ಹೈನುಗಾರಿಕೆ ನಡೆಸುವುದು ಬಹಳ ಕಷ್ಟಕರ: ಶಿವಕುಮಾರ್

KannadaprabhaNewsNetwork |  
Published : Jul 06, 2026, 01:45 AM IST
5ಕೆಎಂಎನ್ ಡಿ14 | Kannada Prabha

ಸಾರಾಂಶ

ಬೀರಶೆಟ್ಟಹಳ್ಳಿ ಡೈರಿಯಲ್ಲಿ ದಿನಕ್ಕೆ 1400 ಲೀಟರ್ ಹಾಲು ಉತ್ಪಾದನೆ ಮಾಡಿ ಮಾದರಿಯಾಗಿದೆ. ಅಲ್ಲದೆ ಸಮಾಜ ಸೇವಕ ಅರವಿಂದ್ ರಾಘವನ್ ಹಾಗೂ ದಾನಿಗಳ ಮೂಲಕ ನೆರವು ಪಡೆದು ಹಾಲು ಉತ್ಪಾದಕರಿಗೆ ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ ಹಾಗೂಹಸುವಿನ ಮೇವಿನ ಹಿಂಡಿ ಬಕೆಟ್ ಉಚಿತವಾಗಿ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೀರಶೆಟ್ಟಹಳ್ಳಿಯ ಹೈನುಗಾರಿಕೆ ರೈತರಿಗೆ ಹಸುವಿನ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರದ ಸಹಾಯಧನ, ಹಸುವಿನ ಹಿಂಡಿ ಬಕೆಟ್ ಅನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ವಿತರಿಸಿದರು.

ಮಂಡ್ಯ ಹಾಲು ಉತ್ಪಾದಕರ ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದಿಂದ ದಾನಿಗಳ ಅನುದಾನದಲ್ಲಿ ರೈತರಿಗೆ ರಬ್ಬರ್ ಮ್ಯಾಟ್. ಮೇವು ಕತ್ತರಿಸುವ ಯಂತ್ರದ ಸಹಾಯಧನ ಹಾಗೂ ಪಶು ಆಹಾರದ ಬಕೆಟ್ ಗಳನ್ನು ಹೈನುಗಾರಿಕೆ ಫಲಾನುಭವಿಗಳಿಗೆ ವಿತರಿಸಿದರು.

ನಂತರ ಮಾತನಾಡಿದ ಅವರು, ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹಾಲು ಉತ್ಪಾದಕ ರೈತರಿಗೆ ದೊರಕಿಸಿಕೊಡಬೇಕು ಪಟ್ಟಣ ಪ್ರದೇಶದಲ್ಲಿ ಹಸು ಸಾಕಾಣೆ ಮಾಡಿ ಹೈನುಗಾರಿಕೆ ನಡೆಸುವುದು ಬಹಳ ಕಷ್ಟಕರವಾದ ವಿಚಾರವಾಗಿದೆ ಎಂದರು.

ಬೀರಶೆಟ್ಟಹಳ್ಳಿ ಡೈರಿಯಲ್ಲಿ ದಿನಕ್ಕೆ 1400 ಲೀಟರ್ ಹಾಲು ಉತ್ಪಾದನೆ ಮಾಡಿ ಮಾದರಿಯಾಗಿದೆ. ಅಲ್ಲದೆ ಸಮಾಜ ಸೇವಕ ಅರವಿಂದ್ ರಾಘವನ್ ಹಾಗೂ ದಾನಿಗಳ ಮೂಲಕ ನೆರವು ಪಡೆದು ಹಾಲು ಉತ್ಪಾದಕರಿಗೆ ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ ಹಾಗೂಹಸುವಿನ ಮೇವಿನ ಹಿಂಡಿ ಬಕೆಟ್ ಉಚಿತವಾಗಿ ನೀಡುತ್ತಿದ್ದಾರೆ. ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡಲು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು,

ಮನ್ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ. ಡೇರಿ ಮಾದರಿಯಾಗಿ ಕೆಲಸ ಮಾಡುತ್ತಿದೆ. ದಾನಿಗಳು ಸಮಾಜ ಸೇವಕರಿಂದ ಹಣ ಸಂಗ್ರಹಿಸಿ ಡೈರಿ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಇದೇ ವೇಳೆ ರೈತರಿಗೆ ರಬ್ಬರ್ ಮ್ಯಾಟ್. ಹಸುವಿನ ಆಹಾರದ ಬಕೆಟ್. ಮೇವು ಕತ್ತರಿಸುವ ಯಂತ್ರದ ಸಬ್ಸಿಡಿ ಸಹಾಯಧನ ವಿತರಿಸಲಾಯಿತು. ನಂತರ ಡೈರಿ ಅಧ್ಯಕ್ಷ ಪಿ.ದಿವಾಕರ್ ಮಾತನಾಡಿದರು. ಡೇರಿ ಉಪಾಧ್ಯಕ್ಷ ಗೋ ರಮೇಶ್ ಪಿಜಿ, ನಿರ್ದೇಶಕರಾದ ಮಧುಸೂದನ್ ಸಿ. ವಿಶ್ವನಾಥ್ ಸಿ. ಸುರೇಶ್ ವಿ. ಆನಂದ, ಸುಜಾತ, ಪ್ರತಿಭಾ, ಸುನಂದ, ಲಕ್ಷ್ಮಮ್ಮ, ಸರ್ಕಾರದ ನಾಮ ನಿರ್ದೇಶಕರಾದ ಎಂ.ಶಿವಣ್ಣ, ಯಜಮಾನ ಸಿದ್ದೇಗೌಡ, ಮಾರ್ಗ ವಿಸ್ತರಣಾಧಿಕಾರಿ ನಾಗೇಂದ್ರ, ಪುರಸಭೆ ಮಾಜಿ ಸದಸ್ಯರಾದ ಪಿ.ಶಿವಣ್ಣ, ಯಶ್ವಂತ್ ಕುಮಾರ್, ಡೈರಿ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ಮಧು ಬಿ.ಗೌಡ, ಬೀರಶೆಟ್ಟಹಳ್ಳಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎನ್.ಸೋಮಶೇಖರ್, ಕುಂಟೆ ಕುಮಾರ್, ಫಿಶ್ ನಟರಾಜ್, ಮುಖಂಡರಾದ ಎಚ್.ಎನ್.ಮಂಜುನಾಥ್ ಸೇರಿದಂತೆ ಡೈರಿ ಪ್ರಭಾರ ಕಾರ್ಯದರ್ಶಿ ಗುರುಪ್ರಸಾದ್, ಹಾಲು ಪರೀಕ್ಷಕ ಅಖಿಲೇಶ್, ಸಹಾಯಕರಾದ ಹರ್ಷ ಪ್ರಶಾಂತ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ್ತೊಮ್ಮೆ ಮೇಲುಕೋಟೆ ಬರುತ್ತೇನೆ: ಡಾ.ನಾಗಲಕ್ಷ್ಮಿ ಚೌಧರಿ
ರೈತರ ಬಾಕಿ 50 ರು. ನೀಡದೆ ಕಬ್ಬು ಅರೆಯುವಿಕೆ ಆರಂಭ: ಆಕ್ರೋಶ