ಮೈಸೂರು: ಸಮುದಾಯಕ್ಕೆ ಡಿ. ನಾಗರಾಜು ಸಂಘದ ಖಜಾಂಚಿಯಾಗಿ, ಆಂತರಿಕ ಲೆಕ್ಕಪರಿಶೋಧಕರಾಗಿ ಸಲ್ಲಿಸಿರುವ ಸೇವೆ ಅತ್ಯಂತ ಸ್ಮರಣೀಯವಾದದ್ದು ಎಂದು ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಅವರು ಸ್ಮರಿಸಿದರು.
ಪ್ರಾಮಾಣಿಕ, ಪಾರದರ್ಶಕ, ಪ್ರಬುದ್ಧತೆ, ಪರಿಪಕ್ವತೆಯಿಂದ ಸೇವೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳ ಲೆಕ್ಕವನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟು ಯಾವುದೇ ಲೋಪವಿಲ್ಲದಂತೆ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇಂತಹ ಹಿರಿಯರು ವ್ಯವಸ್ಥೆಗೆ ಮಾದರಿಯಾಗಿರುತ್ತಾರೆ ಎಂದು ಅವರು ಬಣ್ಣಿಸಿದರು.
ಸಂಘ ಸಂಸ್ಥೆಗಳು ಯಾವುದೇ ಆರೋಪಗಳಿಗೆ ಒಳಗಾಗದೆ ಇರುವ ಸಂಖ್ಯೆ ಗಣನೀಯವಾಗಿ ಕಮ್ಮಿ ಇದೆ. ತಮಗೆವಹಿಸಿದ ಜವಾಬ್ದಾರಿಯನ್ನು ಕಳಂಕ ರಹಿತವಾಗಿ ನಿರ್ವಹಿಸಿ ಮಾದರಿಯಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರ ಸೇವೆ ನಮಗೆ ಲಭ್ಯವಿಲ್ಲದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಸೇವೆ ಮತ್ತು ಕಾರ್ಯವೈಕರಿಯನ್ನು ಸಂಘ ಎಂದಿಗೂ ಮರೆಯುವುದಿಲ್ಲ. ಇಂತಹ ವ್ಯಕ್ತಿತ್ವ ಹೊಂದಿದವರನ್ನು ಗೌರವಿಸುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ ಅವರ ಸೇವೆಯನ್ನು ಹಾಗೂ ಸನ್ಮಾನ ಸನ್ಮಾನದ ಔಚಿತ್ಯವನ್ನು ಸಭೆಗೆ ತಿಳಿಸಿದರು. ಸಂಘದ ಅಧ್ಯಕ್ಷ ಎಂ. ನಾರಾಯಣ, ಡಿ. ನಾಗರಾಜ ಅವರ ನಿಷ್ಟೂರ ವ್ಯಕ್ತಿತ್ವ ಹಾಗೂ ಬಾಂಧವ್ಯವನ್ನು ಸ್ಮರಿಸಿದರು.
ಸಮಾರಂಭದಲ್ಲಿ ಉಪಾಧ್ಯಕ್ಷ ಜಿ. ರಮೇಶ್, ಖಜಾಂಚಿ ಕೆ. ಚಂದ್ರಶೇಖರ್, ನಿರ್ದೇಶಕರಾದ ಎಚ್.ವಿ. ನಾಗರಾಜು, ಬಿ.ಕೆ. ಸುರೇಶ್, ಶ್ರೀನಿವಾಸಮೂರ್ತಿ, ಶ್ರೀರಂಗಪಟ್ಟಣ ವಸತಿ ನಿಲಯದ ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ನಿಲಯಪಾಲಕರಾದ ರಾಮಕೃಷ್ಣ ಹಾಗೂ ಸಮುದಾಯದ ಬಂಧುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.