ಕೊಡಿಂಬಾಳ ರೈಲು ನಿಲ್ದಾಣಕ್ಕೆ ಸೀಮೆಎಣ್ಣೆ ದೀಪವೇ ಬೆಳಕು!

Published : Aug 29, 2025, 11:11 AM IST
kerosene

ಸಾರಾಂಶ

ದೀಪಾವಳಿಗೂ ಮೊದಲೇ ಪುತ್ತೂರು ತಾಲೂಕಿನ ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಚಿಮಣಿ ದೀಪಗಳನ್ನು ಬೆಳಗಲಾಗಿದೆ!

  ಮಂಗಳೂರು: ದೀಪಾವಳಿಗೂ ಮೊದಲೇ ಪುತ್ತೂರು ತಾಲೂಕಿನ ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಚಿಮಣಿ ದೀಪಗಳನ್ನು ಬೆಳಗಲಾಗಿದೆ!

ಗುರುವಾರ ಸುರಿದ ಭಾರಿ ಮಳೆಗೆ ರೈಲು ನಿಲ್ದಾಣದ ವಿದ್ಯುತ್ ಕೈಕೊಟ್ಟಿತ್ತು. ಇಲ್ಲಿ ಜನರೇಟರ್‌ನಂತಹ ಪರ್ಯಾಯ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಪವರ್ ಬ್ಯಾಕ್ ಅಪ್ ಕೂಡ ಮಾಡಲಾಗುತ್ತಿಲ್ಲ. 

ಇದರಿಂದಾಗಿ ಟಿಕೆಟ್ ಕೌಂಟರ್ ಮಾತ್ರವಲ್ಲ, ಫ್ಲಾಟ್ ಫಾರಂನಲ್ಲೂ ವಿದ್ಯುತ್ ಇಲ್ಲದೆ ಚಿಮಣಿ ದೀಪವನ್ನು ಉರಿಸಲಾಗಿದೆ. ಚಿಮಣಿ ದೀಪದ ಮಂದ ಬೆಳಕಿನಲ್ಲಿ ಪ್ರಯಾಣಿಕರು ಟಿಕೆಟ್ ಪಡೆದು ಫ್ಲಾಟ್ ಫಾರಂನಲ್ಲಿ ರೈಲಿಗೆ ಕಾಯುವ ಪರಿಸ್ಥಿತಿ ತಲೆದೋರಿತ್ತು.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಅಂಬಿಕಾ ಸಂಸ್ಥೆ ವಿದ್ಯಾರ್ಥಿಗಳಿಂದ ಶೃಂಗೇರಿ ಭೇಟಿ: ಶಾರದಾಮಾತೆ, ಗುರುದರ್ಶನ
ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ