ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕೃತಿ ಪರಂಪರೆಯ ಅನಾವರಣ ಹೆಚ್ಚು ಸಾಧ್ಯವಾಗಲಿದೆ. ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಶ್ರೇಷ್ಠತೆ ಅರಿವು ಮೂಡಿಸುವುದು ಮುಖ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಲಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ರಮ್ಯದೋಳ್ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೀತಿ- ವಿಶ್ವಾಸ ಹೆಚ್ಚಿಸಿರುವುದರ ಜತೆಯಲ್ಲಿ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ರೋಟರಿ ಸಂಸ್ಥೆಗೆ ಸ್ನೇಹ- ಪ್ರೀತಿ, ಸೇವೆಯ ಜೊತೆಗೆ ಸದಸ್ಯರ ಮನೋರಂಜನೆಯೂ ಅತಿ ಮುಖ್ಯ. ರೋಟರಿ ಸದಸ್ಯರಲ್ಲೂ ಸಾಕಷ್ಟು ಪ್ರತಿಭೆಗಳಿದ್ದು, ಕೆಲವರು ಕಿರುತೆರೆ, ಚಲನಚಿತ್ರದಲ್ಲಿ ಅಭಿನಯಿಸಿದಂತ ಉದಾರಣೆಗಳಿವೆ. ರೋಟರಿ ಸದಸ್ಯರು ಇಂತಹ ವೇದಿಕೆಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಭಜರಂಗಿ-2 ಚಲನಚಿತ್ರ ನಟರಾದ ಚೆಲುವರಾಜ್ ಸಿ.ಎಸ್. ಮಾತನಾಡಿ, ಪ್ರತಿಭೆ ಪ್ರತಿಯೊಬ್ಬರ ಸ್ವತ್ತು. ಅದನ್ನು ಅನಾವರಣ ಮಾಡಲು ಬೇಕಾಗುವ ಛಲ ಪರಿಶ್ರಮ ಮುಖ್ಯವಾಗುತ್ತದೆ. ಇಂತಹ ವೇದಿಕೆಯಿಂದ ಸಾಕಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಎಲ್ಲರಿಗೂ ಇಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳಿವೆ. ರೋಟರಿ ಸೇವಾ ಕಾರ್ಯಗಳನ್ನು ಪ್ರಪಂಚಾದ್ಯಂತ ನೋಡುತ್ತಿದ್ದೇವೆ. ಮನುಕುಲದ ಸೇವೆಯಲ್ಲಿ ರೋಟರಿ ಪಾತ್ರ ತುಂಬಾ ಮುಖ್ಯವಾಗಿದೆ. ಈ ದಿನ ನಡೆಯುವ ವಲಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲೂ ಚೈತನ್ಯ ಮೂಡಿಸಿದೆ. ಜಿಲ್ಲಾಮಟ್ಟದ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಶಿವಮೊಗ್ಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ರಿವರ್ ಸೈಡ್ ಕ್ಲಬ್ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿದರು. ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರಪ್ರಸಾದ್, ವಲಯ 11ರ ಸಹಾಯಕ ಗವರ್ನರ್ ರವಿ ಕೊಟೋಜಿ, ರೋಟರಿ ರಿವರ್ ಸೈಡ್ ಕಾರ್ಯದರ್ಶಿ ಟಿ.ಎಂ. ಮಂಜುನಾಥ್, ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷ ಕೆಪಿ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಎಂ.ಜಗನ್ನಾಥ್, ವಲಯ ಸೇನಾನಿಗಳು ಎಚ್.ಎಸ್. ಮೋಹನ್, ಸಿ.ಎನ್. ಮಲ್ಲೇಶ್, ಧರ್ಮೇಂದ್ರ ಸಿಂಗ್, ಕೆ.ಟಿ. ಚಂದ್ರಪ್ಪ, ಮಹೇಶ್ ಎ. ಹಾಗೂ ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್, ವಲಯ ಸಂಯೋಜಕ ಎಸ್.ಪಿ. ಶಂಕರ್, ಮಂಜುನಾಥ್ ರಾವ್ ಕದಂ, ಧನರಾಜ್ ಮತ್ತಿತರರು ಇದ್ದರು. - - - -29ಎಸ್ಎಂಜಿಕೆಪಿ02: ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆ ಆಯೋಜಿಸಿದ್ದ ವಲಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ರಮ್ಯದೋಳ್ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಉದ್ಘಾಟಿಸಿದರು,