ರಾಮನಗರ: ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದು, ಹೈನುಗಾರಿಕೆಯಲ್ಲಿ ರೈತರು ಆಧುನಿಕತೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಸಲಹೆ ನೀಡಿದುರ.
ತಾಲೂಕಿನ ಲಕ್ಕೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಹಾಲು ಉತ್ಪಾದಕರ ಸಂಘದ ಬೆಳವಣಿಗೆಯ ಹಿಂದೆ ರೈತರ ಬಹು ದೊಡ್ಡ ಕೊಡುಗೆ ಇರುತ್ತದೆ ಎಂದು ತಿಳಿಸಿದರು.ರೈತರ ಉತ್ತಮ ತಳಿಯ ರಾಸುಗಳನ್ನು ಸಾಕಬೇಕು. ಸಾಕಿದ ಹಸುಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ರಾಸುಗಳನ್ನು ನೀವು ಉತ್ತಮವಾಗಿ ಆರೈಕೆ ಮಾಡಿದರೆ, ಅದು ಹೆಚ್ಚು ಹಾಲು ಉತ್ಪಾಧಿಸುವ ಮೂಲಕ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಇದರಿಂದ ರೈತರ ಹೆಚ್ಚು ಲಾಭ ಗಳಿಸುವ ಜತೆಗೆ ಸಂಘದ ಪ್ರಗತಿಗೂ ಸಹಕರಿಸಬಹುದು ಎಂದು ಹೇಳಿದರು.
ಹಾಲು ಉತ್ಪಾದಕ ರೈತರ ಪರಿಶ್ರಮದಿಂದಲೇ ಸ್ಥಳೀಯ ಡೇರಿಗಳ ಅಭಿವೃದ್ಧಿ ಸಾಧ್ಯ. ರೈತರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸದಿದ್ದರೆ ಸಂಘ ಅಭಿವೃಧ್ಧಿ ಹೊಂದಲು ಸಾಧ್ಯವಿಲ್ಲ. ಸಂಘ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದು ಮುಂದೆ ಮತ್ತಷ್ಟು ಅಭಿವೃದ್ಧಿ ಕಂಡು ರೈತರಿಗೆ ನೆರವಾಗಲಿ ಎಂದರು.ಶಾಸಕರ ಭೇಟಿ:
ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಸಹ ಭೇಟಿ ನೀಡಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಮಾಜಿ ಶಾಸಕ ಕೆ. ರಾಜು ಈ ವೇಳೆ ಹಾಜರಿದ್ದರು. ಕೆಎಂಎಫ್ ಮಾಜಿ ಅಧ್ಯಕ್ಷ ಹಾಲಿ ಬಮೂಲ್ ನಿರ್ದೇಶಕ ಪಿ.ನಾಗರಾಜು, ರಾಮನಗರ ಶಿಬಿರ ಉಪ ವ್ಯವಸ್ಥಾಪಕ ಡಾ. ಗಣೇಶ್, ವಿಸ್ತರಣಾಧಿಕಾರಿ ವೆಂಕಟೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೆಂಗಲ್ ಯೋಜನಾಧಿಕಾರಿ ನಾಗಭೂಷಣ್ ಪೈ ಸೇರಿದಂತೆ ಹಲವು ಗಣ್ಯರು ಅಧಿಕಾರಿಗಳು, ಭೆಟಿ ನೀಡಿ ಶುಭ ಹಾರೈಸಿದರು.ಸಂಘದ ಅಧ್ಯಕ್ಷ ವೈಕುಂಠೇಗೌಡ, ಉಪಾಧ್ಯಕ್ಷ ಜಯಣ್ಣ, ಗ್ರಾಪಂ ಸದಸ್ಯೆ ನವೀನ ನಾಗರಾಜು, ನಿರ್ದೇಶಕರಾದ ಮಹದೇವು, ಪುಟ್ಟಮಾದಯ್ಯ, ಮರೀಗೌಡ, ರವಿ, ಜಯಲಕ್ಷ್ಮಮ್ಮ, ನಾಗರತ್ನಮ್ಮ ರೈತ ಮುಖಂಡರುಗಳಾದ ಲೋಕೇಶ್, ಜಯಣ್ಣ, ನಾರಾಯಣಗೌಡ, ಕೃಷ್ಣೇಗೌಡ, ಎಲ್.ವಿ. ಶಿವಣ್ಣ, ಸ್ವಾಮಿ, ಆನಂದ್, ಕರೀಗೌಡ ಡೈರಿ ಕಾರ್ಯನಿರ್ವಾಹಕಿ ಲತಾ, ಕಾರ್ಯದರ್ಶಿಗಳಾದ ಚಲುವರಾಜು, ಸತೀಶ್, ಪ್ರಕಾಶ್, ಯೋಗಾನಂದ್, ಮಹೇಶ್, ಲೋಕೇಶ್, ಅರ್ಕೇಶ್ ಸಿಬ್ಬಂದಿಗಳಾದ ಪ್ರಸನ್ನ, ಆನಂದ್ ಇತರರಿದ್ದರು.
ಪೊಟೋ೧೦ಸಿಪಿಟಿ೮:ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.