ನಿತ್ಯ ಧ್ಯಾನ ಮಾಡುವುದರಿಂದ ದೇಹದಲ್ಲಿ ಚೈತನ್ಯ ಶಕ್ತಿ ವೃದ್ಧಿ: ಡಾ.ಸತ್ಯನಾರಾಯಣ

KannadaprabhaNewsNetwork |  
Published : Nov 18, 2024, 12:07 AM IST
12ಕೆಎಂಎನ್ ಡಿ16 | Kannada Prabha

ಸಾರಾಂಶ

ಧ್ಯಾನ ಮಾರ್ಗ ಮೋಕ್ಷ ಸಾಧನೆಯ ಮಾರ್ಗವೂ ಹೌದು. ಬ್ರಹ್ಮರ್ಷಿ ಡಾ.ಸುಭಾಷ್ ಪತ್ರೀಜಿಯವರು ಧ್ಯಾನದ ಮಹತ್ವವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ ಲಕ್ಷಾಂತರ ಜನರನ್ನು ಧ್ಯಾನ ಮಾರ್ಗಕ್ಕೆ ಪರಿವರ್ತಿಸಿ ವಿಶ್ವಗುರುವಾಗಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಅನುಯಾಯಿಗಳನ್ನು ಹೊಂದಿದ್ದಾರೆ. ತಾಲೂಕಿನ ಜನರೂ ಕೂಡ ಈ ಧ್ಯಾನದಲ್ಲಿ ತೊಡಗಿಕೊಳ್ಳುವಂತಾಗಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಧ್ಯಾನ ಒಂದು ವೈಜ್ಞಾನಿಕ ವಿಧಾನ. ಇದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ. ಪ್ರತಿಯೊಬ್ಬರು ನಿತ್ಯ ಅವರವರ ವಯಸ್ಸಿನಷ್ಟು ನಿಮಿಷ ಧ್ಯಾನ ಮಾಡುವುದರಿಂದ ದೇಹದಲ್ಲಿ ಚೈತನ್ಯ ಶಕ್ತಿ ವೃದ್ಧಿಯಾಗಿ ಮನಃಶಾಂತಿ ಲಭಿಸುತ್ತದೆ ಎಂದು ಹಿರಿಯ ಪತ್ರಕರ್ತ ಡಾ. ಸತ್ಯನಾರಾಯಣ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ಪತ್ರೀಜಿ ವೆಜಿಟೇರಿಯನ್ ಮೂವ್‌ಮೆಂಟ್ ಹಾಗೂ ಮಂಡ್ಯ ಪಿರಮಿಡ್ ಸೊಸೈಟಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸಸ್ಯಾಹಾರ ಮತ್ತು ಧ್ಯಾನ ಪ್ರಚಾರ ಜನಜಾಗೃತಿ ಜಾಥಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಧ್ಯಾನ ಮಾರ್ಗ ಮೋಕ್ಷ ಸಾಧನೆಯ ಮಾರ್ಗವೂ ಹೌದು. ಬ್ರಹ್ಮರ್ಷಿ ಡಾ.ಸುಭಾಷ್ ಪತ್ರೀಜಿಯವರು ಧ್ಯಾನದ ಮಹತ್ವವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ ಲಕ್ಷಾಂತರ ಜನರನ್ನು ಧ್ಯಾನ ಮಾರ್ಗಕ್ಕೆ ಪರಿವರ್ತಿಸಿ ವಿಶ್ವಗುರುವಾಗಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಅನುಯಾಯಿಗಳನ್ನು ಹೊಂದಿದ್ದಾರೆ. ತಾಲೂಕಿನ ಜನರೂ ಕೂಡ ಈ ಧ್ಯಾನದಲ್ಲಿ ತೊಡಗಿಕೊಳ್ಳುವಂತಾಗಬೇಕು. ಧ್ಯಾನ ಸಾಧನೆಗೆ ಸಸ್ಯಾಹಾರ ಪೂರಕವಾಗಿದೆಪ್ರತಿಯೊಬ್ಬರೂ ಸಸ್ಯಾಹಾರ ರೂಢಿಸಿಕೊಂಡು ಧ್ಯಾನ ಮಾರ್ಗದಲ್ಲಿ ಮುಂದುವರಿಯಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗದಲ್ಲಿ ಗಿಡವನ್ನು ನೆಟ್ಟು ಘೋಷಣೆಯೊಂದಿಗೆ ಭಿತ್ತಿ ಪತ್ರ ಹಿಡಿದು ಪಟ್ಟಣದ ಟಿ.ಮರಿಯಪ್ಪ ವೃತ್ತದ ಮಾರ್ಗವಾಗಿ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದವರೆಗೆ ಸಸ್ಯಾಹಾರ ಜನಜಾಗೃತಿ ಜಾಥಾ ನಡೆಸಲಾಯಿತು.

ಜನಜಾಗೃತಿ ಜಾಥಾಕ್ಕೆ ನಿವೃತ್ತ ಸಂಸ್ಕೃತ ಶಿಕ್ಷಕ ಹಾಗೂ ಹಿರಿಯ ಪತ್ರಕರ್ತ ಸಿ.ಎ.ಭಾಸ್ಕರ್‌ಭಟ್ ಜಾಲನೆ ನೀಡಿದರು. ಶಿಕ್ಷಕರ ಭವನದಲ್ಲಿ ನಡೆದ ಧ್ಯಾನ ಪ್ರಚಾರ ಮತ್ತು ಸಮಾರೋಪ ಸಮಾರಂಭದಲ್ಲಿ ಪಟ್ಟಣದ ಮಾದರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಎಸ್.ಮಂಜುನಾಥ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಭೈರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ಯೋಗ ಶಿಕ್ಷಕ ಲಕ್ಷ್ಮಣ್‌ಜೀ, ಡಾ.ಸುಮಂಗಳ ಸಾಲಿಮಠ, ಮಂಜುಳಾ ಸುರೇಶ್, ಡಿ.ಎಸ್. ಪ್ರಕಾಶ್, ಪ್ರಭಾವತಿ, ಬಿ.ನಾಗರಾಜು, ಇ.ಶಿವನಂಜಪ್ಪ, ಜಯಂತಿ, ದೇಶಪ್ರೇಮಿ ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ