ಮಟನ್‌ ಎಂದು ಗ್ರಾಹಕರಿಗೆದನದ ಮಾಂಸ ತಿನ್ನಿಸಿದರು

KannadaprabhaNewsNetwork |  
Published : May 31, 2026, 02:00 AM IST
ಮಹೇಶ್ವರ್‌ ರಾವ್‌  | Kannada Prabha

ಸಾರಾಂಶ

ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸ ತಿನಿಸು ಮಾರಾಟದ ಮಾಡುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಇಬ್ಬರು ಕಿಡಿಗೇಡಿಗಳನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸ ತಿನಿಸು ಮಾರಾಟದ ಮಾಡುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಇಬ್ಬರು ಕಿಡಿಗೇಡಿಗಳನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಜೀಜೂ ಹಾಗೂ ಶೀಂಬು ಬಂಧಿತ ಆರೋಪಿಗಳು. ಆರೋಪಿಗಳು ಕೇರಳದಿಂದ ಬಂದು ನಗರದ ಕೊತ್ತನೂರಿನಲ್ಲಿ ನೆಲೆಸಿದ್ದರು. ಈ ಪ್ರಕರಣದಲ್ಲಿ ಅಭಿಲಾಷ್‌ ಎಂಬ ಮತ್ತೊಬ್ಬ ಆರೋಪಿ ತಲೆಮರಿಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಬೂದಿಗೆರೆ ಸಮೀಪದ ‘ಕಾಯಲೊರಮ್‌ ರೆಸ್ಟೋರೆಂಟ್‌’ ಮೇಲೆ ಆರೋಪ ಬಂದಿದೆ. ಇತ್ತೀಚಿಗೆ ಊಟ ತೆರಳಿದ್ದಾಗ ಹೋಟೆಲ್‌ನಲ್ಲಿ ನೀಡಿದ್ದ ಮಾಂಸದ ಬಗ್ಗೆ ಗ್ರಾಹಕರೊಬ್ಬರಿಗೆ ಅನುಮಾನ ಬಂದಿತು. ಕೂಡಲೇ ಆ‍ವಲಹಳ್ಳಿ ಠಾಣೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಅದರನ್ವಯ ಹೋಟೆಲ್‌ ಮೇಲೆ ದಾಳಿ ನಡೆಸಿದ ಪೊಲೀಸರು, ಪಶು ವೈದ್ಯರನ್ನು ಕರೆದೊಯ್ದು ಆಹಾರ ಪರಿಶೀಲಿಸಿದಾಗ ದನದ ಮಾಂಸ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ 6 ತಿಂಗಳಿಂದ ಆರೋಪಿಗಳು ಹೋಟೆಲ್ ನಡೆಸುತ್ತಿದ್ದರು. ಕುರಿ ಮಟನ್ ಮಾಂಸದೂಟ ಹೆಸರಿನಲ್ಲಿ ಅವರು ಪ್ರಚಾರ ನಡೆಸಿದ್ದರು. ಆದರೆ ಕುರಿ ಮಾಂಸದ ಸೋಗಿನಲ್ಲಿ ದನದ ಮಾಂಸದ ತಿನಿಸನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಎಲ್ಲಿಂದ ಮಾಂಸ ತಂದು ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಹಚ್ಚಿದ್ದು ಹೇಗೆ?

*ಕಾಯಲೊರಮ್‌ ರೆಸ್ಟೋರೆಂಟ್‌ಗೆ ಊಟಕ್ಕೆ ತೆರಳಿದ್ದಾಗ ಅನುಮಾನ ಬಂದು ಗ್ರಾಹಕರಿಂದ ದೂರು

*ಪಶು ವೈದ್ಯರನ್ನು ಕರೆದೊಯ್ದು ಹೋಟೆಲಲ್ಲಿ ಆಹಾರ ಪರಿಶೀಲಿಸಿದಾಗ ದನದ ಮಾಂಸ ಎಂಬುದು ದೃಢ*ಕೇರಳದಿಂದ ಬಂದು ನಗರದಲ್ಲಿ ನೆಲೆಸಿದ್ದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿದ ಆವಲಹಳ್ಳಿ ಪೊಲೀಸರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಬಾಗಿಲಿಗೆ ಮಾವಿನ ಹಣ್ಣು ಯೋಜನೆಗೆ ಚಾಲನೆ
ಸಿಎಲ್ಪಿ ನಾಯಕನಾಗಿ ಡಿಕೆ ಒನ್‌ಲೈನ್‌ ನಿರ್ಣಯ