ಹುಬ್ಬಳ್ಳಿ: ಸಂವಿಧಾನ ಬದಲಾಯಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡಿಸಿ ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂವಿಧಾನ ಎಲ್ಲ ವರ್ಗದ ಜನರಿಗೂ ಹಕ್ಕು ಒದಗಿಸಿದೆ. ಭಾರತದ ಸಂವಿಧಾನ ವಿಶ್ವದಲ್ಲಿ ಅತೀ ದೊಡ್ಡ ಸಂವಿಧಾನ. ಇಂತಹ ಸಂವಿಧಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬದಲಿಸುವ ಹೇಳಿಕೆ ನೀಡಿರುವುದು ಖಂಡನೀಯ. ಆದ್ದರಿಂದ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮುಖಂಡರಾದ ಬಿ.ಬಿ. ಗಂಗಾಧರಮಠ, ವಿನಾಯಕ ಗಾಡಿವಡ್ಡರ, ಗಂಗಾಧರ ಪೆರೂರ, ನವೀನಕುಮಾರ, ಮಾರುತಿ ಹಿಂಡಸಗೇರಿ, ಶ್ರೀಕಾಂತ ತೆಲಗರ, ಗುರಯ್ಯ ವಿರಕ್ತಿಮಠ, ಪೂರ್ಣಿಮಾ ಸವದತ್ತಿ, ಸರಸ್ವತಿ ಕಟ್ಟಿಮನಿ, ಶಹನಾಜ, ಪೂಜಾ ಮೆಣಸಿನಕಾಯಿ, ನಾಗರಾಜ ಗುಡದರಿ, ಶಂಕರಗೌಡ ದೊಡ್ಡಮನಿ, ದೊಡ್ಡಪ್ಪಾ ಧರಣಿ, ಬಾಷಾ ಮುದಗಲ್, ಪುನಿತ್ ಅಡಗಲ್ಲ, ಸಿದ್ದು ಮಹಾಂತಒಡೆಯರ್, ಈಶ್ವರ ತೆಗ್ಗಿ, ಶಂಕರ ಪವಾರ, ಗೋಪಾಲ ನಿರಣಕಿ ಸೇರಿದಂತೆ ಹಲವರಿದ್ದರು.