ವಿದ್ಯಾವಂತರಿಂದಲೇ ದೇಶಿಯ ಸಂಸ್ಕೃತಿ ಮರೆ: ಎಂಎಲ್‌ಸಿ ಮಧು ಮಾದೇಗೌಡ

KannadaprabhaNewsNetwork |  
Published : Jan 13, 2026, 02:15 AM IST
12ಕೆಎಂಎನ್ ಡಿ25 | Kannada Prabha

ಸಾರಾಂಶ

ನನ್ನ ತಂದೆ ಮಾಜಿ ಸಂಸದ ಜಿ.ಮಾದೇಗೌಡರ ಆಶಯದಂತೆ ಸಂಸ್ಥೆಯಲ್ಲಿ ರೈತ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ವಿಶೇಷ ಕಾಳಿಜಿ ವಹಿಸುವ ಮೂಲಕ ಉತ್ತಮ ಪ್ರಜೆಗಳಾನ್ನಾಗಿ ರೂಪಿಸಲು ಕಾರ್ಯೋನ್ಮುಖರಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾವಂತ ಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದರಿಂದ ದೇಶಿಯ ಸಂಸ್ಕೃತಿ ಮರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚರ‍್ಮನ್ ಮಧು ಜಿ.ಮಾದೇಗೌಡ ವಿಷಾದಿಸಿದರು.

ಭಾರತೀ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯೆ ಕಲಿತು ಉದ್ಯೋಗಕ್ಕೆ ಹೋಗಬೇಕು. ಜೊತೆಗೆ ದೇಶಿ ಸಂಸ್ಕೃತಿಗೆ ಬೆಲೆ ಕೊಡಬೇಕು. ಸಂಸ್ಕೃತಿ ಉಳಿದರೇ ದೇಶ ಉಳಿಯುತ್ತದೆ. ಆದರೆ, ಅನಾಗರೀಕರಿಂದ ದೇಶದ ಸಂಸ್ಕೃತಿ ಅವನತಿಯ ಅಂಚಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸ್ಥೆಯಿಂದ ನಡೆಯುತ್ತಿರುವ ಸಂಕ್ರಾಂತಿ ಸಂಭ್ರಮದಲ್ಲಿ ಹಲವು ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಿ ಹಳ್ಳಿ ಸೊಗಡನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ನನ್ನ ತಂದೆ ಮಾಜಿ ಸಂಸದ ಜಿ.ಮಾದೇಗೌಡರ ಆಶಯದಂತೆ ಸಂಸ್ಥೆಯಲ್ಲಿ ರೈತ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ವಿಶೇಷ ಕಾಳಿಜಿ ವಹಿಸುವ ಮೂಲಕ ಉತ್ತಮ ಪ್ರಜೆಗಳಾನ್ನಾಗಿ ರೂಪಿಸಲು ಕಾರ್ಯೋನ್ಮುಖರಾಗಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಹಳ್ಳಿ ಗಾಡಿನ ಮಕ್ಕಳಿಗೆ ವಿದ್ಯೆ ಕಲಿಸಲು ಮಾಜಿ ಸಂಸದ ದಿ.ಜಿ.ಮಾದೇಗೌಡರು ಸ್ಥಾಪಿಸಿದ ಸಂಸ್ಥೆಯಲ್ಲಿ 13 ಸಾವಿರ ವಿದ್ಯಾರ್ಥಿಗಳಿದ್ದು ಅವರಿಗೆ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಕೃಷಿ ಸಂಸ್ಕೃತಿ ಪರಿಚಯಿಸುತಿದ್ದೇವೆ ಎಂದರು.

ಮಾದೇಗೌಡರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ಎಂಎಲ್ಸಿ ಮಧು ಜಿ.ಮಾದೇಗೌಡರ ಆಶಯಗಳನ್ನು ನೆರವೇರಿಸುತ್ತಾ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೋಯ್ಯಲಾಗುತ್ತಿದೆ. ಅವರಿಗೆ ಬೆನ್ನಲುಬಾಗಿ ಪುತ್ರ ಆಶಯ ಮಧು ನಿಂತು ಸಂಸ್ಥೆ ಏಳ್ಗೆಗೆ ಶ್ರಮಿಸುತಿದ್ದಾರೆ ಎಂದರು.

ವೇದಿಕೆಯಲ್ಲಿ ಬಿಇಟಿ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿಗಳಾದ, ಕಾರ್ಕಹಳ್ಳಿ ಬಸವೇಗೌಡ, ಮುದ್ದಯ್ಯ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಪ್ರೊ.ಎಸ್.ನಾಗರಾಜು, ಡಾ.ತಮಿಜ್‌ಮಣಿ, ಡಾ.ಎಸ್.ಎಲ್.ಸುರೇಶ್, ಡಾ.ಬಾಲಸುಬ್ರಮಣ್ಯಂ, ಮಂಜು ಜೇಕಪ್, ಡಾ.ಚಂದನ್, ಸಿ.ಎಸ್.ಜಗದೀಶ್, ಡಾ. ಮಹೇಶ್‌ಲೋನಿ, ಪೂರ್ಣಿಮಾ, ಜಿ.ಕೃಷ, ಜಿ.ಬಿ.ಪಲ್ಲವಿ, ಸಿ.ವಿ.ಮಲ್ಲಿಕಾರ್ಜುನ, ಪಿ.ರಾಜೇಂದ್ರ ರಾಜೇ ಅರಸ್, ಸಿ.ರಮ್ಯ ಕಾರ್ಯಕ್ರಮದ ಆಯೋಜಕರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಸಂಕ್ರಾತಿ ಸಂಭ್ರಮ ಸಾಂಸ್ಕೃತಿಕ ಸಂಚಾಲಕಿ ಅರ್ಚನ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಬಿ.ಕೆ.ಕೃಷ್ಣ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ