ಚಿಕ್ಕಮಗಳೂರುಡಿ.ಕೆ.ಶಿವಕುಮಾರ್ ನಾಡಿನ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಕಟ್ಟಿಕೊಂಡ ಕಾಫಿನಾಡು ಚಿಕ್ಕ ಮಗಳೂರಿನ ಅಭಿಮಾನಿಯೊಬ್ಬ ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥ ಸನ್ನಿದಾನಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದಾನೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಡಿ.ಕೆ.ಶಿವಕುಮಾರ್ ನಾಡಿನ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಕಟ್ಟಿಕೊಂಡ ಕಾಫಿನಾಡು ಚಿಕ್ಕ ಮಗಳೂರಿನ ಅಭಿಮಾನಿಯೊಬ್ಬ ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥ ಸನ್ನಿದಾನಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದಾನೆ.
ಸಖರಾಯಪಟ್ಟಣದ ಮೂಲದ ಮಂಜು (ಎಂಎಲ್‌ಎ ಮಂಜು) ಡಿ.ಕೆ.ಶಿವಕುಮಾರ್ ಅವರ ಅಪ್ಪಟ ಅಭಿಯಾನಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಕಟ್ಟಿಕೊಂಡಿದ್ದರು.
ಇದೀಗ ಸಿದ್ದರಾಮಯ್ಯ ರಾಜಿನಾಮೆ ನೀಡಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವುದಕ್ಕೆ ಹೈ ಕಮಾಂಡ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ಹರಕೆ ಫಲಿಸಿದ ಕಾರಣಕ್ಕೆ ಶನಿವಾರ ಶ್ರೀ ಧರ್ಮಸ್ಥಳದ ಮಂಜುನಾಥ್ ಸ್ವಾಮಿ ಸನ್ನಿಧಿಯಲ್ಲಿ ಮುಡಿಕೊಟ್ಟಿದ್ದಾರೆ. ಜತೆಗೆ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ತೆರಳಿ ಹಣ್ಣು ಕಾಯಿ ಅರ್ಚನೆ ಮಾಡಿಸಿ ತಮ್ಮ ಹರಕೆ ಪೂರೈಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನಾಗಿರುವ ಈ ಎಂಎಲ್‌ಎ ಮಂಜು ಅವರ ಕಾರ್ಯವೈಖರಿ ಗಮನಿಸಿ ಪಕ್ಷದ ಮುಖಂಡರು ಮಂಜುಗೆ ಮಡಿಕೇರಿ ಜಿಲ್ಲೆಯ ಎಐಸಿಸಿಯ ಜವಾಹರ್ ಬಾಲ್ ಮಂಚ್‌ನ ಸಂಚಾಲಕನ ಜವಾಬ್ದಾರಿ ನೀಡಿದ್ದಾರೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಎಂಎಲ್‌ಎ ಮಂಜು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಸುಮಾರು 8 ವರ್ಷಕ್ಕೂ ಅಧಿಕ ಕಾಲ ಉತ್ತಮ ಸೇವೆ ಮಾಡಿದ್ದಾರೆ. ಇದೀಗ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ನಾಯಕತ್ವ, ಸಂಘಟನೆ ಮತ್ತು ಕಾರ್ಯ ಶೈಲಿಯಿಂದ ಅವರ ಅಭಿಯಾನಿಯಾಗಿದ್ದೇನೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇತ್ತು. ಹೀಗಾಗಿ, ಹರಕೆ ಕಟ್ಟಿಕೊಂಡಿದೆ. ಇದೀಗ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಸನ್ನಿದಾನಕ್ಕೆ ತರಳಿ ಹರಕೆ ತೀರಿಸಿದ್ದೇನೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿ ರಾಜ್ಯದಲ್ಲಿ ಉತ್ತಮ ಆಡಳಿತ ಸೇವೆ ನೀಡಲಿ ಎಂದು ಹಾರೈಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.