- ಅಡವಿಟ್ಟ ಒಡವೆಗಳ ಹಿಂತಿರುಗಿಸುವಂತೆ ಘೋಷಣೆ ಕೂಗಿದ ಗ್ರಾಹಕರು
ನ್ಯಾಮತಿ: ಪಟ್ಟಣದ ಎಸ್‌ಬಿಐ ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರದ ಒಡವೆಗಳನ್ನು ಹಿಂತಿರುಗಿಸುವಂತೆ ಆಗ್ರಹಿಸಿ ಗ್ರಾಹಕರು ಬ್ಯಾಂಕಿನ ಒಳಗಡೆಗೆ ನುಗ್ಗಿ ಮಹಾತ್ಮಗಾಂಧಿ ಭಾವಚಿತ್ರವನ್ನಿಟ್ಟು ಧರಣಿ ನಡೆಸಿದರು.
ಸೋಮವಾರ ಬೆಳಗ್ಗೆ ಎಸ್‌ಬಿಐ ಶಾಖೆಯಲ್ಲಿ ಅಡವಿಟ್ಟ ಗ್ರಾಹಕರು ಬ್ಯಾಂಕಿನ ಒಳಗಡೆ ನಾವು ನಿಮ್ಮ ಬ್ಯಾಂಕ್‌ನಲ್ಲಿ ಬಂಗಾರದ ಒಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದೇವೆ. ಅದನ್ನು ಮರುಪಾವತಿ ಮಾಡುತ್ತೇವೆ. ನೀವು ನಾವು ಅಡವಿಟ್ಟ ಬಂಗಾರದ ಆಭರಣಗಳನ್ನು ವಾಪಸ್ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.ತಾಲೂಕಿನ ಗ್ರಾಮಾಂತರ ಜನರು ರೈತರು ತಮ್ಮ ಉಪಯೋಗಕ್ಕಾಗಿ ತಮ್ಮಲ್ಲಿದ್ದ ಬಂಗಾರದ ಒಡವೆಗಳನ್ನು ನ್ಯಾಮತಿ ಎಸ್‌ಬಿಐ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಅಚಾನಕ್ ಒಂದೂವರೆ ವರ್ಷದ ಹಿಂದೆ ಬ್ಯಾಂಕಿನಲ್ಲಿ ಬಂಗಾರದ ಆಭರಣಗಳು ದರೋಡೆ ನಡೆದಿತ್ತು. ನ್ಯಾಮತಿ ಪೊಳಿಸರು ಕಾರ್ಯಪ್ರವೃತ್ತರಾಗಿ ಪ್ರಕರಣ ಭೇದಿಸಿ ದರೋಡೆಕೋರರನ್ನು ಮಾಲು ಸಮೇತ ಬಂಧಿಸಿದ್ದರು. ಈ ವೇಳೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಆಭರಣಗಳನ್ನು ಎಸ್‌ಬಿಐ ಶಾಖೆಗೆ ಹಸ್ತಾಂತರ ಮಾಡಿದ್ದರು.
ಧರಣಿಯಲ್ಲಿ ಗಂಜೀನಹಳ್ಳಿ ಕೆ.ಆರ್. ಹಾಲೇಶಪ್ಪ, ಯರಗನಾಳ್ ಮಂಜಪ್ಪ ಮಾಸ್ತರ್, ಸುರೇಶ್, ದಾನಿಹಳ್ಳಿ ಶಶಿಧರ್, ಚಟ್ನಹಳ್ಳಿ ರವಿಕುಮಾರ್ ಪಿ.ಕೆ., ಸಿದ್ದನಗೌಡ, ಕವಿತಾ ನ್ಯಾಮತಿ, ಮಲ್ಲೇಶಪ್ಪ ಕಂಕನಹಳ್ಳಿ, ಜಗಧೀಶಪ್ಪ ಡಿ. ರಾಮೇಶ್ವರ, ಫಲವನಹಳ್ಳಿ ಆಕಾಶ್, ನೂರಾರು ಗ್ರಾಹಕರು ಇದ್ದರು. ಮಂಗಳವಾರವೂ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಲಾಯಿತು.
-ಚಿತ್ರ: