ಚನ್ನಪಟ್ಟಣ: ಕನ್ನಡ ಸಾಹಿತ್ಯದ ಕಂಪನ್ನು ವಿಶ್ವಾದ್ಯಂತ ಹರಡುವಲ್ಲಿ ಕವಿಗಳ ಪಾತ್ರ ಹಿರಿದಾಗಿದ್ದು, ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದು ಸಮಾಜ ಸೇವಕ ರಾಂಪುರ ರಾಜಣ್ಣ ತಿಳಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಅನಿಲ್ ಕುಮಾರ್ ಮಾತನಾಡಿ, ಈ ನೆಲದ ಸಿರಿಯನ್ನು ಕಾಪಾಡಿಕೊಳ್ಳುವ ಹಾಗೂ ಹುಟ್ಟಿದ ನೆಲ ಮತ್ತು ಭಾಷೆಯನ್ನು ಗೌರವಿಸಬೇಕು. ಭಾಷೆ ಎಂದರೆ ಇಲ್ಲಿನ ಸಂಸ್ಕೃತಿ ಎಂದು ತಿಳಿಸಿದರು.
ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಕಚೇರಿ ಅಧೀಕ್ಷಕ ಹರೀಶ್ ಮಾತನಾಡಿ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ್ಮ ಭೂಮಿಯ ಬಗೆಗಿನ ಗೌರವ ಮತ್ತು ಪ್ರೀತಿಯನ್ನು ಇಮ್ಮಡಿಗೊಳಿಸುತ್ತವೆ ಎಂದರು.ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಚೇತನ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಪವಿತ್ರ, ಶಿಕ್ಷಕಿಯರಾದ ರೂಪಲತಾ, ಸಯೀದಾ ಮಿಸ್ಬಾ, ಸೌಮ್ಯ, ಗುಲ್ಸರ್ ಭಾನು ಇತರರು ಹಾಜರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.