ಯುವಜನತೆ ದೇಶಪ್ರೇಮ ಬೆಳೆಸಿಕೊಳ್ಳಿ; ಕಲ್ಮಠದ ಗುರುಸಿದ್ಧ ಸ್ವಾಮೀಜಿ

KannadaprabhaNewsNetwork |  
Published : Aug 14, 2026, 01:45 AM IST
ಚಿತ್ರ 13ಜಿಟಿಎಲ್1ಗುತ್ತಲ ಪಟ್ಟಣದಲ್ಲಿ ಯೂಥ್ ಫಾರ್ ನೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಹರ್ ಘರ್ ತಿರಂಗಾ” ಯಾತ್ರೆಗೆ ಚಾಲನೆ ನೀಡಿದ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮಿಜಿ. | Kannada Prabha

ಸಾರಾಂಶ

ಯುವಜನತೆ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವ, ದೇಶಪ್ರೇಮ, ದೇಶಕ್ಕಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಬಲಿದಾನ ಮಾಡಿದ ಹೋರಾಟಗಾರರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಗುತ್ತಲ: ಯುವಜನತೆ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವ, ದೇಶಪ್ರೇಮ, ದೇಶಕ್ಕಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಬಲಿದಾನ ಮಾಡಿದ ಹೋರಾಟಗಾರರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಯೂಥ್ ಫಾರ್ ನೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಹರ್ ಘರ್ ತಿರಂಗಾ” ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ದೇಶದ ಏಕತೆ, ಅಖಂಡತೆ ಹಾಗೂ ದೇಶಾಭಿಮಾನ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಯಾತ್ರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆ ಹಾಗೂ ಯುವಕರು ಪಾಲ್ಗೊಂಡಿರುವದು ಶ್ಲಾಘನೀಯ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಧ್ವಜಗಳಿಗೆ ಗೌರವ ನೀಡಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿದ್ಧರಾಜ ಕಲಕೋಟಿ ಮಾತನಾಡಿ, ಭಾರತದ ಪ್ರತಿಯೊಬ್ಬ ಪ್ರಜೆಯು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರೋತ್ಸಾಹಿಸುವ ಮೂಲಕ ದೇಶಭಕ್ತಿ ಹಾಗೂ ಹೆಮ್ಮೆಯ ಭಾವನೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ. ಅದರಂತೆ ಹರ್‌ಘರ್ ತಿರಂಗಾ ಅಭಿಯಾನ ಏಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಮೂಹಿಕ ಸಂಕಲ್ಪವನ್ನು ಸಂಕೇತಿಸುತ್ತದೆ. ನಮ್ಮ ದೇಶದ ಸಾರ್ವಭೌಮತ್ವ ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಮಾಡಿದ ತ್ಯಾಗಗಳ ಸಂಕೇತವಾಗಿ ರಾಷ್ಟ್ರಧ್ವಜದ ಮಹತ್ವವನ್ನು ಬಲಪಡಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ ಎಂದರು.

ಪಟ್ಟಣದ ಬೀರೇಶ್ವರ ದೇವಸ್ಥಾನದಿಂದ ಹೊರಟ ಹರ್ ಘರ ತಿರಂಗಾ ಯಾತ್ರೆ ಬಸ್ ನಿಲ್ದಾಣ, ಅರಳಿಕಟ್ಟಿ, ಎಲೆ ಪೇಟೆ, ವೀರಭದ್ರೇಶ್ವರ ದೇವಸ್ಥಾನ, ಹೇಮಗಿರಿಮಠ, ಬನಶಂಕರಿ ದೇವಸ್ಥಾನ, ದ್ಯಾಮವ್ವನ ದೇವಸ್ಥಾನ, ಕುಕನೂರ ದ್ಯಾಮವ್ವನ ದೇವಸ್ಥಾನ, ಹೇಮಗಿರಿ ದ್ವಾರ ಬಾಗಿಲದ ಮೂಲಕ ಬಸ್ ನಿಲ್ದಾಣದ ಬಳಿ ಇರುವ ಎಸ್‌ಆರ್‌ಎಸ್ ಸರ್ಕಲ್ ಬಳಿ ಸಮಾರೋಪಗೊಂಡಿತು.ಕಾರ್ಯಕ್ರಮದಲ್ಲಿ ಗವಿಸಿದ್ಧಪ್ಪ ದ್ಯಾಮಣ್ಣನವರ, ವೆಂಕಟೇಶ ನಾರಾಯಣಿ, ಮಾರುತಿ ಗೊರವರ, ಮಾಲತೇಶ ಶಿತಾಳದ, ರಮೇಶ ಮಠದ, ಅಜ್ಜಪ್ಪ ತರ್ಲಿ, ತೇಜರಾಜ ಜಾನ್ಮನೆ, ಪ್ರದೀಪ ಸಾಲಗೇರಿ, ಮಂಜುನಾಥ ಹಾವೇರಿ, ಮುತ್ತಪ್ಪ ಯಲಿಗಾರ, ರಾಜಪ್ಪ ತೋಟದ, ಮಹ್ಮದಸಾದಿಕ್ ಮುಜಾವರ, ಪರಮೇಶಪ್ಪ ಕುರುವತ್ತಿಗೌಡ್ರ, ಶಿವಾನಂದ ಕೆಂಚಮಲ್ಲ, ಚನ್ನಪ್ಪ ಕಲಾಲ, ಪಿ,ಎನ್ ಹೇಮಗಿರಿಮಠ, ಅಶೋಕ ಆರಿಕಟ್ಟಿ, ಪ್ರಕಾಶ ಪಠಾಡೆ, ಮಲ್ಲಿಕಾರ್ಜುನ ಮರಿಯಾನಿ, ಕುಮಾರ ಚಿಗರಿ, ಪ್ರಕಾಶ ಬಾರ್ಕಿ, ಲೆಕ್ಕಪ್ಪ ಆನ್ವೇರಿ, ಗಿರೀಶ ಅರಳಿಮರದ, ಮರಿಯಪ್ಪ ಚಂದಾಪುರ, ಶೇಖರ ನರಸಣ್ಣನವರ ಯೂಥ್ ಫಾರ್ ನೇಷನ್ ಸಂಘಟನೆಯ ಪಧಾಧಿಕಾರಿಗಳು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಯುವಕರು, ಶಾಲಾ ಕಾಲೇಜಿನ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಅಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.ಯೋಧರಾದ ಅಶೋಕ ಹಾವೇರಿ, ಉದಯಕುಮಾರ ಅಂಬಿಗೇರ, ನಿಂಗನಗೌಡ, ಬಸವರಾಜ ಬಳ್ಳಾರಿ, ಸಂತೋಷ ಹೊಸಮನಿ, ಶ್ರೀನಿವಾಸ ಎರೇಶೀಮಿ. ಫಕ್ಕೀರಪ್ಪ ಗೋಟಗೋಡಿ, ದೇವೇಂದ್ರಪ್ಪ ಬಳ್ಳಾರಿ ಅವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು. 750 ಅಡಿ ಉದ್ದದ ತಿರಂಗಾ ಧ್ವಜವನ್ನು ನೂರಾರು ವಿದ್ಯಾರ್ಥಿಗಳು ಹಿಡಿದು ಯಾತ್ರೆಯಲ್ಲಿ ಸಾಗಿದ್ದು ಎಲ್ಲರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ