ಮಂಗ್ಳೂರು ಶಾಲೇಲಿ ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್‌ ಬರ್ತ್‌ಡೇ ಆಚರಣೆ

Published : Jun 21, 2025, 09:14 AM IST
Birthday

ಸಾರಾಂಶ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಶಾಲೆ ಮಕ್ಕಳು ಮತ್ತು  ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳು ಹೊಸ ಬಟ್ಟೆ ಧರಿಸಿ, ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿದರು.

 ಬೆಂಗಳೂರು :  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲುರು ಸರಕಾರಿ ಶಾಲೆ ಮಕ್ಕಳು ಮತ್ತು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳು ಹೊಸ ಬಟ್ಟೆ ಧರಿಸಿ, ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಕುತ್ಲುರು ಶಾಲೆಗೆ ಕೆ.ವಿ.ಪ್ರಭಾಕರ್ ಅವರು ತಿಂಗಳ ಹಿಂದೆ ಭೇಟಿ ಕೊಟ್ಟಿದ್ದರು. ಈ ವೇಳೆ ಮಕ್ಕಳಿಗೆ ಸಮವಸ್ತ್ರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಲೆ ಆರಂಭದ ದಿನವೇ 100 ಸಮವಸ್ತ್ರ ಕಳುಹಿಸಿ ಕೊಟ್ಟಿದ್ದರು. ಕೆ.ವಿ.ಪ್ರಭಾಕರ್ ಅವರ ಹುಟ್ಟುಹಬ್ಬದ ದಿನವಾದ ಶುಕ್ರವಾರ ಶಾಲೆ ಮಕ್ಕಳು ಸಮವಸ್ತ್ರ ಧರಿಸಿ ಸಂಭ್ರಮಿಸಿದರು. ಶಾಲಾ ಮಕ್ಕಳು ವಿಡಿಯೋ ಕಾಲ್ ಮೂಲಕ ಕೆ.ವಿ.ಪ್ರಭಾಕರ್‌ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು.

ಇನ್ನು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಕೆ.ವಿ.ಪ್ರಭಾಕರ್ ಅವರು ಟೀವಿ, ವಾಟರ್ ಪ್ಯೂರಿಫೈರ್, ಮಕ್ಕಳಿಗೆ ಸಮವಸ್ತ್ರ, ಕೊಡೆಯನ್ನು ವೈಯಕ್ತಿಕವಾಗಿ ಕೊಡುಗೆಯಾಗಿ ನೀಡಿದ್ದಾರೆ. ಅಂಗನವಾಡಿ ಮಕ್ಕಳು ಕೇಕ್ ಕಟ್ ಮಾಡಿ ಸಿಹಿ ತಿಂಡಿ ಹಂಚಿ ಕೆ.ವಿ.ಪ್ರಭಾಕರ್ ಅವರ ಹುಟ್ಟುಹಬ್ಬ ಆಚರಿಸಿದರು. ಅಲ್ಲದೆ ಪ್ರಭಾಕರ್ ಅವರಿಗೆ ಶುಭ ಹಾರೈಸಿದರು. 

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ಕನ್ನಡ ಪುಸ್ತಕಗಳನ್ನು ಕೊಂಡು ಕೊಂಡಾಡಿ : ಹರಿಕೃಷ್ಣ ಪುನರೂರು