ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಚಿಮ್ಮಡ ಗ್ರಾಮದ ಬಾಹುಸಾಹೇಬರ ಮಠದಲ್ಲಿ ಆಯೋಜಿಸಲಾಗಿದ್ದ ಶಾಂತಿಪಾಲನಾ, ಜಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕ್ರತಿಯನ್ನು ವಿದೇಶಿಗರು ಅಳವಡಿಸಿಕೊಂಡು ಆರೋಗ್ಯಯುತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ನಾವೂ ವಿದೇಶಿಗರಿಗೂ ಬೇಡವಾದ ಪದ್ಧತಿಗಳನ್ನು ಅಳವಡಿಸಿಕೊಂಡು ಎಲ್ಲ ರೀತಿಗಳಿಂದಲೂ ಹಾನಿ ಅನುಭವಿಸುತಿದ್ದೇವೆ ಎಂದ ಅವರು ಮುಂಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ ಹಬ್ಬಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಶಾಂತರೀತಿಯಲ್ಲಿ ಆಚರಿಸಲು ಮನವಿ ಮಾಡಿದರು. ಗಣೇಶೋತ್ಸವಕ್ಕೆ ಹಲವು ಇಲಾಖೆಗಳ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಠಾಣೆಯಲ್ಲಿಯೇ ಪ್ರಾರಂಭಿಸಲಿದ್ದು, ಇದರ ಪ್ರಯೋಜನ ಪಡೆಯಬೇಕೆಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ ಮಾತನಾಡಿ, ಗ್ರಾಮದಲ್ಲಿ ನಡೆಯುವ ಯಾವುದೇ ಉತ್ಸವಗಳಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳುವ ಮೂಲಕ ಶಾಂತಿ ಕಾಪಾಡಿಕೊಳ್ಳುತ್ತೇವೆಂದರು. ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪಾ ಪೂಜಾರಿ, ಇಲಾಹಿ ಜಮಖಂಡಿ ಮಾತನಾಡಿದರು.ಗ್ರಾಮದ ಪ್ರಮುಖರಾದ ಪುಂಡಲೀಕಪ್ಪ ಪೂಜಾರಿ, ಬಾಳಪ್ಪಾ ಹಳಿಂಗಳಿ, ರಾಮಣ್ಣ ಬಗನಾಳ, ಅಣ್ಣಪ್ಪಗೌಡ ಪಾಟೀಲ, ಬಸವರಾಜ ಕುಂಚನೂರ, ಬಿ.ಎಸ್.ಪಾಟೀಲ, ಗುರಪ್ಪಾ ಬಳಗಾರ, ರಾಚಯ್ಯ ಮಠಪತಿ, ಗ್ರಾ.ಪಂ ಸದಸ್ಯ ಮನೋಜ ಹಟ್ಟಿ, ಮಹಾಲಿಂಗ ಮಾಯಣ್ಣವರ ಸೇರಿದಂತೆ ಎಲ್ಲ ಸಮಾಜದ ಮುಖಂಡರು ಗಣೇಶೋತ್ಸವ ಸೇವಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
--
31 ಎಂ.ಎಲ್.ಪಿ 4