ಮಂಗಳೂರು: ಕರಾವಳಿಯ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಾಯ್ಜಿವರ್ಲ್ಡ್ ಡಾಟ್ ಕಾಮ್‌ನ ಬೆಳ್ಳಿ ಹಬ್ಬ ಕಾರ್ಯಕ್ರಮ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ರೊನಾಲ್ಡ್ ಕೊಲಾಸೊ ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸಲು ಒತ್ತು ನೀಡಬೇಕು. ಸತ್ಯ, ನ್ಯಾಯ, ಧರ್ಮದ ಪರಿಧಿಯೊಳಗೆ ಮಾಧ್ಯಮಗಳು ನಡೆಯಬೇಕು. ದಾಯ್ಜಿವರ್ಲ್ಡ್ ಸಂಸ್ಥೆ ಕೇವಲ ಸುದ್ದಿಗೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿದೆ ಎಂದರು.
ಯೆನೆಪೋಯ ವಿವಿ ಚಾನ್ಸಲರ್ ಡಾ.ಯೇನೆಪೋಯ ಅಬ್ದುಲ್ಲ ಕುಂಞಿ ಮಾತನಾಡಿ, ದಾಯ್ಜಿವರ್ಲ್ಡ್ ಡಾಟ್ ಕಾಮ್ ತನ್ನ ಅತ್ಯುತ್ತಮ ಸೇವೆಯನ್ನು ಸುದ್ದಿಯ ಮೂಲಕ ನೀಡುತ್ತಿದೆ ಎಂದರು.
ಯುಎಇ ಹಿಸ್ನಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ರೊನಾಲ್ಡ್ ಪಿಂಟೊ, ರೋಹನ್ ಕಾರ್ಪೊರೇಶನ್ ಚೇರ್ಮನ್ ರೋಹನ್ ಮೊಂತೇರೊ ಶುಭ ಹಾರೈಸಿದರು.ದಾಯ್ಜಿವರ್ಲ್ಡ್ ಡಾಟ್ ಕಾಮ್ ನಿರ್ದೇಶಕ ವಾಲ್ಟರ್ ನಂದಳಿಕೆ ಸ್ವಾಗತಿಸಿದರು. ಮೆಲ್ವಿನ್ ರೊಡ್ರಿಗಸ್ ವಂದಿಸಿದರು. ನಿರ್ದೇಶಕ ಅಲೆಕ್ಸಸ್ ಕ್ಯಾಸ್ತಲಿನೊ, ಪಾಲುದಾರರಾದ ನೆಲ್ಸನ್ ರೊಡ್ರಿಗಸ್, ಲೀನಾ ವಿಕ್ಟರ್ ಡಿಸೋಜ, ಮೈಕಲ್ ಕ್ಯಾಸ್ತಲಿನೊ, ಡಯನ್ ಡಿಸೋಜ, ರೊನಾಲ್ಡ್ ನಝ್ರೆತ್, ಸ್ಟೀಫನ್ ಮಸ್ಕರೇನಸ್ ಇದ್ದರು.