- ಸಿಲಿಂಡರ್ ಸ್ಫೋಟ, ಸರ್ಕಾರಗಳ ಬೊಕ್ಕಸಕ್ಕೆ ನಷ್ಟ ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಲಿ: ಎಸ್.ಚೇತನ ಕುಮಾರ್ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ಕಾರಗಳಿಗೆ ಕೋಟ್ಯಂತರ ರು. ನಷ್ಟ ಮತ್ತು ಭೀಕರ ಸ್ಫೋಟಗಳ ಸೃಷ್ಟಿಸಿ, ಸಾವು-ನೋವುಗಳ ಅಪಾಯ ತಂದೊಡ್ಡಬಲ್ಲ ರೀತಿಯಲ್ಲಿ ದಾವಣಗೆರೆ ಸೇರಿದಂತೆ ಹಲವಾರು ಕಡೆಗಳಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ. ವಾಹನಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿಯೇ ವ್ಯಾಪಕ ಹಾಗೂ ಅಸುರಕ್ಷಿತವಾಗಿ ಸಿಲಿಂಡರ್‌ಗಳ ಬಳಕೆ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ದುರ್ಬಳಕೆ ತಡೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಒತ್ತಾಯಿಸಿದೆ.
ವಾಣಿಜ್ಯ ಉದ್ದೇಶಕ್ಕೇ ಹೆಚ್ಚು:
14.2 ಕೆಜಿ ಅನಿಲ ತುಂಬಿರುವ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಂಡುಬರುತ್ತಿದೆ. ಕೆಲವೆಡೆ 14.2 ಕೆಜಿ ಸಿಲಿಂಡರ್‌ನಲ್ಲಿರುವ ಅನಿಲವನ್ನು 19 ಕೆ.ಜಿ.ಯ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸಲಾಗುತ್ತಿದೆ. ವಾಹನಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತಿದ್ದು, ಇದು ಅಪಾಯಕ್ಕೆ ಎಡೆಮಾಡಿಕೊಟ್ಟರೆ ಆಶ್ಚರ್ಯವಿಲ್ಲ. ಗೃಹ ಬಳಕೆ ಸಿಲಿಂಡರ್ ಅಸಮರ್ಪಕ ಹಾಗೂ ಅಕ್ರಮವಾಗಿ ಬಳಕೆ ವಿಚಾರ ಅತ್ಯಂತ ಗಂಭೀರವಾಗಿದೆ. ಇದರಿಂದ ಸರ್ಕಾರಗಳಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಅಲ್ಲದೆ, ಅಸುರಕ್ಷತೆ ಹೆಚ್ಚಿರುವ ಈ ಬೆಳವಣಿಗೆಯಿಂದ ಸ್ಫೋಟ, ಬೆಂಕಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ ಎಂದು ದೂರಿದರು.ಗ್ರಾಹಕರ ಆಟೋ ಬುಕ್ಕಿಂಗ್ ಹೆಸರಲ್ಲಿ:
ವಾಹನಗಳಲ್ಲಿ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಗ್ಯಾಸ್ ತುಂಬಿಸುವುದು ತುಂಬಾ ಅಪಾಯಕಾರಿ. ಯಾವುದೇ ಕ್ಷಣದಲ್ಲಿ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಗೃಹ ಬಳಕೆ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬಳಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಎಸ್. ಚೇತನ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಅರುಣ್ ಮಾನಗಾಂವೆ ಇದ್ದರು.
ಬಾಕ್ಸ್ 1. ಅಕ್ರಮ ರೀಫಿಲಿಂಗ್ ಚಟುವಟಿಕೆಗಳಿಂದ ಸಿಲಿಂಡರ್ ಅಗ್ನಿ ಅವಘಡಗಳು ನಡೆಯುತ್ತಿವೆ 2. ರಾಜ್ಯದಲ್ಲಿ ಈಗಾಗಲೇ ಗಂಭೀರ ಪ್ರಕರಣಗಳು ಘಟಿಸಿರುವುದು ಗಮನೀಯ
4. ಬರೀ ಕಾಗದ ಪತ್ರಗಳ ಮೂಲಕ ಕೆಲಸ ಆಗುವುದಿಲ್ಲ
6. ಸಿಲಿಂಡರ್ ಸ್ಫೋಟ ಪ್ರಕರಣಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು
8. ವಾಹನಗಳು, ವಾಣಿಜ್ಯ ಸ್ಥಳಗಳಲ್ಲಿಯೇ ಎಲ್‌ಪಿಜಿ ಸಿಲಿಂಡರ್‌ಗಳ ಅವ್ಯಾಹತ ಬಳಕೆಗೆ ಕಡಿವಾಣ ಬೀಳಬೇಕು
- - - -27ಕೆಡಿವಿಜಿ32ಃ:ದಾವಣಗೆರೆಯಲ್ಲಿ ವಾಹನಗಳು ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆ ಸಿಲಿಂಡರ್ ಅಕ್ರಮ ಬಳಕೆಗೆ ಶೀಘ್ರ ಕಡಿವಾಣ ಹಾಕಿ ಅಪಾಯಗಳ ತಪ್ಪಿಸುವಂತೆ ಸುದ್ದಿಗೋಷ್ಠಿಯಲ್ಲಿ ಎಸ್.ಚೇತನ್ ಕುಮಾರ್ ಸರ್ಕಾರ, ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.