ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಡಿ.ದೇವರಾಜ ಅರಸು: ಡಾ.ಬಿರಾದಾರ

KannadaprabhaNewsNetwork |  
Published : Aug 23, 2026, 02:00 AM IST
21ಕೆಎಂಎನ್ ಡಿ14 | Kannada Prabha

ಸಾರಾಂಶ

ಭೂ ಮಾಲೀಕರ ಕುಟುಂಬದಲ್ಲಿ ಜನಿಸಿದರೂ ಸಹ ದೇವರಾಜ ಅರಸು ಅವರು ಹಿಂದುಳಿದ ಶ್ರಮಿಕರಿಗೆ ಅಪಾರ ಗೌರವ ನೀಡುತ್ತಿದ್ದರು. ಶ್ರಮಜೀವಿಗಳನ್ನು ಸ್ನೇಹ ಮತ್ತು ಸಮಾನತೆಯಿಂದ ಕಾಣುತ್ತಿದ್ದರು ಎಂದರು.

ಮದ್ದೂರು: ಶೋಷಿತರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆದ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಅರಸು ಅವರು ಮೇಲ್ವರ್ಗದಿಂದ ಹಿಡಿದು ತಳ ಸಮುದಾಯದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕು. ಆರ್ಥಿಕ ಸ್ವಾತಂತ್ರ್ಯ ಜೊತೆಗೆ ಸಾಮಾಜಿಕ ಗೌರವ ಮತ್ತು ಮಾನಸಿಕ ನೆಮ್ಮದಿ ದೊರೆಯಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಭೂ ಮಾಲೀಕರ ಕುಟುಂಬದಲ್ಲಿ ಜನಿಸಿದರೂ ಸಹ ದೇವರಾಜ ಅರಸು ಅವರು ಹಿಂದುಳಿದ ಶ್ರಮಿಕರಿಗೆ ಅಪಾರ ಗೌರವ ನೀಡುತ್ತಿದ್ದರು. ಶ್ರಮಜೀವಿಗಳನ್ನು ಸ್ನೇಹ ಮತ್ತು ಸಮಾನತೆಯಿಂದ ಕಾಣುತ್ತಿದ್ದರು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಗುಳ್ಳಪ್ಪನವರ್ ಮಾತನಾಡಿ, ಭೂ ಸುಧಾರಣೆ ಕಾಯ್ದೆಯನ್ನು ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು ದೇವರಾಜ ಅರಸು ಅವರು ಬಡ ರೈತರ ಪಾಲಿಗೆ ಆಶಾ ಕಿರಣವಾಗಿದ್ದಾರೆ ‌‌ಎಂದು ಬಣ್ಣಿಸಿದರು.

ನಿಲಯ ಪಾಲಕ ಎಂ.ಎನ್.ಗೋಪಿ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ತಾಪಂ ವ್ಯವಸ್ಥಾಪಕ ಗಂಗಾಧರ್, ಸಿಡಿಪಿಒ ನಾರಾಯಣ, ದಲಿತ ಮುಖಂಡ ಆತಗೊರು ವೆಂಕಟಾಚಲಯ್ಯ , ನಿಲಯ ಪಾಲಕರಾದ ಅಶೋಕ್, ಸುನಿಲ್, ಅರ್ಚನಾ, ಹೇಮಾವತಿ, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡಿಗೆ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಖಂಡಿಸಿ ಪಂಜಿನ ಮೆರವಣಿಗೆ
ಪಿಂಚಣಿ ಪುನಾರಂಭ: ಹೊನ್ನಾಳಿಯಲ್ಲಿ ಬಿಜೆಪಿ ವಿಜಯೋತ್ಸವ