ಕನ್ನಡಪ್ರಭ ವಾರ್ತೆ ರೋಣ
ಬುಧವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ರಾಜೀವಗಾಂಧಿ ಬಿಇಡಿ ಮಹಾವಿದ್ಯಾಲಯ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದರು.
ನಾವು ಎಷ್ಟೊಂದು ಕೋರ್ಸ್ ಮಾಡಿದ್ದೆವೆ, ಡಿಗ್ರಿ ಮುಗಿಸಿದ್ದೇವೆ ಎಂಬುದು ಮುಖ್ಯವಾಗುವುದಿಲ್ಲ, ನಮ್ಮಲ್ಲಿನ ಸಂಸ್ಕಾರ, ಮಾನವೀಯ ಮೌಲ್ಯಗಳು, ನೈತಿಕತೆ ಪ್ರಮುಖವಾಗಿ ಎದ್ದು ಕಾಣುತ್ತವೆ. ಆದ್ದರಿಂದ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಬೇಕು. ಮನೆಯ ಮಗುವಿಗೆ ಮೊದಲ ಪಾಠ ಶಾಲೆ, ಮನೆಯಿಂದಲೇ ಉತ್ತಮ ಸಂಸ್ಕಾರ, ನೈತಿಕ ಪಾಠ ಪ್ರಾರಂಭವಾಗಬೇಕು. ಬಳಿಕ ಗುರುವಿನ ಮಾರ್ಗದರ್ಶನವಿದ್ದಲ್ಲಿ ಬದುಕು ಸನ್ಮಾರ್ಗದತ್ತ ಸಾಗುವುದು. ಸಮಾಜಕ್ಕೆ ಒಳಿತನ್ನು ಬಯಸುವ ಮನಸ್ಥಿತಿ ನಿರ್ಮಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ಧನ್ನೂರ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಬದಲಾವಣೆಯಾಗುತ್ತಿದೆ. ಅಂಕ ಪಡೆಯುವುದು, ನೌಕರಿ ಪಡೆಯುವುದೇ ಶಿಕ್ಷಣವಾಗುತ್ತಿದೆ. ನೈತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಬಿ.ಎಫ್. ಚೇಗರಡ್ಡಿ, ಪ್ರಾಚಾರ್ಯ ಡಾ. ವೈ.ಎನ್. ಪಾಪಣ್ಣವರ, ಎಚ್.ಆರ್. ದೊಡ್ಡಮನಿ, ಶರಣು ಗೋದಿ, ಜಿ.ಎನ್. ನಾಯಕ, ಜಿ.ಎ. ವೀರಾಪೂರ, ಮೀನಾಕ್ಷಿ ಗುಂಡಗೋಪರಮಠ, ಎಸ್.ಎಸ್. ಗೌಡರ, ಮೌನೇಶ ಬಡಿಗೇರ, ರವಿಚಂದ್ರ ಗುರಿಕಾರ, ಕೀರ್ತಿ ಗಾಣಿಗೇರ ಮುಂತಾದವರಿದ್ದರು. ಎಸ್.ಆರ್. ಐಹೊಳ್ಳಿ ಸ್ವಾಗತಿಸಿ, ಮಧು ಗಾಣಿಗೇರ, ಕುಮಾರ ಚೌವ್ಹಾನ ನಿರೂಪಿಸಿದರು. ರವಿಚಂದ್ರ ಗುರಿಕಾರ ವಂದಿಸಿದರು.