ಹಿಂಜಾವೇ ಮುಖಂಡ ಮೊಬೈಲಲ್ಲಿ ಅಶ್ಲೀಲ ವಿಡಿಯೋ ಪತ್ತೆ : ಪ್ರಕರಣ

Published : Jul 06, 2025, 11:08 AM IST
Mobile

ಸಾರಾಂಶ

ಹಿಂದೂ ಜಾಗರಣ ವೇದಿಕೆಯ ಮುಖಂಡನೊಬ್ಬನ ಮೊಬೈಲ್ ಫೋನ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆ ಆಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಜು.2ರಂದು ಪ್ರಕರಣ

  ಮೂಡುಬಿದಿರೆ :  ಹಿಂದೂ ಜಾಗರಣ ವೇದಿಕೆಯ ಮುಖಂಡನೊಬ್ಬನ ಮೊಬೈಲ್ ಫೋನ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆ ಆಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಜು.2ರಂದು ಪ್ರಕರಣ ದಾಖಲಾಗಿದೆ. 2024ರಲ್ಲಿ ಮೂಡುಬಿದಿರೆ ತಾಲೂಕಿನ ಮಿಜಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದರು. 

ಈ ಪ್ರಕರಣದಲ್ಲಿ ಬಸ್ ಮಾಲೀಕನಿಗೆ ಒತ್ತಡ ಹಾಕಿ, ಹಿಂದೂ ಜಾಗರಣ ವೇದಿಕೆ ಮುಖಂಡ ₹5 ಲಕ್ಷ ಪರಿಹಾರ ತೆಗೆಸಿಕೊಟ್ಟಿದ್ದ ಎಂದು ಆರೋಪಿಸಲಾಗಿತ್ತು. ಇದೇ ವಿಚಾರವಾಗಿ ಖಾಸಗಿ ಬಸ್ ಮಾಲೀಕರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಹಿಂಜಾವೇ ಮುಖಂಡನನ್ನು ಜೂ.26ರಂದು ಬಂಧಿಸಲಾಗಿತ್ತು. ಈ ವೇಳೆ ಮೊಬೈಲ್‌ ದತ್ತಾಂಶಗಳನ್ನು ರಿಟ್ರೈವ್ ಮಾಡಿದಾಗ ಮಹಿಳೆಯೊಂದಿಗಿನ ಅಶ್ಲೀಲ ವಿಡಿಯೋಗಳು ಮತ್ತು ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾಗಿದ್ದ ಸುಮಾರು 40 ರಿಂದ 50 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಈ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ಆತನ ವಿರುದ್ಧ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

PREV
Read more Articles on

Recommended Stories

ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಖಂಡನೀಯ: ಬಿಜೆಪಿ ಆರೋಪ
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಸೈಂಟ್‌ ಅಲೋಶಿಯಸ್‌ ವಿವಿ ಒಪ್ಪಂದಕ್ಕೆ ಸಹಿ