2 ತಿಂಗಳಲ್ಲಿ ಡಿ.ಕೆ. ಶಿವಕುಮಾರ ಸಿಎಂ: ದೇವಿ ಆರಾಧಕಿ ಭವಿಷ್ಯವಾಣಿ ವಿಡಿಯೋ ವೈರಲ್

KannadaprabhaNewsNetwork |  
Published : Nov 24, 2025, 02:45 AM IST
ಡಿ.ಕೆ. ಶಿವಕುಮಾರ | Kannada Prabha

ಸಾರಾಂಶ

"ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿ.ಕೆ. ಶಿವಕುಮಾರ್, ನೀವು ಚಿಂತೆ ಮಾಡಬೇಡಿ. ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೇ, ಎರಡು ತಿಂಗಳ ಒಳಗಾಗಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳುತ್ತಾರೆ " ಎಂದು ಭೈಲಮ್ಮ ಬಾಳಮಣ್ಣವರ ನುಡಿದಿದ್ದಾರೆ.

ಗದಗ: ರಾಜ್ಯ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವಿನ ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ವಿವಾದ ಸದ್ದಿಲ್ಲದೆ ನಡೆಯುತ್ತಿರುವಾಗಲೇ, ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಎಂಬವರು ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ ಎಂದು ಹೇಳಿರುವ ಭವಿಷ್ಯವಾಣಿಯೊಂದು ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹುಲಿಗೆಮ್ಮದೇವಿ ಆರಾಧಕಿಯಾಗಿರುವ ಗದುಗಿನ ರಾಚೋಟೇಶ್ವರ ನಗರದ ನಿವಾಸಿ ಭೈಲಮ್ಮ ಬಾಳಮಣ್ಣವರ ಅವರು, ದೇವರ ಗದ್ದುಗೆ ಹಾಕಿ, ದೇವಿ ಕೊಡ(ಬಿಂದಿಗೆ) ಎತ್ತುವ ಮೂಲಕ ನುಡಿದಿರುವ ಭವಿಷ್ಯ ನುಡಿದಿದ್ದಾರೆ.

"ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿ.ಕೆ. ಶಿವಕುಮಾರ್, ನೀವು ಚಿಂತೆ ಮಾಡಬೇಡಿ. ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೇ, ಎರಡು ತಿಂಗಳ ಒಳಗಾಗಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳುತ್ತಾರೆ " ಎಂದು ಭೈಲಮ್ಮ ಬಾಳಮಣ್ಣವರ ನುಡಿದಿದ್ದಾರೆ.

​ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಹತ್ತಿರ ಕಪಟ ಬುದ್ಧಿ ಇಲ್ಲ. ಹೀಗಾಗಿ ಅವರು ಖುಷಿ ಖುಷಿಯಿಂದಲೇ ಸ್ಥಾನ ಬಿಟ್ಟುಕೊಡುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ. ಕೆಲವೊಂದಿಷ್ಟು ಜನರು ಕಾಯ್ದು ಕುಳಿತಿದ್ದಾರೆ. ನಾನು ಸಿಎಂ ಆಗಬೇಕು, ನೀನು ಆಗಬೇಕು ಎಂದು. ಇಬ್ಬರ ಕಚ್ಚಾಟದಲ್ಲಿ ಮೂರನೆಯವರಿಗೆ ಲಾಭ ಆಗುವುದೆಂದು ಕುಳಿತಿದ್ದಾರೆ. ಆದರೆ, ಅವರ್ಯಾರು ಸಿಎಂ ಆಗುವುದಿಲ್ಲ. ಡಿ.ಕೆ. ಶಿವಕುಮಾರ್ ಅವರೇ ಸಿಎಂ ಆಗುವುದು ಗ್ಯಾರಂಟಿ ಎಂದು ಭೈಲಮ್ಮ ತಿಳಿಸಿದ್ದಾರೆ.ತೀವ್ರ ಕುತೂಹಲ

ಹುಲಿಗೆಮ್ಮದೇವಿ ನೀಡಿರುವ ಭವಿಷ್ಯವಾಣಿ ಸುಳ್ಳು ಆಗುವುದಿಲ್ಲ ಎಂದು ಭೈಲಮ್ಮ ಬಾಳಮಣ್ಣವರ ದೃಢವಾಗಿ ಹೇಳಿದ್ದಾರೆ. ಸಿಎಂ ಆದ ಬಳಿಕ ಡಿ.ಕೆ. ಶಿವಕುಮಾರ್ ಅವರು ದೇವಿಯನ್ನು ನೆನಪಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ. ​ಈ ಭವಿಷ್ಯವಾಣಿಯು ರಾಜ್ಯದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

Recommended Stories

ಕನ್ನಡಿಗರೇ ಕನ್ನಡ ನಿರ್ಲಕ್ಷಿಸುತ್ತಿರುವುದು ಶೋಚನೀಯ-ಶಾಸಕ ಬಣಕಾರ
ಸಾಸರವಾಡದಲ್ಲಿ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಪತ್ತೆ!