ಜೀವನದಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸು ಕಾಣಬೇಕು. ಆದರೆ ಕನಸು ಕಂಡರೆ ಮಾತ್ರ ಸಾಲದು, ಅದನ್ನು ನನಸಾಗಿಸಿಕೊಳ್ಳಲು ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಯುಪಿಎಸ್‌ಸಿ ಸಾಧಕಿ ಡಾ.ನಿವೇದಿತಾ ಎಸ್. ಭಾವಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ಜೀವನದಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸು ಕಾಣಬೇಕು. ಆದರೆ ಕನಸು ಕಂಡರೆ ಮಾತ್ರ ಸಾಲದು, ಅದನ್ನು ನನಸಾಗಿಸಿಕೊಳ್ಳಲು ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಯುಪಿಎಸ್‌ಸಿ ಸಾಧಕಿ ಡಾ.ನಿವೇದಿತಾ ಎಸ್. ಭಾವಿಮನಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಾನು ನನ್ನ ಕನಸು’ ಪ್ರೇರಣಾದಾಯಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೋಲುಗಳಿಗೆ ಹೆದರದೆ ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಂಡು, ಶಿಕ್ಷಕರ ಮಾರ್ಗದರ್ಶನ ಪಡೆದು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ತಮ್ಮ ಸಾಧನೆಯ ಹಾದಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಅನುಸರಿಸಬೇಕಾದ ಅಧ್ಯಯನ ಕ್ರಮ, ಸಮಯದ ಸದ್ಬಳಕೆ, ನಿರಂತರ ಅಭ್ಯಾಸ ಹಾಗೂ ಪರೀಕ್ಷಾ ಸಿದ್ಧತೆಯ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು. ಅವರ ಪ್ರೇರಣಾದಾಯಕ ಮಾತುಗಳು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸುವುದರ ಜತೆಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವನ್ನು ಹೆಚ್ಚಿಸಿದವು.
ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಖಾದರ್ ಪಟೇಲ್, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಿರಾದಾರ, ಸಮರ್ಥ ಫೌಂಡೇಶನ್ ವಿಭಾಗೀಯ ಸಂಯೋಜಕ ಬಸವಾನಂದ ಮುಧೋಳ್, ರಮೇಶ, ಶಿಕ್ಷಕರಾದ ದೇವಪ್ಪ, ಆನಂದಕುಮಾರ, ಮಹೇಶ ಹುಜರಾತಿ, ಈರಮ್ಮ, ಸರಸ್ವತಿ, ಫೌಜೀಯಾಬೇಗಂ, ಮಲ್ಲಮ್ಮ, ನಜ್ಮಾ ಬೇಗಂ, ಸಾಬೇರಾಬೇಗಂ, ಯಲ್ಲಕ್ಮ, ಲಕ್ಷ್ಮಿ, ಲಾಲ್ ಬೀ ಸೇರಿದಂತೆ ಬಿ.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.