ಮೂಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ 4 ರಿಂದ 8ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು 4 ರಂದು ಬೆಳಿಗ್ಗೆ 8.30 ರಿಂದ ಋತ್ವಿಜರ ಸ್ವಾಗತ, ಮಹಾಪ್ರಾರ್ಥನೆ, ಅರಣಿ ಮಥನ, ದ್ವಾದಶ ನಾರಿಕೇಳ ಗಣಯಾಗ, ತೋರಣ ಮುಹೂರ್ತ ನಡೆಯಲಿದೆ. ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಲಿದ್ದಾರೆ. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅರ್ಚಕ ವಾಸುದೇವ ಭಟ್, ಸಸಿಹಿತ್ಲು ಕದಿಕೆ ಮೊಗವೀರ ಸಭಾದ ಅಧ್ಯಕ್ಷ ಗಿರೀಶ್ ಶ್ರಿಯಾನ್, ಲೀಲಾದರ ಬಂಗೇರ ಸಸಿಹಿತ್ಲು ಪಟೇಲರ ಮನೆ, ಸುರತ್ಕಲ್ ಎನ್ಐಟಿಕೆ ಪ್ರಾಧ್ಯಾಪಕ ಶ್ರೀಕಾಂತ್ ರಾವ್, ಮೋಹನ್ ಶೆಟ್ಟಿಗಾರ್ ಸಸಿಹಿತ್ಲು ಉಪಸ್ಥಿತರಿರುವರು.

ಹೊರೆ ಕಾಣಿಕೆ ಭವ್ಯ ಶೋಭಾ ಯಾತ್ರೆ

4ರಂದು ಬೆಳಿಗ್ಗೆ 9 ಗಂಟೆಗೆ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದಿಂದ ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರಕ್ಕೆ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೋತ್ಸವ ಭವ್ಯ ಶೋಭಾ ಯಾತ್ರೆ ನಡೆಯಲಿದ್ದು ಶೋಭಾ ಯಾತ್ರೆಯನ್ನು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದ ಯಾಜಿ ನಿರಂಜನ್ ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ, ಮುಕ್ಕ ಶ್ರೀ ಸತ್ಯ ಧರ್ಮ ದೇವಿ ದೇವಸ್ಥಾನದ ಗಣೇಶ್ ಐತಾಳ್, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಎಸ್ ಜಿ ಮಯ್ಯ, ಮಾಜಿ ಸಚಿವ ನಾಗರಾಜ ಶೆಟ್ಟಿ ಉಪಸ್ಥಿತರಿರುವರು. ಮಧ್ಯಾಹ್ನ ಕ್ಷೇತ್ರದಲ್ಲಿ ಅನ್ನಸಂತರ್ಪಣೆ, ಸಂಜೆ 4.30 ರಿಂದ ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೋಘ್ನ ಹೋಮ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮನ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೂಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತ ಅರಸರು ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ, ವಹಿಸಲಿದ್ದಾರೆ.ಒಡಿಯೂರು ದಕ್ಷಿಣ ಗಾಣಗಾಪುರ, ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಶರತ್ ಎನ್. ಸಾಲ್ಯಾನ್ ಮುಲ್ಕಿ, ಪ್ರಸಾದ್ ಶೆಟ್ಟಿ, ಆರ್ಯನ್ ಲಚ್ಚಿಲ್ ಸಸಿಹಿತ್ಲು, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂರ್ಯಕುಮಾರ್ ಹಳೆಯಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಪಡು ಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಕಲ್ಲಾಪು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಗುರಿಕಾರರಾದ ರತ್ನಾಕರ ಶೆಟ್ಟಿಗಾರ್, ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾದ ಕಿಶೋರ್ ಗುರಿಕಾರ, ಮೂಲ್ಕಿ ನಾಲ್ಕುಪಟ್ನ ಮೊಗವೀರ ಸಭಾದ ಅಧ್ಯಕ್ಷ ಚಂದ್ರಕಾಂತ್ ಕೆ. ಶ್ರೀಯಾನ್, ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಮಂಗಳೂರು ಶ್ರೀ ಭಗವತೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಮಾಧವ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಗುರಿಕಾರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ ಉಪಸ್ಥಿತರಿರುವರು.

ಸನ್ಮಾನ: ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಭಗವತೀ ಕ್ಷೇತ್ರದ ಕಾರ್ನವರು, ರವಿ ಯಾನೆ ಕಂಡಪ್ಪ ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು, ಮಂಗಲ್ಪಾಡಿ ಅಡ್ಕ, ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರಿಗೆ ವಿಶೇಷ ಗೌರವಾರ್ಪಣೆ, ಸಸಿಹಿತ್ಲುವಿನ ಸುಬ್ರಹ್ಮಣ್ಯ ಭಟ್, ಮೀನಾ ಹಾಗೂ ರಾಘು ಪೂಜಾರಿ ಸಸಿಹಿತ್ಲು ಅವರಿಗೆ ಗೌರವಾರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 4 ರಿಂದ ಕೇಳ ಸುಧಾಕರ ಮತ್ತು ಬಳಗ ಮಂಗಳಾದೇವಿ ಇವರಿಂದ ಸ್ಯಾಕ್ಟೋಫೋನ್ ವಾದನ, ರಾತ್ರಿ8 ರಿಂದ ಶ್ರೀ ಶಿರಿಡಿ ಸಾಯಿಬಾಬ ಮಂದಿರ ಆಶ್ರಿತ ಸಾಯಿ ಶಕ್ತಿ ಕಲಾಬಳಗ ಅರ್ಪಿಸುವ ತುಳು ಪೌರಾಣಿಕ ನಾಟಕ ಬೊಳ್ಳಿ ಮಲೆತ ಶಿವಶಕ್ತಿಲು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.