ನಾಡಿನ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆಯಾಗಿದೆ
ಕುಕನೂರು: ಸಾಂಸ್ಕೃತೀಕ ಪರಂಪರೆ ಕಣ್ಮರೆಯಾಗುತ್ತಿದ್ದು, ಅದನ್ನು ಪಸರಿಸುವ ಕಾರ್ಯ ಆಗಬೇಕು ಎಂದು ನಿವೃತ್ತ ಉಪನ್ಯಾಸಕ ಶರಣಪ್ಪ ಕೊಪ್ಪದ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನೂದ್ದೇಶಿಸಿ ಮಾತನಾಡಿದ ಅವರು, ಸಂಸ್ಕೃತಿ ಎನ್ನುವುದು ಒಬ್ಬರನ್ನು ನೋಡಿ ಒಬ್ಬರು ಕಲಿಯುವ ಸಂಪ್ರದಾಯ. ಸಂಪ್ರದಾಯಕವಾದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಪನ್ಯಾಸಕರು, ಪಾಲಕರು ಹೆಚ್ಚು ಹೆಚ್ಚು ಭಾರತೀಯ ಸಂಸ್ಕೃತಿ ತಿಳಿಸುವ ಕಾರ್ಯ ಮಾಡಬೇಕು. ಸಂಸ್ಕೃತಿ ಆಚರಣೆಯೇ ಸಾಂಸ್ಕೃತೀಕ ಪರಂಪರೆಯಾಗಿ ಗಟ್ಟಿ ಉಳಿಯುತ್ತದೆ ಎಂದರು.
ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ದೇಸಾಯಿ ಮಾತನಾಡಿ, ನಾಡಿನ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಕಲೆ ಪೋಷಿಸುವುದಕ್ಕಾಗಿ ಸರ್ಕಾರ ಹಲವು ಯೋಜನೆ ರೂಪಿಸಿದೆ. ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಈಶಪ್ಪ ಮಳಗಿ ಮಾತನಾಡಿ, ಮುಂದಿನ ಪೀಳಿಗೆಗೆ ಇಂದಿನ ಕಲೆ ಮಾದರಿಯಾಗಬೇಕು. ಮಕ್ಕಳಲ್ಲಿ ಓದಿನ ಜತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ತೊಡಗಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಪಾಂಡುರಂಗ, ನಿಂಗಪ್ಪ ಕಂಬಳಿ, ಕಳಕಪ್ಪ ಕುಂಬಾರ್, ಶಿವಲೀಲಾ ಹಿರೇಮಠ, ಆರ್.ಕೆ.ಪಾಟೀಲ್, ಚೆನ್ನಪ್ಪ ಕೊರಲಳ್ಳಿ, ಮಾರುತಿ ಲಕಮಾಪುರ್, ಖಾಜಾ ಹುಸೇನ್, ಮಂಜುನಾಥ ಅಂಗಡಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.