ಕನ್ನಡಪ್ರಭ ವಾರ್ತೆ ಸಕಲೇಶಪುರ
ಗ್ರಾಮದ ರಂಜಿತ್ ಹಾಗೂ ಸಚಿನ್ ಎಂಬುವವರು ಗ್ರಾಮದ ಸರ್ವೇ ನಂಬರ್ ೨೧/೨೮ ರಲ್ಲಿದ್ದ ಡೀಮ್ಡ್ ಅರಣ್ಯ ಪ್ರದೇಶವನ್ನು ತಂತಿಬೇಲಿ ನಿರ್ಮಿಸಿ ಒತ್ತುವರಿ ಮಾಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದ ತಂಡ ತಂತಿ ಬೇಲಿ ತೆರವುಗೊಳಿಸಿ ತಂತಿಯನ್ನು ವಶಕ್ಕೆ ಪಡೆದಿದೆ. ಕಳೆದ ಎರಡು ವರ್ಷದಲ್ಲಿ ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ ಇನ್ನೂರು ಎಕರೆಗೂ ಅಧಿಕ ಕಬಳಿಕೆಯಾಗಿದ್ದ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.