ರೈತ ನೆಮ್ಮದಿ ಬದುಕು ಸಾಗಿಸಲು ಹೈನಗಾರಿಕೆ ಸಹಕಾರಿ

KannadaprabhaNewsNetwork |  
Published : May 20, 2024, 01:34 AM IST
ಶಿರಾ ತಾಲೂಕಿನ ಗಿರಿನಾಥನಹಳ್ಳಿ ಗ್ರಾಮದಲ್ಲಿ ಕುಂಚಿಟಿಗ ಅಲ್ಪೇನವರ ಗೋತ್ರದ ಶ್ರೀ ಅಮ್ಮಾಜಮ್ಮ ಕಾವಲೇಶ್ವರಿ ದೇವಿಯ ನೂತನ ವಿಮಾನ ಗೋಪುರ ಪ್ರತಿಷ್ಠಾಪನಾ ಹಾಗೂ ಜಲಧಿ ಮಹೋತ್ಸವದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಬರದ ಸಂಕಷ್ಟದಲ್ಲೂ ರೈತನ ಜೀವನಕ್ಕೆ ಆಸರೆಯಾಗಿರುವ ಹೈನುಗಾರಿಕೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಹಾಲು ಒಕ್ಕೂಟಗಳ ವ್ಯವಸ್ಥೆಯಲ್ಲಿ ಸರ್ಕಾರ ಹಸ್ತಕ್ಷೇಪ ಹಾಗೂ ಸ್ವಾರ್ಥ ರಾಜಕೀಯ ಮಾಡಬಾರದು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಬರದ ಸಂಕಷ್ಟದಲ್ಲೂ ರೈತನ ಜೀವನಕ್ಕೆ ಆಸರೆಯಾಗಿರುವ ಹೈನುಗಾರಿಕೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಹಾಲು ಒಕ್ಕೂಟಗಳ ವ್ಯವಸ್ಥೆಯಲ್ಲಿ ಸರ್ಕಾರ ಹಸ್ತಕ್ಷೇಪ ಹಾಗೂ ಸ್ವಾರ್ಥ ರಾಜಕೀಯ ಮಾಡಬಾರದು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ತಾಲೂಕಿನ ಕಸಬಾ ಹೋಬಳಿಯ ಗಿರಿನಾಥನಹಳ್ಳಿ ಗ್ರಾಮದಲ್ಲಿ ಕುಂಚಿಟಿಗ ಅಲ್ಪೇನವರ ಗೋತ್ರದ ಶ್ರೀ ಅಮ್ಮಾಜಮ್ಮ ಕಾವಲೇಶ್ವರಿ ದೇವಿಯ ನೂತನ ವಿಮಾನ ಗೋಪುರ ಪ್ರತಿಷ್ಠಾಪನಾ ಹಾಗೂ ಜಲಧಿ ಮಹೋತ್ಸವದಲ್ಲಿ ಮಾತನಾಡಿದರು. ಹಾಲು ಉತ್ಪಾದನೆಯಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ. ಹೈನುಗಾರಿಕೆಯಿಂದ ಲಕ್ಷಾಂತರ ರೈತರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇವರನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಯೋಜನೆಗಳನ್ನು ರೂಪಿಸಿ ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡಿದರೆ ರೈತ ಹರ್ಷಗೊಳ್ಳಲಿದ್ದಾನೆ ಎಂದರು.

ದೇವರನ್ನು ಪ್ರತಿಷ್ಠಾಪನೆ ಮಾಡಿ ಯಾವುದೇ ಕಲ್ಮಶವಿಲ್ಲದೆ ಮುಗ್ಧ ಮನಸ್ಸಿನಿಂದ ಆರಾಧಿಸಿದರೆ ಗ್ರಾಮಗಳ ಅಭಿವೃದ್ಧಿ ಜೊತೆಗೆ ಭಗವಂತ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ. ದೇವರು ಸಂತೃಪ್ತನಾದರೆ ನಾಡು ಕೂಡ ಸಂತೃಪ್ತಿ ಕಾಣಲಿದೆ ಎಂದು ಹೇಳಿದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ, ದೇವತಾ ಉತ್ಸವಗಳು ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತವೆ. ಶ್ರೀ ಅಮ್ಮಜಮ್ಮ ಕಾವಲೇಶ್ವರಿ ದೇವಿ ಆಶೀರ್ವಾದದಿಂದ ನಾಡಿನಲ್ಲಿ ಸಂತೃಪ್ತಿ ಮಳೆ ಬೆಳೆಯಾಗಿ ರೈತನ ಬದುಕು ಹಸನಾಗಿಗಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ