ಮತ ನೀಡದ ಡೇರಿ ಸಂಘ ಸೂಪರ್‌ ಸೀಡ್‌

KannadaprabhaNewsNetwork |  
Published : Jun 11, 2025, 11:58 AM IST
ಶಿರ್ಷಿಕೆ-೯ಕೆ.ಎಂ.ಎಲ್‌.ಆರ್.೨-ಮಾಲೂರಿನ ಕೋಚಿಮುಲ್‌ ಒಕ್ಕೂಟದ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ತನ್ನ ಸ್ವಗೃಹದಲ್ಲಿ ಎರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದಲ್ಲಿ  ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ನಂಜೇಗೌಡ ಅವರು ನಡೆಸಿದ್ದ ದುರಾಡಳಿತ ವನ್ನು ದಾಖಲೆ ಮೂಲಕ ಪ್ರದರ್ಶಿಸಿದರು. | Kannada Prabha

ಸಾರಾಂಶ

ನಾಲ್ಕು ಹೋಬಳಿ ಇರುವ ಮಾಲೂರು ತಾಲೂಕಿನಲ್ಲಿ ವಿರೋಧಿಗಳು ಗೆಲ್ಲಬಾರದೆಂಬ ಉದ್ದೇಶದಿಂದ ಒಂದು ಕ್ಷೇತ್ರದಲ್ಲಿ ನಾಲ್ಕು ಹೋಬಳಿಯ ಸಂಘಗಳನ್ನು ಸೇರಿಸಲಾಗಿದೆ. ಇನ್ನೊಂದು ಕ್ಷೇತ್ರವನ್ನು ಕೇವಲ ೨ ಹೋಬಳಿ ವ್ಯಾಪ್ತಿಯ ಸಂಘಗಳನ್ನು ಸೇರಿಸಲಾಗಿದೆ. ಶಾಸಕರು ತಮಗೆ ಮತ ಸಿಗುವುದಿಲ್ಲ ಎಂಬ ಖಚಿತ ಮಾಹಿತಿವುಳ್ಳ ಹಾಲು ಸಂಘಗಳನ್ನು ಸೂಪರ್‌ ಸೀಡ್‌ ಮಾಡುತ್ತಿದ್ದಾರೆ.

ಕೋಚಿಮುಲ್‌ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್‌ ಆರೋಪ

ಮಾಲೂರಿನಲ್ಲಿ ತಾರತಮ್ಯ, ಗೆಲುವಿಗಾಗಿ ರಾಜಕೀಯ, ಭಾರಿ ನಷ್ಟದಲ್ಲಿ ಚಿಮುಲ್‌, ಕೋಚಿಮುಲ್‌ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್‌, ಮಾಲೂರು

ನಾಲ್ಕು ಹೋಬಳಿ ಇರುವ ಮಾಲೂರು ತಾಲೂಕಿನಲ್ಲಿ ವಿರೋಧಿಗಳು ಗೆಲ್ಲಬಾರದೆಂಬ ಉದ್ದೇಶದಿಂದ ಒಂದು ಕ್ಷೇತ್ರದಲ್ಲಿ ನಾಲ್ಕು ಹೋಬಳಿಯ ಸಂಘಗಳನ್ನು ಸೇರಿಸಲಾಗಿದೆ. ಇನ್ನೊಂದು ಕ್ಷೇತ್ರವನ್ನು ಕೇವಲ ೨ ಹೋಬಳಿ ವ್ಯಾಪ್ತಿಯ ಸಂಘಗಳನ್ನು ಸೇರಿಸಲಾಗಿದೆ. ಶಾಸಕರು ತಮಗೆ ಮತ ಸಿಗುವುದಿಲ್ಲ ಎಂಬ ಖಚಿತ ಮಾಹಿತಿವುಳ್ಳ ಹಾಲು ಸಂಘಗಳನ್ನು ಸೂಪರ್‌ ಸೀಡ್‌ ಮಾಡುತ್ತಿದ್ದಾರೆ.ಕನ್ನಡ ಪ್ರಭವಾರ್ತೆ ಮಾಲೂರು

ಚಿಮುಲ್‌ ಚುನಾವಣೆಯಲ್ಲಿ ಗೆಲವು ಸಾಧಿಸಲು ಮತನೀಡದ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸೂಪರ್‌ ಸೀಡ್‌ ಮಾಡಲು ಹೊರಟ್ಟಿರುವ ಶಾಸಕ ನಂಜೇಗೌಡರ ನಿಜ ಬಣ್ಣ ಮುಂದಿನ ದಿನದಲ್ಲಿ ಬಯಲು ಮಾಡುವುದಾಗಿ ಕೋಚಿಮುಲ್‌ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್‌ ಹೇಳಿದರು.

ಅವರು ಪಟ್ಟಣದ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಠಾಚಾರ ಮೂಲಕ ಹಾಲು ಒಕ್ಕೂಟವನ್ನು ನೂರಾರು ಕೋಟಿ ನಷ್ಟಕ್ಕೆ ದೂಡಿದ್ದ ಶಾಸಕರು ತಮ್ಮ ಹುಳಕು ಹೂರ ಜಗತ್ತಿಗೆ ಗೋತ್ತಾಗಬಾರೆದೆಂಬ ಉದ್ದೇಶದಿಂದ ಸಂಘಗಳ ಸೂಪರ್‌ಸೀಡ್‌ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಲೂರಿನಲ್ಲಿ ತಾರತಮ್ಯ

ಕೋಮುಲ್‌ ಚುನಾವಣೆ ಪ್ರಕ್ರೀಯೆ ಪ್ರಾರಂಭವಾಗಿದ್ದು , ಪ್ರತಿ ತಾಲೂಕಿಗೂ ಎರಡು ಸ್ಥಾನ ಹಾಗೂ ಕೋಲಾರಕ್ಕೆ ಮೂರು ಸ್ಥಾನ ಎಂದು ನಿಗದಿ ಪಡಿಸಲಾಗಿದೆ. ತಾಲೂಕಿನಲ್ಲೂ ನಿರ್ದೇಶಕರ ಸ್ಥಾನಗಳನ್ನು ಶೇ.೫೦-೫೦ ಅನುಪಾತದಲ್ಲಿ ವಿಗಂಡಿಸಲಾಗಿದೆ. ಆದರೆ ಮಾಲೂರಲ್ಲಿ ಮಾತ್ರ ಅದು ೮೬ ಮತ ಹಾಗೂ ೬೪ ಮತಗಳ ಕ್ಷೇತ್ರವನ್ನಾಗಿ ಮಾಡಲಾಗಿದೆ.

ನಾಲ್ಕು ಹೋಬಳಿ ಇರುವ ಮಾಲೂರು ತಾಲೂಕಿನಲ್ಲಿ ವಿರೋಧಿಗಳು ಗೆಲ್ಲಬಾರದೆಂಬ ಉದ್ದೇಶದಿಂದ ಒಂದು ಕ್ಷೇತ್ರದಲ್ಲಿ ನಾಲ್ಕು ಹೋಬಳಿಯ ಸಂಘಗಳನ್ನು ಸೇರಿಸಲಾಗಿದೆ. ಇನ್ನೊಂದು ಕ್ಷೇತ್ರವನ್ನು ಕೇವಲ ೨ ಹೋಬಳಿ ವ್ಯಾಪ್ತಿಯ ಸಂಘಗಳನ್ನು ಸೇರಿಸಲಾಗಿದೆ. ಶಾಸಕರು ತಮಗೆ ಮತ ಸಿಗುವುದಿಲ್ಲ ಎಂಬ ಖಚಿತ ಮಾಹಿತಿವುಳ್ಳ ಹಾಲು ಸಂಘಗಳನ್ನು ಅದರ ನಿರ್ದೇಶಕರಿಂದ ಬೆದರಿಕೆ, ಒತ್ತಾಯ ಮೂಲಕ ಸಹಿ ಪಡೆದ ಸೂಪರ್‌ ಸೀಡ್‌ ಮಾಡುತ್ತಿದ್ದಾರೆ ಎಂದು ಅಪಾದಿಸಿದರು. ಭಾರಿ ನಷ್ಟದಲ್ಲಿ ಚಿಮುಲ್‌

ನೂರಾರು ಕೋಟಿ ನಷ್ಠದಲ್ಲಿರುವ ಹಾಲು ಒಕ್ಕೂವು ೧೦೦ ಕೋಟಿ ಲಾಭದಲ್ಲಿದೆ ಎನ್ನುವ ನಂಜೇಗೌಡರು ಏಕೆ ೨ ಬ್ಯಾಂಕ್‌ ಗಳಿಂದ ಒಟ್ಟು ೧೮೨ ಕೋಟಿ ಓಡಿ ಪಡೆದಿದ್ದಾರೆ ಎಂದು ಪ್ರಶ್ನಿಸಿದರು. ಶಾಸಕರಾಗಿರುವುದಕ್ಕೆ ಸರ್ಕಾರದಿಂದ ಕೊಟ್ಟಿರುವ ಕಾರನ್ನು ತೋರಿಸಿ ಕೇವಲ ಮೂರು ವರ್ಚದಲ್ಲಿ ಪೆಟ್ರೋಲ್‌ ಗಾಗಿ ೪೯ ಲಕ್ಷ ರು.ಪಡೆದಿದ್ದಾರೆ. ಇದಲ್ಲದೇ ಸರಿಯಾದ ಆದೇಶ ಇಲ್ಲದೆ ಬೇಕಾ ಬಿಟ್ಟಿ ಖರ್ಚು ಮಾಡಿರುವ ೧೯೪ ಕೋಟಿ ರು.ಗಳ ಅವ್ಯವಹಾರ ಪ್ರಕರಣವನ್ನು ಲೋಕಾಯುಕ್ತರಿಗೆ ನೀಡಲಾಗಿತ್ತು. ಲೋಕಾಯುಕ್ತರು ತನಿಖೆ ನಡೆಸಿ ಅಕ್ರಮವಾಗಿರುವುದನ್ನು ಒಪ್ಪಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಆದರೆ ಕ್ರಮ ಕೈಗೊಂಡಿಲ್ಲ ಎಂದರು.

ಒಟ್ಟು ೧೮ ಸೊಸೈಟಿಗಳನ್ನು ಸೂಪರ್‌ ಸೀಡ್‌ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ,ಸಂಘಗಳ ಅಧ್ಯಕ್ಷರುಗಳು ಈ ಕೊಡಲೇ ಎಂಡಿ ಬಳಿ ಹೋಗಿ ನಿಮ್ಮ ದಾಖಲೆಗಳನ್ನು ವಾಪಸ್‌ ಪಡೆದು ನ್ಯಾಯ ಸಮ್ಮತ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದರು.ಮಾಜಿ ಶಾಸಕ ಕೋಡಿಹಳ್ಳಿ ಮಂಜುನಾಥ್‌ ಗೌಡ,ಗೋಪಾಲ್‌ ಗೌಡ,ಹಿರಿಯ ಸಹಕಾರಿ ಕೃಷ್ಣಾ ರೆಡ್ಡಿ,ಬಿಜೆಪಿ ತಾಲೂಕು ಅಧ್ಯಕ್ಷ ಟಿ.,ಬಿ.ಕೃಷ್ಣಪ್ಪ,ಬೆಳ್ಳಾವಿ ಸೋಮಣ್ಣ, ಮಾಸ್ತಿ ಕಲಂದರ್‌ ಇನ್ನಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ