕೋಲಾರ, ಕಾರವಾರ, ಹಾವೇರಿ ಸೇರಿ ರಾಜ್ಯದ 12 ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಯನ್ನು ಕೃಷ್ಣ ಡಯಾಗ್ನೋಸ್ಟಿಕ್ ಲಿಮಿಟೆಡ್ ನಿರ್ವಹಿಸುತ್ತಿದ್ದರೂ, ಆರೋಗ್ಯ ಇಲಾಖೆಯಿಂದ ₹140 ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಕಾರಣ ಹಲವು ಜಿಲ್ಲಾಸ್ಪತ್ರೆಗಳಲ್ಲಿ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಬಡವರಿಗಾಗಿ, ಬಿಪಿಎಲ್‌ ಕಾರ್ಡ್ ಹೊಂದಿರುವ ರೋಗಿಗಳಿಗಾಗಿ ಉಚಿತವಾಗಿ ಆರಂಭಿಸಲಾಗಿದ್ದ ಸೇವೆ ಬಂದ್ ಆಗುತ್ತಿದ್ದಂತೆ, ನೂರಾರು ರೋಗಿಗಳು ಆಸ್ಪತ್ರೆಗಳ ಮುಂದೆ ಅಸಹಾಯಕರಾಗಿ ನಿಂತಿದ್ದಾರೆ.

ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಸಂಪೂರ್ಣ ಸ್ಥಗಿತ

ಹಾವೇರಿ, ಚಿತ್ರದುರ್ಗ, ಧಾರವಾಡ, ಕೋಲಾರ, ಕಾರವಾರ ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಬಿಪಿಎಲ್‌ ಕಾರ್ಡ್ ತೋರಿಸಿದರೂ, ನೀವೇ ಹಣ ಕೊಟ್ಟು ಮಾಡಿಸಿಕೊಳ್ಳಿ ಎನ್ನುತ್ತಿದ್ದಾರೆ. ಹಣ ಪಾವತಿಸುವವರಿಗೆ ಮಾತ್ರ ಎಂಆರ್‌ಐ ಸ್ಕ್ಯಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಸಿಟಿ ಸ್ಕ್ಯಾನ್‌ಗೆ ₹2181 ಮತ್ತು ಎಂಆರ್‌ಐ ಸ್ಕ್ಯಾನ್‌ಗೆ ₹4221 ವರೆಗೆ ನೀಡಿ ಸ್ಕ್ಯಾನ್ ಮಾಡಿಸಿಕೊಳ್ಳಬೇಕಿದೆ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಹಳೇ ಜಿಲ್ಲಾಸ್ಪತ್ರೆ), ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನಿಂಗ್ ಸೇವೆ ಸ್ಥಗಿತವಾಗಿದ್ದು, ರೋಗಿಗಳು ಪರದಾಡುವಂತಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 250 ಸ್ಕ್ಯಾನಿಂಗ್ ಆಗುತ್ತಿದ್ದವು ಎಂದು ಜಿಲ್ಲಾ ಸರ್ಜನ್ ಡಾ.ಆಫ್ರಿನ್ ರಿಜ್ವಾನ್‌ ತಿಳಿಸಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೊರಗಡೆ 2,200 ರು.ಕೊಟ್ಟು ಸ್ಕ್ಯಾನ್ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅನಾರೋಗ್ಯದ ಸಮಸ್ಯೆಯಿಂದ ಸ್ಕ್ಯಾನ್‌ ಮಾಡಿಸಲು ಬಂದಿದ್ದೇವು. ಆದರೆ, ಆಸ್ಪತ್ರೆಗಳ ಸಿಬ್ಬಂದಿ ಸರ್ಕಾರ ಹಣ ಕೊಡ್ತಿಲ್ಲ, ನೀವೇ ಹಣ ಕೊಟ್ಟು ಸ್ಕ್ಯಾನ್‌ ಮಾಡಿಸಿ ಎಂದು ಹೇಳುತ್ತಿದ್ದಾರೆ. ಬಡವರು ಎಲ್ಲಿಂದ ಹಣ ತರಬೇಕು?, ಅಷ್ಟಿದ್ದರೆ ನಾವೇಕೆ ಜಿಲ್ಲಾಸ್ಪತ್ರೆಗೆ ಬರಬೇಕು ಎಂದು ರೋಗಿಗಳು ಅಸಮಾಧಾನ ಹೊರಹಾಕಿದ್ದಾರೆ.

ಆಸ್ಪತ್ರೆಗೆ ಬಂದ ರೋಗಿಗಳು ಸ್ಕ್ಯಾನ್‌ ಸೆಂಟರ್ ಬಳಿ ದಿನಗಟ್ಟಲೆ ಕಾದು ಕುಳಿತುಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.----

ಸಮಸ್ಯೆಗೆ ಶೀಘ್ರ ಪರಿಹಾರ

ಹಾವೇರಿ ಸೇರಿದಂತೆ ರಾಜ್ಯದ 12 ಜಿಲ್ಲಾಸ್ಪತ್ರೆಗಳಲ್ಲಿ ಕೃಷ್ಣಾ ಸಂಸ್ಥೆಯವರು ಸ್ಕ್ಯಾನಿಂಗ್ ಬಂದ್ ಮಾಡಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಹಾವೇರಿ ಮೆಡಿಕಲ್ ಕಾಲೇಜ್‌ನಿಂದಲೇ ಪ್ರತ್ಯೇಕ ಎಂಆರ್‌ಐ, ಸಿಟಿ ಸ್ಕ್ಯಾನ್‌ ಸೆಂಟರ್ ಆರಂಭಿಸುವ ಕುರಿತು ಪ್ರಯತ್ನ ನಡೆದಿದೆ.

-ಎಂ.ವಿ.ಪ್ರದೀಪಕುಮಾರ್, ಹಿಮ್ಸ್ ಡೀನ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಲೈಬ್ರರಿ ಮೇಲ್ವಿಚಾರಕರಿಗೆ ವರ್ಷದಿಂದ ಅರ್ಧ ವೇತನ!
ಕುರಿಗಾಹಿ ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು : ಸಿದ್ದು ಕಿಡಿ