ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಂಕಷ್ಟದಲ್ಲಿರುವ ರೈತರ ಬದುಕಿಗೆ ಹೈನುಗಾರಿಕೆ ಆಶ್ರಯವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಐಕನಹಳ್ಳಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಏರ್ಪಡಿಸಿದ್ದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಮಾತನಾಡಿ, ಮಳೆ ಬಾರದೆ ಬರದಿಂದಾಗಿ ಕೃಷಿ ನಂಬಿದ ರೈತ ಅತಂತ್ರ ಸ್ಥಿತಿಯಲ್ಲಿದ್ದಾನೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ಎಂದರು.
ಹೈನುಗಾರಿಕೆ ಮೂಲ ಕಸುಬಾಗಿ ಸ್ವೀಕರಿಸಲು ರೈತರು ಮುಂದಾಗಬೇಕು. ದೇಶಿ ರಾಸುಗಳಿಗಿಂತ ಮಿಶ್ರತಳಿ ರಾಸುಗಳು ಹೆಚ್ಚು ಹಾಲು ನೀಡಲಿವೆ. ಇದರ ನಿರ್ವಹಣೆ ಅಷ್ಟೆ ಜಟಿಲ. ಕಾಲಕಾಲಕ್ಕೆ ರಾಸುಗಳ ಆರೈಕೆ, ಆರೋಗ್ಯ ತಪಾಸಣೆ, ಪೌಷ್ಟಿಕಾಂಶ ಆಹಾರ, ಮಿನರಲ್ಸ್ ನೀಡಿ ದೇಶಿ ತಳಿಗಿಂತ ಮಿಶ್ರ ತಳಿ ರಾಸು ಹೆಚ್ಚು ಹಾಲು ನೀಡಿದರೂ ಆರೈಕೆ ತುಂಬಾ ಸೂಕ್ಷ್ಮಎಂಬುದನ್ನು ಅರಿಯಬೇಕು ಎಂದರು.ಹಸು ಕರು ಹಾಕಿದ ನಂತರ ಡೇರಿಗಳಿಗೆ ಹಾಲು ಹಾಕದೆ ಮೊದಲು ಕರುಗಳಿಗೆ ಹೆಚ್ಚಿನ ಹಾಲುಣಿಸಿದರೆ ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮುಂದೆ ಹೆಚ್ಚು ಹಾಲು ಕೊಡಲು ಸಹಕಾರಿಯಾಗಲಿದೆ ಎಂದರು.
ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ 70 ಕರುಗಳು ಭಾಗವಹಿಸಿದ್ದವು. ಉತ್ತಮ 4 ಕರುಗಳ ಪಾಲಕರಿಗೆ ಹಾಲಿನ ಸಂಗ್ರಹಣೆ ಕ್ಯಾನ್‌ಗಳನ್ನು ಬಹುಮಾನ ನೀಡಲಾಯಿತು. ಭಾಗವಹಿಸಿದ್ದ ಎಲ್ಲ ಕರುಗಳ ಪಾಲಕರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಎಚ್.ಎಸ್. ದೇವರಾಜು, ಆಯ್ಕೆ ಸಮಿತಿ ವೈದ್ಯರಾದ ಡಾ.ಕೃಷ್ಣಮೂರ್ತಿ, ಡಾ.ರವಿಕುಮಾರ್, ಡಾ. ಸಂಜು, ಡಾ.ಬಿ.ಎನ್.ವಿನಯಕುಮಾರ್, ಸುಧಾ, ಡೈರಿ ಅಧ್ಯಕ್ಷ ಪುಟ್ಟೇಗೌಡ, ಗ್ರಾಪಂ ಸದಸ್ಯರಾದ ಸುಮಿತ್ರ ಶಂಭುಲಿಂಗಯ್ಯ, ಕುಮಾರಣ್ಣ, ಶಂಕರೇಗೌಡ, ದೇವೇಗೌಡ, ಶೇಖರ್, ರಾಮೇಗೌಡ, ಸಿಬ್ಬಂದಿ ನಾಗೇಶಕುಮಾರ್, ಸುಕುಮಾರ್, ಕಾಂತರಾಜು, ಚೇತನ್, ಮಂಜು, ಭೈರಾಜು ಉಪಸ್ಥಿತರಿದ್ದರು.