ಪಿಂಚಣಿ ಪುನಾರಂಭ: ಹೊನ್ನಾಳಿಯಲ್ಲಿ ಬಿಜೆಪಿ ವಿಜಯೋತ್ಸವ

KannadaprabhaNewsNetwork |  
Published : Aug 23, 2026, 02:00 AM IST
21ಎಚ್ .ಎಲ್,.ಐ1ಸ್ಥಗಿತಗೊಳಿಸಿದ್ದ ವಿವಿಧ ಮಾಸಾಶನಗಳನ್ನು ಸರ್ಕಾರ ಪುನಃ ಅರ್ಹ ಫಲಾನುಭವಿಗೆ ನೀಡಲು ಕ್ರಮವಹಿಸಿದ್ದು, ಇದು ಬಿಜೆಪಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ  ಎಂದು ಈ ಹಿನ್ನಲೆಯಲ್ಲಿ  ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ವತಿಯಿಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ  ಪಾಟಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.  | Kannada Prabha

ಸಾರಾಂಶ

Pension resumption: BJP celebrates victory in Honnali

- ಪಕ್ಷದ ಜನಪರ ಹೋರಾಟಕ್ಕೆ ಸಂದ ಜಯ: ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಕನ್ನಡಪ್ರಭ ವಾರ್ತೆ ಹೊನ್ನಾಳಿ

ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ರಾಜ್ಯದ 18.06 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಮಾಸಾಶನ ಸೌಲಭ್ಯಗಳನ್ನು ಹಲವಾರು ತಿಂಗಳಿಂದ ಸರ್ಕಾರ ಸ್ಥಗಿತಗೊಳಿಸಿತ್ತು. ಇದನ್ನು ಮನಗಂಡ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಮತ್ತು ಕಾರ್ಯಕರ್ತರೊಂದಿಗೆ ಉಗ್ರ ಹೋರಾಟ ನಡೆಸಿದ್ದು, ಎಚ್ಚೆತ್ತ ಸರ್ಕಾರ ಇದೀಗ ಪುನಃ ಈ ಹಿಂದಿನಂತೆ ವಿವಿಧ ಮಾಸಾಶನಗಳನ್ನು ನೀಡಲು ಅದೇಶ ಹೊರಡಿಸಿದೆ. ಇದು ಬಿಜೆಪಿ ಜನಪರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸ್ಥಗತಗೊಳಿಸಿದ್ದ ಪಿಂಚಣಿಗಳ ಪುನಃ ನೀಡಲು ಮುಂದಾದ ಸರ್ಕಾರದ ನಿಲುವಿಗೆ ಅಭಿನಂದನೆ ಸಲ್ಲಿಸಿ ಶುಕ್ರವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ವಿಜಯೋತ್ಸವ ನಡೆಯಿತು. ಈ ವೇಳೆ ಅವರು ಮಾತನಾಡಿ, ಇದು ಬಿಜೆಪಿ ಹೋರಾಟದ ಫಲವಾಗಿದೆ ಎಂದರು.

ಈ ಎಲ್ಲ ಸೌಲಭ್ಯಗಳನ್ನು ಅದಾಯ ಪರಿಶೀಲನೆ ನೆಪದಲ್ಲಿ ಸರ್ಕಾರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕೆಲವಾರು ತಿಂಗಳಿಂದ ತಡೆಹಿಡಿಯಲಾಗಿತ್ತು. ಸರ್ಕಾರದ ಈ ನಿಲುವು ಖಂಡಿಸಿ ಬಿಜೆಪಿ ಜುಲೈ 22ರಂದು ಅವಳಿ ತಾಲೂಕುಗಳಲ್ಲಿ ಉಗ್ರ ಹೋರಾಟ ನಡೆಸಿ ಹಿರಿಯ ನಾಗರೀಕರು, ಅಂಗವಿಕಲರು, ಹಾಗೂ ವಿಧವೆಯಗೆ ಕೂಡಲೇ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಇದೀಗ ಸರ್ಕಾರ ₹32 ಸಾವಿರ ಆದಾಯ ಮಿತಿ ಸಡಿಲಗೊಳಿಸಿ ಇದನ್ನು ₹1.20 ಲಕ್ಷಕ್ಕೆ ಆದಾಯ ಮಿತಿ ನಿಗದಿಪಡಿಸಿ, ಸ್ಥಗಿತಗೊಳಿಸಿದ್ದ ಎಲ್ಲ ರೀತಿಯ ಮಾಸಾಶನ ಸೌಲಭ್ಯಗಳನ್ನು ನೀಡುವಂತೆ ಆದೇಶ ಹೊರಡಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಗುಟ್ಕಾ ನಿಷೇಧ ವಿಷಯವಾಗಿ ಅಡಕೆ ಬೆಳಗಾರರ ಹಿತಕಾಯುವ ನಿಟ್ಟಿನಲ್ಲಿ ಕೂಡ ಇಡೀ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ಶೀಘ್ರವಾಗಿ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು ಎಂದರು.

ವಿಜಯೋತ್ಸವದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಅರಕರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಮುಖಂಡ ಎಂ.ಆರ್.ಮಹೇಶ್, ಯುವ ಘಟಕದ ಅಧ್ಯಕ್ಷ ನವೀನ್ ಇಂಚರ, ಪೇಟೆ ಪ್ರಶಾಂತ, ಬಾಬು ಹೋಬಳದಾರ್, ಕೋನಾಯಕನಹಳ್ಳಿ ಮಂಜುನಾಥ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು. ಇದೇ ವೇಳೆ ಪ್ರಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

- - -

-21ಎಚ್ .ಎಲ್,.ಐ1:

ರಾಜ್ಯ ಸರ್ಕಾರ ವಿವಿಧ ಮಾಸಾಶನಗಳ ವಿತರಣೆ ಪುನಃ ಜಾರಿಗೊಳಿಸಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡಿಗೆ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಖಂಡಿಸಿ ಪಂಜಿನ ಮೆರವಣಿಗೆ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಡಿ.ದೇವರಾಜ ಅರಸು: ಡಾ.ಬಿರಾದಾರ