ಗಂಗಾವತಿ:
ಡಿ.ಕೆ. ಶಿವಕುಮಾರ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜೊತೆಗೆ ಅಲ್ಪ ಸಮಯ ಇದ್ದರೂ ಅಭಿವೃದ್ದಿ ಮಾಡುವದಕ್ಕೆ ಕಾಲವಕಾಶ ಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಭೂದೇಶ್ವರ ದೇಗಲು ಪುಣ್ಯ ಕ್ಷೇತ್ರವಾಗಿದೆ. ರಾಮಾಯಣ ಸಮಯದಲ್ಲಿ ಶ್ರೀರಾಮಚಂದ್ರರು ಭೇಟಿ ನೀಡಿದ ಸ್ಥಳವಾಗಿರುವ ಈ ಭೂಮಿಯಲ್ಲಿ ಭೂದೇಶ್ವರ ದೇವರ ದೇವಸ್ಥಾನವನ್ನು ಸ್ಥಾಪನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ದೇವಸ್ಥಾನ ನಿಮಾ೯ಣವಾಗುವ ಮುಂಚಿತವಾಗಿಯೇ ದೇಶದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರ ನಂತರ ಸಿಎಂ ಡಿಕೆಶಿ ಭೇಟಿ ನೀಡಿದ್ದಾರೆ. ನಮ್ಮ ಶಿಷ್ಯನ ರೀತಿ ಇರುವ ಡಿಕೆಶಿ ಸಿಎಂ ಆಗಿರುವುದು ಸಂತಸದ ವಿಷಯವಾಗದೆ. ಅವರು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವುದು ಸಾಕಷ್ಟು ಇದೆ. ಆದರೆ, ಸಮಯ ಕಡಿಮೆ ಇದೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಬಾರಿಯೂ ಡಿಕೆಶಿ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾಥ೯ನೆ ಮಾಡಲಾಗುವುದು ಎಂದು ಹೇಳಿದರು.