ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡಪ್ರಭ ಪತ್ರಿಕೆ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಪತ್ರಿಕೆಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದಿನಿಂದ ಸಮಾಜದಲ್ಲಿ ನಿತ್ಯ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿದೆ ಎಂದರು.
ಕನ್ನಡಪ್ರಭ ಹೊರ ತರುತ್ತಿರುವ ವಿದ್ಯಾರ್ಥಿ ಸಂಚಿಕೆ ಅಮೂಲ್ಯವಾದುದು. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಮಹತ್ತರವಾದುದು. ಇದನ್ನು ನಿತ್ಯ ಓದಿದರೆ ಮತ್ತು ಇದನ್ನು ಸಂಗ್ರಹ ರೂಪದಲ್ಲಿ ಇರಿಸಿಕೊಂಡರೆ ಅದು ದೊಡ್ಡ ಲಾಭವನ್ನು ತಂದುಕೊಡುತ್ತದೆ ಎಂದು ಹೇಳಿದರು.ನಮ್ಮಂತಹ ಅನೇಕ ಸಾಧಕರನ್ನು ಗುರುತಿಸಿ, ಸಾಧಕರ ಕುರಿತು ಕಿರುಪರಿಚಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆಯು ಗೆದ್ದವರ ಸಿದ್ದಸೂತ್ರ ಎಂಬ ಶೀರ್ಷಿಕೆಯ ಪುಸ್ತಕವನ್ನು ಹೊರತಂದಿದೆ. ಇಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು. ಯಾವುದೇ ಸಂದರ್ಭದಲ್ಲಿ ಋಣಾತ್ಮಕ ಚಿಂತನೆಗಳು ಮನಸ್ಸಿನಲ್ಲಿ ಮೂಡಿದಾಗ ಸಾಧಕರ ಕುರಿತ ಪುಸ್ತಕಗಳನ್ನು ಓದುವುದರಿಂದ ಸಾಧಕರ ಅನುಭವಗಳು, ಅವರು ಪಟ್ಟ ಕಷ್ಟಗಳು ಹಾಗೂ ಅವರು ಜೀವನದಲ್ಲಿ ಗೆದ್ದ ಬಗ್ಗೆ ತಿಳಿಯುತ್ತದೆ. ಆಗ ತಾವೂ ಏನಾದರೂ ಸಾಧಿಸಬೇಕು ಎಂಬ ಛಲ ಮೂಡುತ್ತದೆ ಎಂದು ತಿಳಿಸಿದರು.
ಪತ್ರಿಕೆಯ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಎಸ್.ಕೆ. ಸಂಚಿತ್ ಸಿಬ್ಬಂದಿ, ಶಾಲೆಯ ಶಿಕ್ಷಕ ವೃಂದವರು ಇದ್ದರು. ಶಿಕ್ಷಕ ಚಿಕ್ಯಾನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ನಿರೂಪಿಸಿದರು.
ಇಂದಿನ ಮಕ್ಕಳಲ್ಲಿ ಸುದ್ದಿ ಪತ್ರಿಕೆಗಳನ್ನು ಓದುವ ಮನೋಭಾವ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಎಲ್ಲ ಕ್ಷೇತ್ರದಲ್ಲಾಗುವ ವಿಷಯಗಳನ್ನು ತಿಳಿಯಬಹುದು. ಪತ್ರಿಕೆ ಓದಿನಿಂದ ಓದುವ ಹವ್ಯಾಸವೂ ಬೆಳೆಯುತ್ತದೆ ಎಂದು ಶಾಲೆಯ ಪ್ರಾಂಶುಪಾಲ ಕೆ.ಎಂ. ಮೋಹನ್ ತಿಳಿಸಿದರು.