ಪರಶಿವಮೂರ್ತಿ ದೋಟಿಹಾಳ
ಎತ್ತು ಹಾಗೂ ಕೂಲಿಕಾರರ ಕೊರತೆ ನೀಗಿಸಲು ರೈತರು ಸೈಕಲ್ ಎಡೆಕುಂಟೆ ಬಳಕೆಯತ್ತ ಮುಖ ಮಾಡಿದ್ದು ಉಳಿತಾಯದ ಜತೆಗೆ ಕಡಿಮೆ ಅವಧಿಯಲ್ಲಿಯೇ ಕೃಷಿ ಕೆಲಸವೂ ಪೂರ್ಣಗೊಳ್ಳುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗೂ ಜಾನುವಾರು ಸಾಕುವುದು ಕಡಿಮೆಯಾದ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಸಕಾಲಕ್ಕೆ ಕೂಲಿಕಾರ್ಮಿಕರು ಸಿಗದೆ ರೈತರು ಬೆಳೆಹಾನಿಯಂತಹ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಬೆಳೆ ಮಧ್ಯೆ ಬೆಳೆದಿರುವ ಕಳೆ ತೆಗೆಯಲು ಸೈಕಲ್ ಎಡೆಕುಂಟೆಗೆ ಮೊರೆ ಹೋಗಿದ್ದಾರೆ. ಸೈಕಲ್ ಎಡೆಕುಂಟೆ ಸರಳ ಮತ್ತು ಸುಲಭ ವಿಧಾನವಾಗಿದೆ.ಮುಂಗಾರು ಬೆಳೆಗಳಾದ ಹೆಸರು, ತೊಗರಿ ಇತ್ಯಾದಿ ಬೆಳೆಗಳಲ್ಲಿ ಕಳೆ ತೆಗೆಯಲು ಪ್ರತಿ ಕೂಲಿಕಾರ್ಮಿಕರಿಗೆ ₹ 500 ಕೊಡಬೇಕಾಗಿದ್ದು, ಒಟ್ಟು ಕಳೆ ತೆಗೆಯಲು ಸಾವಿರಾರು ರೂಪಾಯಿ ಆಗಲಿದೆ. ಇದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅಷ್ಟು ಕೂಲಿ ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ನೂತನ ತಂತ್ರಜ್ಞಾನ ಬಳಸಿ ಸೈಕಲ್ ಎಡೆಕುಂಟೆ ಹೊರತಂದಿದ್ದು, ಕೃಷಿ ಇಲಾಖೆಯಲ್ಲಿ ₹ 1000ಕ್ಕೆ ದೊರೆಯಲಿದೆ. ಈ ಮೂಲಕ ಹೊಲದಲ್ಲಿನ ಬೆಳೆ ನಡುವೆ ಇರುವ ಕಳೆ ತೆಗೆಯಬಹುದು.
ಶರಣಪ್ಪ ಗುರಿಕಾರ ಕೇಸೂರು ಗ್ರಾಮದ ರೈತಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು ರೈತರು ಖರೀದಿಸುವ ಮೂಲಕ ಕೃಷಿ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ.
ರಾಜಶೇಖರ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಕುಷ್ಟಗಿ