ರೈತರ ಆದಾಯ ವೃದ್ಧಿಗೆ ಹೈನುಗಾರಿಕೆ ಸಹಕಾರಿ

KannadaprabhaNewsNetwork |  
Published : Aug 27, 2025, 01:00 AM IST
ಪೊಟೊ-25ಕೆಎನ್‌ಎಲ್‌ಎಮ್‌1-ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡೇಮಾರನಹಳ್ಳಿ ಗ್ರಾಮದ ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ಅವರಣದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಸಹಯೋಗದಲ್ಲಿ ಎಂಟು ರೋಟರಿ ಸಂಸ್ಥೆ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ, ಕೆಎಲ್‌ಇ ಡೆಂಟಲ್ ಸೈನ್ಸ್ ಸೇರಿದಂತೆ ಗ್ರಾಮ ವಿಕಾಸ ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ   ಬರಡು ರಾಸುಗಳಿಗೆ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮವನ್ನುರೋಟರಿ ಅದ್ಯಕ್ಷ ಜಿ.ಆರ್.ನಾಗರಾಜು ಉದ್ಘಾಟಿಸಿದರು. | Kannada Prabha

ಸಾರಾಂಶ

ನೆಲಮಂಗಲ: ರೈತರ ಆದಾಯ ವೃದ್ಧಿಗೆ ಹೈನುಗಾರಿಕೆ ಸಹಕಾರಿ. ರಾಸುಗಳು ರೈತರ ಜೀವನಾಡಿ ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ನೆಲಮಂಗಲ: ರೈತರ ಆದಾಯ ವೃದ್ಧಿಗೆ ಹೈನುಗಾರಿಕೆ ಸಹಕಾರಿ. ರಾಸುಗಳು ರೈತರ ಜೀವನಾಡಿ ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ತಾಲೂಕಿನ ಗುಡೇಮಾರನಹಳ್ಳಿಯಲ್ಲಿ ನೆಲಮಂಗಲ ರೋಟರಿ ಸಂಸ್ಥೆ, ಬೆಂಗಳೂರು ಸಪ್ತಗಿರಿ ಆಸ್ಪತ್ರೆ, ಕೆಎಲ್‌ಇ ಡೆಂಟಲ್ ಸೈನ್ಸ್, ಗ್ರಾಮ ವಿಕಾಸ ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಬರಡು ರಾಸುಗಳಿಗೆ ಉಚಿತ ಅರೋಗ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚೆಗೆ ರಾಸುಗಳಲ್ಲಿ ವಿವಿಧ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ರೈತರಲ್ಲಿ ಆತಂಕ ಉಂಟು ಮಾಡಿದೆ. ರಾಸುಗಳ ಆರೋಗ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದೆ ಸೂಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕಿದೆ. ಜತೆಗೆ ಜಾನುವಾರುಗಳಿಗೆ ತಗುಲಬಹುದಾದ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ರಾಸುಗಳಿಗೆ ಆಯೋಜಿಸಿರುವ ಉಚಿತ ಆರೋಗ್ಯ ಶಿಬಿರಗಳು ರೈತರಿಗೆ ವರದಾನವಾಗಿವೆ ಎಂದು ಹೇಳಿದರು.

ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರ್ಪಡಿಸುವ ಪಶು ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಸಿಗುತ್ತಿದೆ. ಕಾಲುಬೇನೆ, ಬಾಯಿಬೇನೆ, ಗಂಟುರೋಗ ಸೇರಿದಂತೆ ಜಾನುವಾರುಗಳಿಗೆ ಹರಡುವ ಅನೇಕ ರೋಗಗಳು ಹಾಗೂ ಔಷಧೋಪಚಾರದ ಬಗ್ಗೆ ರೈತರಿಗೆ ಅರಿವಿರಬೇಕು.‌ ಹಾಲು ಉತ್ಪಾದನೆ, ಬರಡು ರಾಸುವಿಗೆ ಚಿಕಿತ್ಸೆ ಸೇರಿದಂತೆ ಜಾನುರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು. ಹತ್ತಿರದ ಪಶು ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು ಎಂದರು.‌

ಅರೋಗ್ಯ ಶಿಬಿರ: ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆಯಿಂದ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ, ಕೀಲು ಮತ್ತು ಮೂಳೆ, ಮಾತ್ರಪಿಂಡ ಖಾಯಿಲೆ, ಬಿ.ಪಿ, ಶುಗರ್, ನರರೋಗ, ನೇತ್ರ, ದಂತ ಚಿಕಿತ್ಸೆ, ಮಕ್ಕಳು ಮತ್ತು ಸ್ತ್ರೀರೋಗದ ತಜ್ಞರು ಆಗಮಿಸಿದ್ದು ಸುಮಾರು 200ಕ್ಕೂ ಹೆಚ್ಚು ಮಂದಿ ಸಾರ್ವಜನಿಕ ಶಿಬಿರದ ಪ್ರಯೋಜನ ಪಡೆದುಕೊಂಡಿದರು.

ಈ ಸಂದರ್ಭದಲ್ಲಿ ರೋಟರಿ ಮಹಾಲಕ್ಷ್ಮಿ ಅಧ್ಯಕ್ಷ, ಪ್ರಶಾಂತ್.ಡಿ.ರಾವ್, ರೋಟರಿ ಸೋಂಪುರ ಅಧ್ಯಕ್ಷ ಪಿ. ಜಿ.ದೇವರಾಜು, ರೋಟರಿ ವಿಶ್ವನೀಡಂ ಅಧ್ಯಕ್ಷ ಚಂದ್ರಶೇಖರ್, ರೋಟರಿ ಕಾಮಧೇನು ಅಧ್ಯಕ್ಷ ಚಂದನ್‌ಗೌಡ, ರೋಟರಿ ಅರುಣೋದಯ ಅದ್ಯಕ್ಷ ಎಂ.ಗಂಗಣ್ಣ, ಗ್ರಾಪಂ ಅಧ್ಯಕ್ಷ ದಾಸಪ್ಪ, ಉಪಾಧ್ಯಕ್ಷೆ ಗೌರಮ್ಮ, ಮುಖಂಡ ಹೇಮಂತ್, ನೆಲಮಂಗಲ ರೋಟರಿ ಖಜಾಂಚಿ ಎಸ್.ಗಂಗರಾಜು, ನಿರ್ದೇಶಕ ಶಿವಶಂಕರ್,ಪ್ರಸಾದ್, ಲೋಕೇಶ್, ಸಿ.ಜಿ.‌ಮಂಜುನಾಥ್‌ಗೌಡ, ಸುಶೀಲ್, ಎನ್.ಜಿ.ನಾಗರಾಜು, ದೊಡ್ಡನರಸಿಂಹಯ್ಯ, ಕುಮಾರ್ ಮಂಜುನಾಥ್, ಜಯಂತ್, ಬಸವರಾಜು, ಚಿರಂಜೀವಿ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-25ಕೆಎನ್‌ಎಲ್‌ಎಮ್‌1-

ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿಯಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಸಹಯೋಗದಲ್ಲಿ ಎಂಟು ರೋಟರಿ ಸಂಸ್ಥೆ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ, ಕೆಎಲ್‌ಇ ಡೆಂಟಲ್ ಸೈನ್ಸ್, ಗ್ರಾಮ ವಿಕಾಸ ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಬರಡು ರಾಸುಗಳಿಗೆ ಉಚಿತ ಆರೋಗ್ಯ ಶಿಬಿರವನ್ನು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ