ಹೈನುಗಾರಿಕೆ ರೈತರಿಗೆ ಲಾಭದಾಯಕ ಉಪಕಸುಬು: ಶಾಸಕ ಶರತ್‌

KannadaprabhaNewsNetwork |  
Published : Aug 08, 2026, 01:45 AM IST
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಹೈನುದಾರರ ಕುಟುಂಬಕ್ಕೆ ಮರಣ ವಿಮೆ, ವೈಧ್ಯಕೀಯ ವೆಚ್ಚದ ಚೆಕ್ ವಿತರಣೆಯನ್ನು ಶಾಸಕ ಶರತ್ ಬಚ್ಚೇಗೌಡ ನೆರವೇರಿಸಿದರು, ನಿರ್ದೇಶಕ ಬಿ.ವಿ.ಸತೀಶಗೌಡ ಇತರರು ಇದ್ದರು. | Kannada Prabha

ಸಾರಾಂಶ

ಹೈನುಗಾರಿಕೆ ಬಡ ರೈತರಿಗೆ ಆದಾಯ ತರುವ ಗ್ಯಾರಂಟಿ ಉಪಕಸುಬಾಗಿದ್ದು ,ಇದಕ್ಕೆ ಪೂರಕವಾಗಿ ಬೆಂಗಳೂರು ಹಾಲು ಒಕ್ಕೂಟ ಸದಾ ಬೆನ್ನಲುಬಾಗಿ ನಿಂತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

-ಪರಿಹಾರದ ಚೆಕ್‌ಗಳ ವಿತರಣೆ

-ಬೆಂಡಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ವಿಮೆ, ಮರಣ ವಿಮೆ, ವೈದ್ಯಕೀಯ ವೆಚ್ಚಗಳ ಚೆಕ್ ಗಳ ವಿತರಣೆ

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಹೈನುಗಾರಿಕೆ ಬಡ ರೈತರಿಗೆ ಆದಾಯ ತರುವ ಗ್ಯಾರಂಟಿ ಉಪಕಸುಬಾಗಿದ್ದು ,ಇದಕ್ಕೆ ಪೂರಕವಾಗಿ ಬೆಂಗಳೂರು ಹಾಲು ಒಕ್ಕೂಟ ಸದಾ ಬೆನ್ನಲುಬಾಗಿ ನಿಂತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೋಬಳಿಯ ಬೆಂಡಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ವಿಮೆ, ಮರಣ ವಿಮೆ, ವೈದ್ಯಕೀಯ ವೆಚ್ಚಗಳ ಚೆಕ್ ಗಳನ್ನು ವಿತರಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ೧೫೫ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ೧.೫೫ ಲಕ್ಷ ಲೀಟರ್ ಹಾಲು ಬೆಂಗಳೂರು ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದೆ. ಸರ್ಕಾರಿ ಸವಲತ್ತುಗಳ ಜೊತೆಯಲ್ಲಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರ ಕೋಟಾದಲ್ಲಿಯೂ ಸವಲತ್ತುಗಳನ್ನು ನೀಡುತ್ತಿರುವುದು ನಿಮ್ಮ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.

ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಹೊಸಕೋಟೆಯಲ್ಲಿ ಮಳೆ ಕಡಿಮೆ ಇದ್ದರು ಸಹ ಪಶುಗಳ ಮೇವಿಗಾಗಿ ೩೦೦ ಕ್ವಿಂಟಲ್ ಜೋಳ ವಿತರಿಸಲಾಗಿದೆ. ಮೇವಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ೨೦೨೫-೨೬ನೇ ಸಾಲಿನಲ್ಲಿ ಬಮೂಲ್ ವಿಮೆ ಯೋಜನೆಯಡಿ ಮರಣ ಹೊಂದಿದ ಸದಸ್ಯರಿಗೆ ತಲಾ ೧ ಲಕ್ಷ ರು.ಗಳಂತೆ ಐವರಿಗೆ ೪ ಲಕ್ಷ ವಿಮೆ ಚೆಕ್, ೨೦೨೬-೨೭ನೇ ಸಾಲಿನ ಸಕ್ರಿಯ ಸದಸ್ಯರ ಹಾಗೂ ಅವಲಂಬಿತರ ಒಳರೋಗಿ ವೈದ್ಯಕೀಯ ವೆಚ್ಚ ೨.೧೩ ಲಕ್ಷ , ೭೦ ವರ್ಷ ಮೇಲ್ಪಟ್ಟ ಸದಸ್ಯರ ಮರಣ ಪರಿಹಾರ ೯೦ ಸಾವಿರ ಸೇರಿದಂತೆ ೭.3 ಲಕ್ಷ ಚೆಕ್ ನೀಡಲಾಗಿದೆ ಎಂದರು.

ಹೊಸಕೋಟೆ ಶಿಬಿರದ ಡಾ.ಸಂತೋಷ್ ಮಾತನಾಡಿ, ಪಶು ಆಹಾರದಲ್ಲಿ ವ್ಯತ್ಯಾಸವಾಗಿದ್ದು ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಹೊಸಕೋಟೆ ತಾಲ್ಲೂಕಿನಲಿ ಪ್ರಸ್ತುತ ೧.೫೫ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ರಿಂದ ೩ ಲಕ್ಷ ಲೀಟರ್‌ವರಗೆ ಹೆಚ್ಚಬಹುದು. ಕೊಳತೂರು ಹಾಲು ಉತ್ಪಾದಕರ ಸಂಘ ಹಾಲು ಸರಬರಾಜಿನಲ್ಲಿ ಪ್ರಥಮ ಸ್ಥಾನ ಹಾಗೂ ಬೆಂಡಿಗಾನಹಳ್ಳಿ ಸಂಘ ೨ನೇ ಸ್ಥಾನದಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ಉತ್ತಮ ಸಂಘ ಒಬಳಹಳ್ಳಿ(ಪ್ರಥಮ) ಎಂ.ಸತ್ಯವಾರ (ದ್ವಿತೀಯ) ಖಾಜಿಹೊಸಹಳ್ಳಿ(ತೃತೀಯ) ಬಹುಮಾನ ನೀಡಲಾಯಿತು. ಉತ್ತಮ ಮುಖ್ಯ ಕಾರ್ಯನಿವಾರ್ಹಕ ಕಂಬಳಿಪುರ ಡೇರಿ, ಅತ್ಯುತ್ತಮ ಹಾಲು ಪರೀಕ್ಷಕ ಬಿಸನಹಳ್ಳೀ ಡೇರಿ ಮಾರೇಶ್, ಅತ್ಯುತ್ತಮ ಶುಚಿಗಾರ ಚಂದ್ರೆಶೇಖರ್, ಅತ್ಯುತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತೆ ಹೆತ್ತಕ್ಕಿ ಮಂಜುನಾಥ್, ಅತ್ಯುತ್ತಮ ಹಾಲು ಉತ್ಪಾದಕರ ಮಹಿಳಾ ಸಂಘ ಮಂಚಪನಹಳ್ಳಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಂಅರ್‌ಡಿ ಸದಸ್ಯ ಸುಬ್ಬರಾಜು, ಚೊಕ್ಕಹಳ್ಳಿ ಡೇರಿ ಅಧ್ಯಕ್ಷ ರಾಜಣ್ಣ, ಹೊಸಕೋಟೆ ಶಿಬಿರದ ವ್ಯವಸ್ಥಾಪಕರಾದ ಡಾ.ಮಧುಸೂದನ್, ವಿನಯಕುಮಾರ್, ವಿಸ್ತರಣಾಧಿಕಾರಿ ಅನಂದ್, ರಮೇಶ್, ವಿದ್ಯಾಶ್ರೀ, ಪವಿತ್ರ, ರಘುನಾಥ್, ಬಮೂಲ್ ಟ್ರಸ್ಟ್ ನವೀನ್ ಕುಮಾರ್, ಕೃಷಿ ಅಧಿಕಾರಿ ಸೌಮ್ಯ, ಡೇರಿ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಇತರರರಿದ್ದರು.(ಫೋಟೋ ಕ್ಯಾಪ್ಷನ್‌)ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ಹೈನುದಾರರ ಕುಟುಂಬಗಳಿಗೆ ವಿವಿಧ ಪರಿಹಾರದ ಚೆಕ್‌ಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು. ನಿರ್ದೇಶಕ ಬಿ.ವಿ.ಸತೀಶಗೌಡ, ಬಿಎಂಅರ್‌ಡಿ ಸದಸ್ಯ ಸುಬ್ಬರಾಜು, ಚೊಕ್ಕಹಳ್ಳಿ ಡೇರಿ ಅಧ್ಯಕ್ಷ ರಾಜಣ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರಗೋಡು ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ
ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪರಿವರ್ತನೆಗಾಗಿ ಪಾದಯಾತ್ರೆ