ರಾಷ್ಟ್ರಮಟ್ಟದ ಶ್ರೇಯಾಂಕದಲ್ಲಿ ಸಿಯುಕೆಗೆ 36ನೇ ಸ್ಥಾನ

KannadaprabhaNewsNetwork |  
Published : Sep 09, 2026, 01:15 AM IST
ಫೋಟೋ- ಕಲಬರಗಿ ಸೇಂಟ್ರಲ್‌ ಯೂನಿವಸ್ರಿಟ | Kannada Prabha

ಸಾರಾಂಶ

ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯವು (ಸಿಯುಕೆ) ಪ್ರತಿಷ್ಠಿತ ಇಂಡಿಯಾ ಟುಡೇ ಶ್ರೇಯಾಂಕ 2026ರ ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 36ನೇ ಸ್ಥಾನ ಪಡೆದು ಗಮನಾರ್ಹ ಸಾಧನೆಗೈದಿದೆ. ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯವು ಶ್ರೇಯಾಂಕದಲ್ಲಿ ಸ್ಥಿರ ಪ್ರಗತಿ ದಾಖಲಿಸಿದ್ದು, 2024ರಲ್ಲಿ 38ನೇ ಸ್ಥಾನ, 2025ರಲ್ಲಿ 39ನೇ ಸ್ಥಾನ ಪಡೆದಿದ್ದ ಸಿಯುಕೆ, ಇದೀಗ 2026ರಲ್ಲಿ 36ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ.

ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯವು (ಸಿಯುಕೆ) ಪ್ರತಿಷ್ಠಿತ ಇಂಡಿಯಾ ಟುಡೇ ಶ್ರೇಯಾಂಕ 2026ರ ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 36ನೇ ಸ್ಥಾನ ಪಡೆದು ಗಮನಾರ್ಹ ಸಾಧನೆಗೈದಿದೆ. ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯವು ಶ್ರೇಯಾಂಕದಲ್ಲಿ ಸ್ಥಿರ ಪ್ರಗತಿ ದಾಖಲಿಸಿದ್ದು, 2024ರಲ್ಲಿ 38ನೇ ಸ್ಥಾನ, 2025ರಲ್ಲಿ 39ನೇ ಸ್ಥಾನ ಪಡೆದಿದ್ದ ಸಿಯುಕೆ, ಇದೀಗ 2026ರಲ್ಲಿ 36ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಇಂಡಿಯಾ ಟುಡೇ ಗ್ರೂಪ್ ನಡೆಸುವ ವಾರ್ಷಿಕ ಉನ್ನತ ಶಿಕ್ಷಣ ಸಮೀಕ್ಷೆಯಲ್ಲಿ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆಯನ್ನು ವಿವಿಧ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಯಿತು. ವಿಶ್ವವಿದ್ಯಾಲಯದ ಪ್ರತಿಷ್ಠೆ ಮತ್ತು ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಶ್ರೇಷ್ಠತೆ, ಮೂಲಸೌಕರ್ಯ ಮತ್ತು ವ್ಯಕ್ತಿತ್ವ ಹಾಗೂ ನಾಯಕತ್ವ ವಿಕಸನ, ವೃತ್ತಿಯ ಪ್ರಗತಿ ಮತ್ತು ಉದ್ಯೋಗಾವಕಾಶಗಳು ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಯಿತು.

ಸಿಯುಕೆಯ ಸುಧಾರಿತ ಶ್ರೇಯಾಂಕವು ಶೈಕ್ಷಣಿಕ ಗುಣಮಟ್ಟ, ಸಂಶೋಧನೆ, ನಾವಿನ್ಯತೆ, ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು ಹಾಗೂ ಸಾಂಸ್ಥಿಕ ಬೆಳವಣಿಗೆಗೆ ವಿಶ್ವವಿದ್ಯಾಲಯ ನೀಡುತ್ತಿರುವ ನಿರಂತರ ಆದ್ಯತೆ ಪ್ರತಿಬಿಂಬಿಸುತ್ತದೆ. ಬೋಧನೆ ಮತ್ತು ಕಲಿಕಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಸಂಶೋಧನೆ ಹಾಗೂ ನಾವಿನ್ಯತೆಗೆ ಉತ್ತೇಜನ ನೀಡುವ ಸಿಯುಕೆಯ ನಿರಂತರ ಪ್ರಯತ್ನಗಳಿಗೆ ಈ ಸಾಧನೆ ಮತ್ತಷ್ಟು ಪ್ರೇರಣೆ ನೀಡಿದೆ. ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಸಿಯುಕೆಯ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಸಾಧನೆ ಮಹತ್ವದ ಉತ್ತೇಜನ ನೀಡಿದೆ.

ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಎಲ್ಲ ಪಾಲುದಾರರನ್ನು ಅಭಿನಂದಿಸಿದರು. ಇದು ವಿಶ್ವವಿದ್ಯಾಲಯದ ಸಾಮೂಹಿಕ ಪ್ರಯತ್ನ, ಸಮರ್ಪಣೆ ಮತ್ತು ಬದ್ಧತೆಯ ಫಲವಾಗಿದೆ. ಈ ಸಾಧನೆಯು ನಮ್ಮ ವಿ.ವಿಗೆ ಹೆಮ್ಮೆಯ ಸಂಗತಿಯಾಗಿದ್ದು, ಶೈಕ್ಷಣಿಕ ಶ್ರೇಷ್ಠತೆಯತ್ತ ನಾವು ನಿರಂತರವಾಗಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿ, ಇದು ತಂಡದ ಸಾಮೂಹಿಕ ಪ್ರಯತ್ನ. ಸಾಂಸ್ಥಿಕ ಬದ್ಧತೆ ಹಾಗೂ ಶ್ರೇಷ್ಠತೆಯತ್ತ ನಿರಂತರ ಪ್ರಯತ್ನಗಳ ಪ್ರತಿಫಲವಾಗಿದೆ. ಸುಧಾರಿತ ಶ್ರೇಯಾಂಕವು ಸಿಯುಕೆಯ ಶೈಕ್ಷಣಿಕ ಶ್ರೇಷ್ಠತೆ, ಸಾಂಸ್ಥಿಕ ಉತ್ಕೃಷ್ಟತೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವತ್ತ ಸಾಗುತ್ತಿರುವ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು.ಇಂಡಿಯಾ ಟುಡೇ ಶ್ರೇಯಾಂಕಕ್ಕಾಗಿ ವಿಶ್ವವಿದ್ಯಾಲಯದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಪರಿಶೀಲಿಸಿ, ಕ್ರೋಢೀಕರಿಸಿ ಹಾಗೂ ಇಂಡಿಯಾ ಟುಡೇ ಶ್ರೇಯಾಂಕ ಸಂಸ್ಥೆಗೆ ಸಮರ್ಪಕವಾಗಿ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿ.ವಿ.ಯ ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ. ಅಮರೇಂದ್ರ ಮತ್ಸ ಹಾಗೂ ವಿಶ್ವವಿದ್ಯಾಲಯದ ಶ್ರೇಯಾಂಕ ಸಂಯೋಜಕ ಡಾ. ಗುರುರಾಜ್ ಮುಕರಂಬಿ ಅವರ ಸಮರ್ಪಿತ ಪ್ರಯತ್ನಗಳನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಶ್ಲಾಘಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ; ಜಾಗೃತಿ
ಬಗರ್‌ಹುಕುಂ ಜಮೀನು ವಶ ವಿರೋಧಿಸಿ ರೈತರ ಪ್ರತಿರೋಧ ಸಮಾವೇಶ