ಕೊಪ್ಪಳ: ವಿವಿಧ ಮಹಾತ್ಮರ ಜನ್ಮಸ್ಥಳಗಳಿಗೆ ಸ್ವಚ್ಛ ಭಾರತ-ಸ್ವಸ್ಥ ಭಾರತ ಹಾಗೂ ಪರಿಸರ ಉಳಿಸಿ ಜೀವಸಂಕುಲ ಉಳಿಸಿ ಎಂಬ ಘೋಷ ವಾಕ್ಯದಡಿಯಲ್ಲಿ ಸೈಕಲ್ ಮೂಲಕ ದೇಶ ಪರ್ಯಟನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಶಿವರಾಯಪ್ಪ ಹಾಗೂ ನಳೀನ ಅವರ ಕಾರ್ಯ ಇಂದಿನ ಯುವಕರಿಗೆ ಮಾದರಿ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗರಾಜ ಆರ್ ಜುಮ್ಮಣ್ಣನ್ನವರ ಮಾತನಾಡಿ, ಸರ್ಕಾರಿ ನೌಕರರಾಗಿದ್ದು ಸಹ ತಮ್ಮ ವೃತ್ತಿಯ ಜತೆ ಜತೆಯಲ್ಲಿ ಇಂತಹ ಸಾಹಸ ಹಾಗೂ ಸ್ಫೂರ್ತಿದಾಯಕ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ.ಈ ಯುವಕರು ಈಗಾಗಲೇ ಕಟಕ್ ಹಾಗೂ ಪೋರಬಂದರಿನ ಸೈಕಲ್ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಯುವಕರಿಗೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಹಾಗೂ ಗಾಂಧಿ ಬಳಗದ ಸದಸ್ಯ ಆನಂದತಿರ್ಥ ಪ್ಯಾಟಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿರ್ದೇಶಕ ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ, ಸಾಹಿತಿ ಶರಣಪ್ಪ ಬಿಳಿಎಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹನುಮಂತಪ್ಪ ಕುರಿ, ಮಲ್ಲಪ್ಪ ಗುಡದನ್ನವರ, ಶಿಕ್ಷಕರ ಸಂಘದ ನಿರ್ದೇಶಕ ಗವಿಸಿದ್ದಪ್ಪ ಕೇರಿ, ಗುರುಸ್ವಾಮಿ ಆರ್, ಮುಸ್ತಾಫ ಕುದರಿಮೋತಿ, ಕೋಳೂರು ಸಿರ‍್ಪಿ ವಿರೇಶ ಮೇಟಿ, ಆರೋಗ್ಯ ಇಲಾಖೆಯ ನೌಕರ ಮಂಜುನಾಥಗೌಡ, ನಾಗರಾಜ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.