ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗುರುವಾರ ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಖುದ್ದು ರಾಘವೇಂದ್ರ ಸಂಸದರಾಗಿದ್ದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಂದಿಗೂ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ ಎಂಬುದನ್ನು ಮರೆತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಗಳಿಸಿ ಕೇವಲ 6-8 ತಿಂಗಳಾಗಿದ್ದು ಇದುವರೆಗೂ ಸಂಪೂರ್ಣ ಪೊಲೀಸ್ ಸ್ಟೇಷನ್ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಸಂಸದರು ಸಹಜ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ವರ್ಗವಾದಲ್ಲಿ ಯಡಿಯೂರಪ್ಪನವರಿಂದ ಒತ್ತಡದ ಮೂಲಕ ರದ್ದುಪಡಿಸುತ್ತಿರುವುದು ಸಹಜವಾಗಿದೆ ಎಂದರು.
ಇದೀಗ ಸುಶೀಲ ಎಂಬ ಅಮಾಯಕನಿಗೆ ಚೂರಿ ಇರಿತ ಪ್ರಕರಣದಲ್ಲಿ ಪೊಲೀಸ್ ಸ್ಟೇಷನ್ ಮುಂಭಾಗ ಧರಣಿ ನಡೆಸಿ ಹಿಂದೂ ಮುಸ್ಲಿಂ ಎಂದು ಪ್ರತ್ಯೇಕಿಸಿ ದ್ವೇಷದ ರಾಜಕಾರಣದಿಂದ ಚುನಾವಣೆ ಎದುರಿಸಲು ಎಲ್ಲ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದಾರೆ ಚೂರಿ ಇರಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ,ಸಿದ್ದರಾಮಯ್ಯನವರನ್ನು ಎಳೆದು ತರುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.ಚೂರಿ ಇರಿತದ ಪ್ರಕರಣ ಸಂಭವಿಸಿದ ಕೂಡಲೇ ಸಂಸದರು ಸ್ಥಳಕ್ಕೆ ಧಾವಿಸಿದಾಗ ಸಮ್ಮುಖದಲ್ಲಿ ನೆರೆದಿದ್ದವರು ಗಾಂಜಾ, ಅಫೀಮು ಘಟನೆಗೆ ಕಾರಣ ಎಂದು ಆರೋಪಿ ಸುತ್ತಿದ್ದು, ಈ ಜಾಲ ಹೆಚ್ಚಾಗಲು ಕಾರಣ ಯಾರು ಎಂಬ ಬಗ್ಗೆ ಪ್ರಶ್ನಿಸಿಕೊಳ್ಳುವಂತೆ ತಿಳಿಸಿದ ಅವರು 2015 ರ ಮೇ 13 ರಂದು ಕಾನೂರು ದುರ್ಗಮ್ಮನ ಕೇರಿಯಲ್ಲಿ ಕಿರಣ ಕುಮಾರ್ ಎಂಬ ಯುವಕನ ಹತ್ಯೆಯಾಗಿದ್ದು, 2021 ರ ಜ.1 ರಂದು ಆಶ್ರಯ ಬಡಾವಣೆಯಲ್ಲಿ ಗೋಪಿ ಎಂಬ ಯುವಕನ ಹತ್ಯೆಯಾಗಿದ್ದು ಇಂದಿಗೂ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ ಆ ಸಂದರ್ಭದಲ್ಲಿ ಇಲ್ಲದ ಪ್ರತಿಭಟನೆ ಧರಣಿ ಇಂದೇಕೆ? ಎಂದು ಪ್ರಶ್ನಿಸಿದರು.
ತರಲಘಟ್ಟ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಅನಾವಶ್ಯಕವಾಗಿ ಯುವಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಬಿಜೆಪಿ ಕಚೇರಿಗೆ,ಸಂಸದರ ಮನೆ ಕಡೆ ಹೋಗದವರು ಹಿಂದೂಗಳಲ್ಲ ಎಂಬ ರಾಜಕೀಯ ದೊಂಬರಾಟ ಹೆಚ್ಚು ಕಾಲ ನಡೆಯುವುದಿಲ್ಲ ಎಂದ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಿಂದೆ ಯಡಿಯೂರಪ್ಪನವರು ಜೈಲಿಗೆ ಹೋದಾಗ ಏಕೆ ಪ್ರತಿಭಟಿಸಲಿಲ್ಲ ? ಇದೀಗ ಜಾತಿ ಎಂಬ ಏಕೈಕ ಕಾರಣಕ್ಕೆ ರಾಘವೇಂದ್ರರನ್ನು ಪುನಃ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಹಾಕದಂತೆ ಮನವಿ ಮಾಡಿದರು.