ಸೇವೆಯ ಮೂಲಕ ಕಾರುಣ್ಯ ಬೆಳೆಸಿಕೊಳ್ಳಿ

KannadaprabhaNewsNetwork |  
Published : May 11, 2025, 11:52 PM IST
ಸಿಕೆಬಿ-3ತಾಲ್ಲೂಕಿನ ಪೆರೆಸಂದ್ರ ಗ್ರಾಮದ ಶಾಂತ ಆರೋಗ್ಯ ಹಾಗೂ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಹಾಗೂ ಪ್ರಮಾಣವಚನ ಬೋಧನೆ ಕಾರ್ಯಕ್ರಮವನ್ನು ಡಾ. ಪ್ರೀತಿ ಸುಧಾಕರ್ ಉಧ್ಘಾಟಿಸಿದರು | Kannada Prabha

ಸಾರಾಂಶ

ಜಗತ್ತಿನ ಶುಶ್ರೂಷಕ ಸೇವಾ ಕ್ಷೇತ್ರದಲ್ಲಿ ನರ್ಸಿಂಗ್ ಒಂದು ಅಪೂರ್ವ ಸೇವೆಯಾಗಿದ್ದು ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾಗುಣ ಮತ್ತು ಸ್ಫೂರ್ತಿಯನ್ನು ಶುಶ್ರೂಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಮಹತ್ವದ ಕಾರ್ಯದ ಯಶಸ್ವಿಗೆ ದೀಪ ಹೊತ್ತಿಸುವುದು ನಮ್ಮ ಪರಂಪರೆಯ ಪ್ರತೀಕವಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜ್ಞಾನ, ಕೌಶಲ್ಯ ಸಾಮರ್ಥ್ಯಗಳು ಹಾಗೂ ಪರಿಣಿತಿಯನ್ನು ಶಾಲೆಗಳಲ್ಲಿ ಕಲಿಯಬಹುದು. ಆದರೆ ಕರುಣೆ, ಸಹನೆ ಮತ್ತು ಬದ್ಧತೆಗಳನ್ನು ನಿಸ್ವಾರ್ಥ ಸೇವೆಯ ಮೂಲಕವೇ ಕಟ್ಟಿಕೊಳ್ಳಬೇಕೆಂದು ಶಾಂತ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ, ಡಾ. ಪ್ರೀತಿ ಸುಧಾಕರ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಪೆರೆಸಂದ್ರ ಗ್ರಾಮದ ಶಾಂತ ಆರೋಗ್ಯ ಹಾಗೂ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಹಾಗೂ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ಸೇವಾ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ವಿಶ್ವಬಂಧುತ್ವದ ಪ್ರತೀಕ

ಜಗತ್ತಿನ ಶುಶ್ರೂಷಕ ಸೇವಾ ಕ್ಷೇತ್ರದಲ್ಲಿ ನರ್ಸಿಂಗ್ ಒಂದು ಅಪೂರ್ವ ಸೇವೆಯಾಗಿದ್ದು ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾಗುಣ ಮತ್ತು ಸ್ಫೂರ್ತಿಯನ್ನು ಶುಶ್ರೂಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಮಹತ್ವದ ಕಾರ್ಯದ ಯಶಸ್ವಿಗೆ ದೀಪ ಹೊತ್ತಿಸುವುದು ನಮ್ಮ ಪರಂಪರೆಯ ಪ್ರತೀಕವಾಗಿದೆ. ಈ ದೀಪದ ಪ್ರಕಾಶಮಾನವು ನಿಮ್ಮ ಶುಶ್ರೂಷಕ ವೃತ್ತಿಯ ದಾರಿದೀಪವಾಗಲಿ ಎಂದರು.

ಭಾರತೀಯ ನರ್ಸ್ ಗಳಿಗೆ ಜಗತ್ತಿನಲ್ಲಿ ದೊಡ್ಡ ಬೇಡಿಕೆ ಇದ್ದು ನೀವು ಪ್ಲಾರೆಂಟ್ ಫೈಟಿಂಗ್ ಅವರ ಜೀವನ ,ಸೇವೆ ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡು ಬೆಳೆದರೆ ರೋಗಿಗಳ ಆರೈಕೆ, ಚಿಕಿತ್ಸೆ ಯ ಜೊತೆಗೆ ನಿಮ್ಮ ಜವಾಬ್ದಾರಿ ಹಾಗೂ ಉತ್ತರದಾಯಿ ಗುಣಗಳನ್ನು ಬೆಳೆಸಿಕೊಂಡರೆ ಮಾತ್ರ ನೀವು ಈ ಕ್ಷೇತ್ರದ ಸಮರ್ಥ ವೃತ್ತಿಪರರಾಗುತ್ತೀರಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜೀವನ್ ಮತ್ತು ಅನನ್ಯ ಆಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕರಾದ ಡಾ.ಐಎಸ್ ರಾವ್. ಲಲಿತಾ ಮನೋಹರನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಲಾವಣ್ಯ ಕುಮಾರಿ ಹಾಗೂ ಜೈನ್ ಮಿಷನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಯು ಜೈನ್ ಶಾಂತ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿ ರಂಗಪ್ಪ, ಜೈನ್ ಮಿಷನ್ಆಸ್ಪತ್ರೆಯ ವ್ಯವಸ್ಥಾಪಕ ಪ್ರಕಾಶ್ ಜೈನ್, ನರ್ಸಿಂಗ್ ಅಧೀಕ್ಷಕಿ ಮೇರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ