ಬಣಜಿಗ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹ

KannadaprabhaNewsNetwork |  
Published : Aug 14, 2026, 01:45 AM IST
ಹಾನಗಲ್ಲಿನಲ್ಲಿ ಬಣಜಿಗ ಸಮುದಾಯದಿಂದ ೨ಎ ಬೇಡಿಕೆಗಾಗಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬಣಜಿಗ ಸಮುದಾಯಕ್ಕೆ ‘೨ಎ’ ಮೀಸಲಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹಾನಗಲ್ಲ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಗುರುವಾರ ಮನವಿ ಸಲ್ಲಿಸಿದರು.

ಹಾನಗಲ್ಲ: ಬಣಜಿಗ ಸಮುದಾಯಕ್ಕೆ ‘೨ಎ’ ಮೀಸಲಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹಾನಗಲ್ಲ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಗುರುವಾರ ಮನವಿ ಸಲ್ಲಿಸಿದರು.

ಬಣಜಿಗ ಸಮಾಜದ ಉದಯ ವಿರೂಪಣ್ಣನವರ ಮಾತನಾಡಿ, ‘ಹೈಕೋರ್ಟ್ ಏಕ ಸದಸ್ಯ ಪೀಠವು ಬಣಜಿಗ ಸಮುದಾಯದ ಉದ್ಯೋಗ ಮೀಸಲಾತಿ ಪ್ರವರ್ಗ ‘ಡಿ’ ಹಾಗೂ ಶಿಕ್ಷಣ ಮೀಸಲಾತಿ ಪ್ರವರ್ಗ ‘ಬಿ’ ಅಡಿಯಲ್ಲಿ ವರ್ಗಿಕರಿಸಿರುವುದು ಪರಿಚ್ಛೇದದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಬಣಜಿಗ ಸಮುದಾಯವನ್ನು ‘೨ಎ’ ಮೀಸಲಾತಿಗೆ ಸೇರಿಸಬೇಕು ಎಂದು ಆದೇಶಿಸಿದೆ. ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಕೂಡಲೇ ಬಣಜಿಗ ಸಮುದಾಯವನ್ನು ೨ಎ ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಕುಮಾರ ಹತ್ತಿಕಾಳ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಕುಮಾರ ದೇಶಮುಖ, ಶಿವಬಸಪ್ಪ ಹೊಳಲದ, ಸೋಮಣ್ಣ ದೇವಣ್ಣನವರ, ಶಂಕ್ರಣ್ಣ ಅಂಗಡಿ, ದಾನಪ್ಪ ಸಿಂಧೂರ, ಕೊಟ್ಟೂರಬಸಪ್ಪ ಬೆಲ್ಲದ, ಬಸಣ್ಣ ಕೋರಿ, ಅರುಣ ಕೋಟಗಿ, ಶಿವಕುಮಾರ ಕೋರಿಶೆಟ್ಟರ, ಮುತ್ತಪ್ಪ ದುರ್ಗದ, ಉಮೇಶ ಬೆಲ್ಲದ, ಶಿವಯೋಗಿ ಸವದತ್ತಿ, ಉಮೇಶ ಕಬ್ಬೂರ, ಈರಣ್ಣ ಹುಗ್ಗಿ, ಅರುಣ ಮೋಟಗಿ, ರಾಜಣ್ಣ ಸಿಂಧೂರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ