ಅನಂತ್ ಇಂಟರ್ ನ್ಯಾಷನಲ್ ಮಾಂಟೆಸ್ಸೊರಿ ಶಾಲೆಯಲ್ಲಿ ನವರಾತ್ರಿ ವೈಭವ ದಸರಾ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಚರಣೆಯ ಹಿನ್ನೆಲೆಯನ್ನು ಪರಿಚಯಿಸುವುದರ ಜೊತೆಗೆ ಪೋಷಕರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ್ದ ಆರ್. ಅನಂತ ಕುಮಾರ್ ಮಾತನಾಡಿ ಹಬ್ಬದ ಆಚರಣೆಯು ಸಂತೋಷ ಪಸರಿಸುವ ವೇದಿಕೆ. ಒಂದೆಡೆ ಸಂಪ್ರದಾಯದ ಪರಿಚಯವಾದರೆ ಮತ್ತೊಂದೆಡೆ ಸಂಬಂಧಗಳನ್ನು ಗಟ್ಟಿಗೊಳಿಸಲು ಇವು ಅನುವು ಮಾಡಿಕೊಡುತ್ತವೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಅನಂತ್ ಇಂಟರ್ ನ್ಯಾಷನಲ್ ಮಾಂಟೆಸ್ಸೊರಿ ಶಾಲೆಯಲ್ಲಿ ನವರಾತ್ರಿ ವೈಭವ ದಸರಾ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಆಚರಣೆಯ ಹಿನ್ನೆಲೆಯನ್ನು ಪರಿಚಯಿಸುವುದರ ಜೊತೆಗೆ ಪೋಷಕರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ್ದ ಆರ್. ಅನಂತ ಕುಮಾರ್ ಮಾತನಾಡಿ ಹಬ್ಬದ ಆಚರಣೆಯು ಸಂತೋಷ ಪಸರಿಸುವ ವೇದಿಕೆ. ಒಂದೆಡೆ ಸಂಪ್ರದಾಯದ ಪರಿಚಯವಾದರೆ ಮತ್ತೊಂದೆಡೆ ಸಂಬಂಧಗಳನ್ನು ಗಟ್ಟಿಗೊಳಿಸಲು ಇವು ಅನುವು ಮಾಡಿಕೊಡುತ್ತವೆ. ಮಕ್ಕಳಿಗೆ ಒಳ್ಳೆಯದನ್ನು ತಿಳಿಸುವುದರ ಜೊತೆಗೆ ಕೆಟ್ಟದ್ದರ ಪರಿಣಾಮವನ್ನೂ ಅರ್ಥ ಮಾಡಿಸಬೇಕು ಆಗ ಒಳಿತಿನ ಮೌಲ್ಯಗಳ ಬೇರು ಮಕ್ಕಳಲ್ಲಿ ಒಳಿತಿನ ಬೇರು ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರಾಂಶುಪಾಲ ಡಾ. ಸುರೇಶ್ ಕುಮಾರ್ ಕುಂದೂರ್ ಮಾತನಾಡಿ, ಈ ರೀತಿಯ ಆಚರಣೆಗಳನ್ನು ಮಕ್ಕಳಿಗೆ ಪರಿಚಸುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತ ಮನೋರಂಜನಾ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶ ನಮ್ಮದಾಗಿದೆ. ಅಲ್ಲದೆ ಪೋಷಕರ ಪ್ರತಿಭೆಗೂ ವೇದಿಕೆ ಒದಗಿಸಿಕೊಟ್ಟಿದ್ದು ಅದರ ಸದ್ಭಳಕೆಯನ್ನು ಪೋಷಕರು ಮಾಡಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಅಭಿಪ್ರಾಯ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ನೃತ್ಯ ಕಾರ್ಯಕ್ರಮಗಳ ಮೂಲಕ ಮನರಂಜಿಸಿದರು. ದಸರಾ ಬೊಂಬೆಗಳನ್ನು ಕೂರಿಸಿ ಪೂಜೆಯನ್ನು ನೆರವೇರಿಸಲಾಯಿತು. ಮಕ್ಕಳು ನವದೇವತೆಗಳ ವೇಷಭೂಷಣದಲ್ಲಿ ಧರಿಸಿದ್ದು ಆಕರ್ಷಣೀಯವಾಗಿತ್ತು. ಈ ಮೂಲಕ ಮಕ್ಕಳಿಗೆ ಒಂಬತ್ತು ದಿನಗಳ ಆಚರಣೆ ಹಾಗೂ ಹತ್ತನೇ ದಿನದ ವಿಶೇಷತೆಯನ್ನು ಪರಿಚಯಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.