ಹೈನುಗಾರಿಕೆಯಿಂದ ಮಹಿಳೆಯರ ಬದುಕು ಹಸನು: ಶಿವಪ್ಪ ವಾದಿ

KannadaprabhaNewsNetwork |  
Published : Sep 21, 2024, 01:55 AM IST
   20ಕೆಕೆಆರ್1:ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ  ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಜರುಗಿದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಪಶುಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಹೇಳಿದರು.

ಕುಕನೂರು: ಗ್ರಾಮೀಣ ರೈತ ಮಹಿಳೆಯರಿಗೆ ಬದುಕು ಹಸನು ಮಾಡುವಲ್ಲಿ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಜರುಗಿದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಶು ಸಂಗೋಪನೆ ರೈತರ ಅವಿಭಾಜ್ಯ ಅಂಗ. ಪಶುಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು. ಆಗ ಮಾತ್ರ ರೈತರ ಆದಾಯ ಹೆಚ್ಚಳಗೊಂಡು ಬದುಕು ಹಸನಾಗುತ್ತದೆ ಎಂದರು.

ತಾಲೂಕಿನಲ್ಲಿ ವೈದ್ಯರ ಸಮಸ್ಯೆ ಇದ್ದು ಶೀಘ್ರದಲ್ಲಿಯೇ ವೈದ್ಯರನ್ನು ನಿಯೋಜಿಸಲಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ₹೫ ಲಕ್ಷ ಸಹಾಯಧನ ಕೊಡಿಸಲಾಗುವುದು ಎಂಬ ಭರವಸೆ ನೀಡಿದರು.

ರಾಬಕೊವಿ ಒಕ್ಕೂಟದ ನಿರ್ದೇಶಕಿ ಕವಿತಾ ಗುಳಗಣ್ಣನವರ ಮಾತನಾಡಿ, ಚಿಕೇನಕೊಪ್ಪ ಸಂಘಕ್ಕೆ ಒಕ್ಕೂಟದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಜಿಲ್ಲೆಯಲ್ಲಿಯೇ ಉತ್ತಮ ಮಾದರಿ ಸಂಘವಾಗಿ ಹೊರಹೊಮ್ಮಲಿ, ಸಂಘದ ಕಾರ್ಯ ಚಟುವಟಿಕೆಗೆ ಒಕ್ಕೂಟ ಸದಾ ಬೆಂಬಲವಾಗಿರುತ್ತದೆ ಎಂದರು.

ಗ್ರಾಪಂ ಉಪಾಧ್ಯಕ್ಷ ಮಹೇಂದ್ರಕುಮಾರ ಗದಗ ಮಾತನಾಡಿ, ಗ್ರಾಮದಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಅಗತ್ಯ. ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಲು ಉತ್ಪಾದನೆ ಮಾಡಿ ಆರ್ಥಿಕವಾಗಿ ಮುಂದೆ ಬರಲಿ ಎಂದರು.

ಸಾನ್ನಿಧ್ಯ ವಹಿಸಿ ಶಂಭುಲಿಂಗಾರೂಢ ಆಶ್ರಮದ ಪೀಠಾಧಿಪತಿ ಅನ್ನದಾನಭಾರತಿ ಸ್ವಾಮೀಜಿ, ವೇದಮೂರ್ತಿ ಶಿವಕುಮಾರಯ್ಯ ಹಿರೇಮಠ ಮಾತನಾಡಿ, ಹೈನುಗಾರಿಕೆಯಿಂದ ಆರ್ಥಿಕತೆ ವೃದ್ಧಿಸಿಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷೆ ರೇಣುಕಾ ಕಾಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ವೀರಪ್ಪ ಬಿಸನಳ್ಳಿ, ಬಸವಲಿಂಗಪ್ಪ ವಕ್ಕಳದ, ಬಸಪ್ಪ ವಕ್ಕಳದ, ಶಿವಪ್ಪ ರಾಜೂರು, ಮಂಡಲ ಪಂಚಾಯಿತಿ ಮಾಜಿ ಪ್ರಧಾನರಾದ ಮಲ್ಲಪ್ಪಜ್ಜ, ಗ್ರಾಪಂ ಸದಸ್ಯರಾದ ಚಿದಾನಂದ ಮ್ಯಾಗಳಮನಿ, ಲಲಿತಾ ಅಡಗಿಮನಿ, ವಿಜಯಲಕ್ಷ್ಮೀ ಮಂಗಳೂರು, ಉಪವ್ಯವಸ್ಥಾಪಕ ಡಾ. ಗಂಗಾಧರ ದಿವಟರ, ವಿಸ್ತರಣಾಧಿಕಾರಿ ರತ್ನಾ ಹಕ್ಕಂಡಿ, ಸಮಾಲೋಚಕಿ ಅನಿತಾ ಹಿರೇಮಠ, ಕಾರ್ಯದರ್ಶಿ ನಂದಿನಿ ಬಿಸನಳ್ಳಿ, ಅಶೋಕ ಅಣಗೌಡ್ರ, ಪ್ರಭು ತೆಕ್ಕಲಕೋಟಿ, ಯುವ ಪತ್ರಕರ್ತ ಮಲ್ಲು ಮಾಟರಂಗಿ ಮಾತನಾಡಿದರು. ಸಹಕಾರ ಸಂಘದ ಸದಸ್ಯರು, ಗುರು-ಹಿರಿಯರು, ಯುವಕರು, ಮಹಿಳೆಯರು ಇದ್ದರು.

ಹಾಲು ಹಾಕಲು ಸ್ಟೀಲ್ ಕ್ಯಾನುಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧನೆ ಮಾಡಿದ ಮಹನೀಯರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು