15ರ ಬಾಲೆಯಿಂದ ಮಕ್ಕಳಿಗೆ ಒತ್ತಡ ನಿರ್ವಹಣೆ ತರಬೇತಿ!

Published : Sep 17, 2026, 11:09 AM IST
Girl

ಸಾರಾಂಶ

10ನೇ ತರಗತಿಯ ಬಾಲೆ, ಹೈಸ್ಕೂಲು ವಿದ್ಯಾರ್ಥಿಗಳ ಮಕ್ಕಳ ಮಾನಸಿಕ ಒತ್ತಡ, ಪರೀಕ್ಷಾ ಭಯ ನಿವಾರಣೆ ಕಾರ್ಯಾಗಾರ ನಡೆಸುತ್ತಾ 15 ದಿನಗಳಲ್ಲಿ ರಾಜ್ಯ ಸುತ್ತಿ ವಿವಿಧೆಡೆಯ 54 ಶಾಲೆಗಳ 45000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿಶ್ವದಾಖಲೆ ಬರೆದಿದ್ದಾಳೆ.

ಮೂಡುಬಿದಿರೆ : 10ನೇ ತರಗತಿಯ ಬಾಲೆ, ಹೈಸ್ಕೂಲು ವಿದ್ಯಾರ್ಥಿಗಳ ಮಕ್ಕಳ ಮಾನಸಿಕ ಒತ್ತಡ, ಪರೀಕ್ಷಾ ಭಯ ನಿವಾರಣೆ ಕಾರ್ಯಾಗಾರ ನಡೆಸುತ್ತಾ 15 ದಿನಗಳಲ್ಲಿ ರಾಜ್ಯ ಸುತ್ತಿ ವಿವಿಧೆಡೆಯ 54 ಶಾಲೆಗಳ 45000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿಶ್ವದಾಖಲೆ ಬರೆದಿದ್ದಾಳೆ.

ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ವಿಷ್ಣು ಪ್ರಿಯಾ

ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ವಿಷ್ಣು ಪ್ರಿಯಾ ದಾಖಲೆ ಬರೆದ ಬಾಲೆ. ಮೂಲತಃ ಬಂಟ್ವಾಳದ ಈಕೆ ಯಜಮಾನ ಇಂಡಸ್ಟ್ರೀಸ್‌ನ ವರದರಾಜ ಪೈ-ಸಂಧ್ಯಾ ವಿ.ಪೈ ದಂಪತಿ ಪುತ್ರಿ. 6ನೇ ತರಗತಿಯಲ್ಲಿದ್ದಾಗಲೇ ಆನ್‌ಲೈನ್‌ ಮೂಲಕ ಸೈಕೋ ಥೆರಪಿ ಕೋರ್ಸಿನ ಕಲಿಕೆ ಆರಂಭಿಸಿದ್ದಳು. 8ನೇ ತರಗತಿಗೆ ಬಂದಾಗ ಅವುಗಳ ಕುರಿತು ಸೆಷನ್ ನಡೆಸುವ ಹಂತಕ್ಕೆ ಬೆಳೆದಿದ್ದಳು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆ

ಕೋರ್ಸಿನ ಇಂಟರ್ನ್‌ಶಿಪ್‌ಗಾಗಿ ಕಾರ್ಯಾಗಾರ ನಡೆಸುತ್ತಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ನೆರವಾಗುವ ಆಲೋಚನೆ ಹೊಳೆದಿದೆ. 15 ದಿನಗಳ ಅಲ್ಪಾವಧಿಯಲ್ಲಿ ರಾಜ್ಯದ ಸರ್ಕಾರಿ, ಖಾಸಗಿ ಹೀಗೆ 54 ಶಾಲೆಗಳಲ್ಲಿ ತಲಾ ಒಂದು ಗಂಟೆ ಮಕ್ಕಳಲ್ಲಿ ಪರೀಕ್ಷಾ ಭಯ ಓಡಿಸುವ ತರಗತಿ ನಡೆಸಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆ ಬರೆದ್ದಾಳೆ.

ಕೆಲವೆಡೆ ಕೇವಲ 25 ಮಕ್ಕಳಿಂದ ಆರಂಭಿಸಿ ಗರಿಷ್ಠ 270 ಮಕ್ಕಳ ಸಮೂಹವನ್ನೂ ಉದ್ದೇಶಿಸಿ ವಿಷ್ಣು ಪ್ರಿಯಾ ಸೆಶನ್ ನಡೆಸಿದ್ದಾಳೆ

ವಿದ್ಯಾಸಂಸ್ಥೆಯ ಜತೆಗೆ ಹೆತ್ತವರು, ಶಿಕ್ಷರು. ವಿವಿಧ ರಂಗದ ತರಬೇತುದಾರರು ಅವಳಲ್ಲಿರುವ ಸಾಮರ್ಥ್ಯ ಅರ್ಥೈಸಿಕೊಂಡು ಅವಳ ಪ್ರತಿಭೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಪದವಿ ಶಿಕ್ಷಣದವರೆಗೂ ಈ ಪ್ರತಿಭೆಗೆ ಸ್ಪಷ್ಟ ರೂಪ ನೀಡಿ ಅನ್ಯರಿಗಿಂತ ಭಿನ್ನವಾಗಿರುವ ಆಕೆಯ ಪ್ರತಿಭೆಯ ಸಾಧನೆಯ ಅನಾವರಣವಾಗಬೇಕು. ಇದೊಂದು ದೀರ್ಘ ಹೋರಾಟ. ಆಳ್ವಾಸ್ ಎಂದಿಗೂ ಆಕೆಯ ಜತೆಗಿರುತ್ತದೆ.

-ಡಾ। ಎಂ.ಮೋಹನ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಮಿಥುನ್‌ ಆಗ್ರಹ
ಯುಎಇ ತುಂಬೆ ಮೆಡಿಸಿಟಿಗೆ ಕರ್ನಾಟಕ ಸಚಿವ ಕೆ.ಜೆ. ಜಾರ್ಜ್ ಭೇಟಿ