ಪದವಿ ಜೊತೆ ಕೌಶಲ್ಯ ಶಿಕ್ಷಣವಿದ್ದರೆ ಮಾತ್ರ ಯಶಸ್ಸು

KannadaprabhaNewsNetwork |  
Published : Nov 18, 2024, 12:07 AM IST
ಚಿತ್ರ 2 | Kannada Prabha

ಸಾರಾಂಶ

Success is only if there is skill education along with degree

-ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರ ಉದ್ಘಾಟಿಸಿದ ಡಾ.ಬಸವಕುಮಾರ ಸ್ವಾಮೀಜಿ

---

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪದವಿ ಜೊತೆ ಕೌಶಲ್ಯ ಶಿಕ್ಷಣವಿದ್ದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಾತ್ಮಕ ಕಮಿಟಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ವಾಣಿಗೋತ್ರ ಕಾಂಪ್ಲೆಕ್ಸ್ ನಲ್ಲಿ ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಕೌಶಲ್ಯವಿಲ್ಲದಿದ್ದರೆ ಅಂಕ ಗಳಿಸಿ ಪ್ರಯೋಜನವಿಲ್ಲ. ಪದವಿಯ ಜೊತೆ ಕೌಶಲ್ಯ ಕೋರ್ಸ್ ಮಾಡಿ ಸರ್ಟಿಫಿಕೆಟ್‌ ಗಳನ್ನಿಟ್ಟುಕೊಂಡರೆ ಬೆಂಗಳೂರಿನ ಮೆಟ್ರೋದಂತ ಕಡೆ ಕೆಲಸಗಳಿಗೆ ಅವಕಾಶವಿರುತ್ತದೆ. ಅಧ್ಯಯನಕ್ಕಿಂತ ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.

ಯಾವುದೇ ಒಂದು ಸಂಸ್ಥೆ ಆರಂಭಿಸಿದರೂ ಲಾಭಕ್ಕಿಂತ ಉಪಯುಕ್ತ ಕೆಲಸಕ್ಕೆ ಪ್ರಾಶಸ್ತ್ಯ ಕೊಡಬೇಕು. ಇಂಜಿನಿಯರಿಂಗ್ ಇನ್ನಿತರೆ ಉನ್ನತ ಶಿಕ್ಷಣ ಪಡೆದವರೆಲ್ಲಾ ಬೆಂಗಳೂರು, ಮಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಹಾಗಾಗಿ, ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಇಂತಹ ಕೌಶಲ್ಯಯುಕ್ತ ತರಬೇತಿಯ ಅವಶ್ಯಕತೆಯಿದೆ.

ಅನೇಕ ಪದವೀಧರರಿಗೆ ಕೌಶಲ್ಯವಿರುವುದಿಲ್ಲ. ಇದ್ದರೂ ಕೆಲವರಿಗೆ ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನವಿರುವುದಿಲ್ಲ. ವೃತ್ತಿಗಿಂತ ಕರ್ತವ್ಯಕ್ಕೆ ಪ್ರಾಧಾನ್ಯತೆ ಕೊಡಬೇಕು. ಇಲ್ಲಿ ತರಬೇತಿ ಪಡೆಯುವ ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.

ಮರ್ಚೆಂಟ್ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಮಾನವ ಹಕ್ಕುಗಳ ಆಯೋಗದ ಸದಸ್ಯ ನೂರುಲ್ ಅಮೀದ್, ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರದ ಸಂಸ್ಥಾಪಕರಾದ ರಾಘವೇಂದ್ರ ಎನ್. ಜಾಕೀರ್ ಉಸ್ಮಾನಿ, ಶಂಕರ್ ಅಮೂಲ್ಯ ಎಸ್ ಇದ್ದರು.

--

ಫೋಟೊ: ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರವನ್ನು ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ